ಬೆಂಗಳೂರು: ಹಬ್ಬದ ದಿನವೂ ನಮ್ಮ ರಾಜಕಾರಣಿಗಳೆಲ್ಲ ಬ್ಯೂಸಿ ಮಾರಾಯ್ರೇ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮುಂದೆ ನೂರಾರು ಕಾರ್ಯಕರ್ತರು ಮುಖಂಡರು ಬೆಳಗಿನ ಸಮಯದಲ್ಲೇ ಜಮಾಯಿಸಿಬಿಟ್ಟಿದ್ದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ವಿರೋಧ ಪಕ್ಷಗಳಿಗೆ ಮತದಾರರ ಒಲವು ಗಳಿಸಲು ಯಾವುದೇ ವಿಷಯವಿರದ ಕಾರಣ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಜನ ಕಾಂಗ್ರೆಸ್ ಪಕ್ಷವನ್ನು ಅರಿಸಿ ಶಕ್ತಿ ನೀಡಿದ್ದಾರೆ ಮತ್ತು ತಮ್ಮ ಸರ್ಕಾರ ಅವರಲ್ಲಿ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದೆ,
ರಾಜ್ಯದಲ್ಲಿ ಎರಡು ದಿನಗಳ ಮಟ್ಟಿಗೆ ಚುನಾವಣಾ ಪ್ರಚಾರಕ್ಕೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಬರಲಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ನಿನ್ನೆ ಸಿದ್ದರಾಮಯ್ಯ ಅವರ ಱಲಿಯಲ್ಲಿ ವ್ಯಕ್ತಿಯೊಬ್ಬ ಗನ್ ಇಟ್ಟುಕೊಂಡು ಸಿಎಂ ಇದ್ದ ವಾಹನ ಹತ್ತಿದ್ದ ವಿಷಯ ಡಿಸಿಎಂಗೆ ಗೊತ್ತೇ ಇರಲಿಲ್ಲ. ಕುಮಾರಸ್ವಾಮಿಯರು ಕೇಂದ್ರದಲ್ಲಿ ಕೃಷಿ ಸಚಿವನಾಗುವ ಬಗ್ಗೆ ಹೇಳಿರುವುದನ್ನು ಗೇಲಿ ಮಾಡಿದ ಶಿವಕುಮಾರ್ ಕನಸು ಕಾಣುವುದರಲ್ಲಿ ತಪ್ಪಿಲ್ಲ ಅದರೆ, ಎನ್ ಡಿಎ ಅಧಿಕಾರಕ್ಕೆ ಬಂದರೆ ತಾನೆ ಅವರ ಕನಸು ನನಸಾಗೋದು ಎಂದರು.