ಬಾಗಲಕೋಟೆ
ಎರಡು ಭಾರಿ ದೇಶದ ಚುಕ್ಕಾಣಿ ಹಿಡಿದು ಭಾರತ ದೇಶವನ್ನು ಜಗತ್ತಿನಲ್ಲಿ ಬೆಳಗಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದು ಮಾಜಿ ಶಾಸಕ ಡಾ. ವೀರಣ್ಣ ಸಿ. ಚರಂತಿಮಠ ಭವಿಷ್ಯ ನುಡಿದರು.
ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಐಹೊಳೆ, ಕಳ್ಳಿಗುಡ್ಡ, ನಿಂಬಲಗುಂದಿ, ಮುಳ್ಳೂರ, ಹೂವಿನಹಳ್ಳಿ,ರಾಮಥಾಳಲ್ಲಿ ಶುಕ್ರವಾರ ಸಂಜೆ ನಡೆದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರವಾಗಿ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಆರ್ಥಿಕವಾಗಿ 11ನೇ ಸ್ಥಾನದಲ್ಲಿದ್ದ ಭಾರತವು 5ನೇ ಸ್ಥಾನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ 3ನೇ ಸ್ಥಾನಕ್ಕೆ ಭಾರತ ಬರಲಿದೆ. ರೈಲ್ವೆ, ಸಾರಿಗೆ ಸೌಕರ್ಯ ಹೆಚ್ಚಾಗಿವೆ. ರಾಮಮಂದಿರ ನಿರ್ಮಾಣವಾಗಿದೆ, ಗ್ಯಾಸ್ ಸೌಲಭ್ಯ, ಜನಧನ ಖಾತೆಯ ಮೂಲಕ ಸರ್ಕಾರದ ಸೌಲಭ್ಯಗಳು ನೇರವಾಗಿ ಜನರ ಖಾತೆಗೆ ಹಣ ಜಮಾ ಆಗುತ್ತಿದೆ ಇದರಿಂದ ದಲ್ಲಾಳಿಗಳಿಗೆ ಕಡಿವಾಣ ಹಾಕಲಾಗಿದೆ ಎಂದರು.
ದೇಶದ ಭದ್ರತೆ ಹಾಗೂ ದೇಶದ ಉಳಿವಿಗೆ ಬಿಜೆಪಿ ಹಾಗೂ ಮೋದಿ ಅವಶ್ಯವಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ದೇಶದ ಭದ್ರತೆಯು ಅಷ್ಟೆ ಮುಖ್ಯವಾಗಿದ್ದು, ಇದು ದೇಶದ ಚುನಾವಣೆಯಾಗಿದ್ದರಿಂದ ದೇಶಕ್ಕಾಗಿ ಬಿಜೆಪಿಗೆ ಮತ ನೀಡಿ, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸೋಣ ಎಂದರು.
ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಸರಕಾರದಲ್ಲಿನ ಕಾಮಗಾರಿಗಳೆ ಮುಂದುವರೆದಿದ್ದು,ಈ ಕಾಂಗ್ರೇಸ್ಸ ಸರ್ಕಾರದಿಂದ ಒಂದೆ ಒಂದು ಹೋಸ ಕಾಮಗಾರಿಯಾಗಿಲ್ಲಾ,ಬಿಜೆಪಿ ಅವಧಿಯಲ್ಲಿ ವಿದ್ಯುತ ಕೋರತೆ ಇರಲಿಲ್ಲ,ಕಾಂಗ್ರೇಸ್ಸ ಸರಕಾರದಲ್ಲಿ ವಿದ್ಯುತ ಅಭಾವ ಎದುರಿಸುವಂತೆಯಾಗಿದೆ,
ಲೋಕ ಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೇಸ್ಸ್ ಸರಕಾರ ಉಳಿಯುವುದು ಕಷ್ಟ ಎಂದರು.
ಗ್ರಾಮದ ಮುಖಂಡರಾದ ರಾಮಣ್ಣ ಕುರಿ ಮಾತನಾಡಿ 10 ವರ್ಷದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಆಗಿದೆ.ದೇಶದ ಉಜ್ವಲ ಭವಿಷ್ಯಕ್ಕಾಗಿ ಮೋದಿ ಪ್ರಧಾನಿಯಾಗಭೇಕು ಆ ನಿಟ್ಟಿನಲ್ಲಿ ದೇಶಕ್ಕಾಗಿ ದುಡಿಯುವ ಮೋದಿಗೆ ನಮ್ಮ ಮತ ನೀಡಿ ಅವರ ಕೈ ಬಲಪಡಿಸಬೇಕು ಎಂದರು.
ಇನ್ನೋರ್ವ ಮುಖಂಡ ಸಿದ್ದು ನಿಂಬಲಗುಂದಿ ಮಾತನಾಡಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಿಂದ ಭಾರತದ ಚಿತ್ರಣ ಬದಲಾಗಿದೆ,ಪ್ರಧಾನಿ ನರೇಂದ್ರ ಮೋದಿಯಿಂದಾಗಿ ಭಾರತವನ್ನು ವಿದೇಶಿಯರು ಗೌರವಿಸುತ್ತಿದೆ.ರಾಜ್ಯ ಸರ್ಕಾರದ ಬಿಟ್ಟಿ ಭಾಗ್ಯಕ್ಕೆ ಮರಳಾಗದ ಮೋದಿಗೆ ಮತ ನೀಡಿ ಎಂದರು.
ಪರಶುರಾಮ ಗೋಡಿ,ಸಂಗಣ್ಣ ಕಲಾದಗಿ,ರಾಜು ಮುದೇನೂರ, ಸುರೇಶ ಕೊನ್ನೂರ, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಾಗವತಿ, ಗಂಗಾಧರ್ ಕ್ಯಾದಿಗ್ಗೇರಿ,
ಪರಸಪ್ಪ ಮಾದರ, ರಮೇಶ ಪತ್ತಾರ, ಬುಡ್ಡಪ್ಪ ಮಜ್ಜಗಿ,ಲಕ್ಷ್ಮಣ ತಳವಾರ,ಪರಶುರಾಮ ಕಬ್ಬಲಗಿ, ನಾಗರಾಜ ರೇವಡಿ ಹಾಗೂ ಕಳ್ಳಿಗುಡ್ಡದ ಬಸವಂತಪ್ಪ ದೇವರು.ಸುನೀಲ ಶಿರೂರ.ಬಸಪ್ಪ ಮಂಡಿ.
ಮಹಾಂತೇಶ ಮಾದರ. ರಾಜಪ್ಪ ಶಿರೂರ. ಬಸಪ್ಪ ಪೂಜಾರಿ.ಮುತ್ತಣ್ಣ ಸೀಮಿಕೇರಿ.ಪ್ರಕಾಶ ಎಮ್ಮಿ.ಮಹೇಶ ಹೋರಕೇರಿ
ನೀಲಪ್ಪ ಹೋರಕೇರಿ.ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು.