ಹೈದರಾಬಾದ್: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆ ನಡೆಸಿ, ದೇಶದ ಸಂಪತ್ತು ಮರು ಹಂಚಿಕೆ ಬಗ್ಗೆ ಗಂಭೀರ ಅಧ್ಯಯನ ಕೈಗೊಳ್ಳಲಾಗುವುದು ಎಂದು ರಾಹುಲ್ ಗಾಂಧಿ ತಿಳಿಸಿದರು.
ರಂಗಾರೆಡ್ಡಿ ಜಿಲ್ಲೆಯಲ್ಲಿ ಚುನಾವಣಾ ಕಾರ‍್ಯಕ್ರಮದಲ್ಲಿ ಅವರು ಈ ಭರವಸೆ ನೀಡಿದ್ದಾರೆ. ‘‘ದೇಶಾದ್ಯಂತ ಜಾತಿ ಗಣತಿ ನಡೆಸುವುದಷ್ಟೇ ಅಲ್ಲದೇ ಅದರ ಜತೆಗೆ ಈ ಸಮೀಕ್ಷೆಯನ್ನೂ ನಡೆಸಲಾಗುವುದು,’’ ಎಂದು ಹೇಳಿದ್ದಾರೆ.
‘‘ಮೊದಲಿಗೆ ನಾವು ಒಬಿಸಿ, ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಅರಿಯಲು ಜಾತಿಗಣತಿ ಕೈಗೊಳ್ಳುತ್ತೇವೆ. ನಂತರ ದೇಶದಲ್ಲಿರುವ ಸ್ವತ್ತುಗಳ ಮರು ಹಂಚಿಕೆ ಸಂಬಂಧ ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆ ನಡೆಸುತ್ತೇವೆ,’’ ಎಂದು ರಾಹುಲ್ ಘೋಷಿಸಿದ್ದಾರೆ.
ಕರ್ನಾಟಕದ ಗೃಹ ಲಕ್ಷ್ಮಿ, ಉಚಿತ ಬಸ್ ಪ್ರಯಾಣ ‘ಶಕ್ತಿ’ ಯೋಜನೆಯಾಗಲೀ, 500 ರೂ. ಗ್ಯಾಸ್ ಸಿಲಿಂಡರ್, 200 ಯೂನಿಟ್‌ವರೆಗಿನ ಉಚಿತ ವಿದ್ಯುತ್… ಇವೆಲ್ಲವೂ ಜನರೇ ಸೂಚಿಸಿದ್ದು. ಲೋಕಸಭೆ ಚುನಾವಣೆಗೆ ಪಕ್ಷ ರೂಪಿಸಿರುವ ಪ್ರಣಾಳಿಕೆ ಬಗ್ಗೆ ಇ- ಮೇಲ್, ಎಸ್‌ಎಂಎಸ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ,’’ ಎಂದು ವಿಡಿಯೋದಲ್ಲಿ ಕೋರಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿಗಳ ಮೂಲಕ ಸದ್ದು ಮಾಡಿರುವ ಪಕ್ಷದ ಪ್ರಣಾಳಿಕೆ ಬಗ್ಗೆ ಇ-ಮೇಲ್, ಎಸ್‌ಎಂಎಸ್‌ಗಳ ಮೂಲಕ ಅಭಿಪ್ರಾಯ ತಿಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಪಕ್ಷ ಆಯೋಜಿಸಿದ್ದ ‘ಜನ ಜಾತ್ರಾ ಸಭೆ’ಯಲ್ಲಿ ಭಾಗಿಯಾಗಿ ಹೊಸದಿಲ್ಲಿಗೆ ಮರಳಿದ್ದೇನೆ. ನಾವು ಕೊಟ್ಟಿರುವ ಗ್ಯಾರಂಟಿಗಳು, ಜನರ ಗ್ಯಾರಂಟಿಗಳೇ ಹೊರತು ಅದು ಪಕ್ಷದ್ದಲ್ಲ.
ನಾನು ಈ ವಿಡಿಯೋವನ್ನು ಶನಿವಾರ ರಾತ್ರಿ 12.30ರ ಸುಮಾರಿಗೆ ಮಾಡಿದ್ದೆ. ಆದರೆ ನನ್ನ ತಂಡವು ಅದನ್ನು ಅಪ್‌ಲೋಡ್ ಮಾಡಲು ವಿಳಂಬ ಮಾಡಿದ್ದರಿಂದ ನಾನು ಈಗ ಅದನ್ನು ಪೋಸ್ಟ್ ಮಾಡಿದ್ದೇನೆ. ಅದೇನೇ ಇರಲಿ, ಕಾಂಗ್ರೆಸ್ ಪ್ರಣಾಳಿಕೆಯು ಭಾರತದ ಧ್ವನಿಯಾಗಿದೆ. ನಿಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಿ,’’ ಎಂದು ರಾಹುಲ್ ಮನವಿ ಮಾಡಿದ್ದು ಬೆಳಕಿಗೆ ಬಂದಿದೆ.