ಶಿವಮೊಗ್ಗ: ಚುನಾವಣಾ ಪ್ರಚಾರದ ನಡುವೆ ಇಂದು ನಗರದಲ್ಲಿ ಸುದಿಗೋಷ್ಟಿ ನಡೆಸಿ ಮಾತಾಡಿದ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ, ಸಂವಿಧಾನ ಮತ್ತು ಆರೆಸ್ಸೆಸ್ ಬಗ್ಗೆ ಮಾತಾಡುವುದನ್ನು ನಿಲ್ಲಿಸಿ ತಾವು ಘೋಷಿಸಿಕೊಂಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ತಾಕೀತು ಮಾಡಿದರು ಎಂದು ಮಾಹಿತಿ ತಿಳಿದು ಬಂದಿದೆ.
ಸಂವಿಧಾನದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಖುದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಬಂದು ತಿದ್ದುಪಡಿ ಮಾಡಿ ಅಂತ ಹೇಳಿದರೂ ಬಿಜೆಪಿ ಮಾಡಲ್ಲ ಅಂತ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ, ಕಾಂಗ್ರೆಸ್ ನಾಯಕರು ಈ ವಿಷಯದ ಬಗ್ಗೆ ಮಾತಾಡುವುದನ್ನು ನಿಲ್ಲಿಸಲಿ ಎಂದು ಈಶ್ವರಪ್ಪ ಹೇಳಿದರು.
ಆರೆಸ್ಸೆಸ್ ಬಗ್ಗೆ ಮಾತಾಡದೆ ಹೋದರೆ ತಿಂದಿದ್ದು ಅವರಿಗೆ ಜೀರ್ಣವಾಗಲ್ಲ ಅನಿಸುತ್ತದೆ ಅಥವಾ ಆರೆಸ್ಸೆಸ್ ಸಂವಿಧಾನವನ್ನು ಬದಲಿಸಲು ಹೊರಟಿದೆ ಅಂತ ಸುಳ್ಳು ಹೇಳಿದರೆ ತಮಗೆ ವೋಟು ಸಿಗುತ್ತವೆ ಎಂಬ ಭ್ರಮೆಯಲ್ಲಿ ಅವರಿದ್ದರೆ, ಅದರಿಂದ ಹೊರಬರಲಿ ಎಂದು ಈಶ್ವರಪ್ಪ ಹೇಳಿದರು.