ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಗ್ರಾಪಂ ವ್ಯಾಪ್ತಿಯ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ, ವಲಸೇ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಕೆಎಚ್‌ಪಿಟಿ ತಂಡ ಹಾಗೂ ತಾಪಂ ಇಒ ತಾರಾ.ಎನ್, ಸಹಾಯಕ ನಿರ್ದೇಶಕ ಮಹಾಂತೇಶ ಕೋಟಿ ಸಸಿಗೆ ನೀರುಣಿಸಿ ಅಭಿಮಾನಕ್ಕೆ ಚಾಲನೆ ನೀಡಿದರು.
ಶಿಬಿರದಲ್ಲಿ ರಾಜ್ಯ ಕೆಎಚ್‌ಪಿಟಿ ತಂಡ ಸಿಬ್ಬಂದಿ ಆರೋಗ್ಯ ತಪಾಸಣಾ ಶಿಬಿರದ ಮಹತ್ವ, ಕೂಲಿ ಕಾರ್ಮಿಕರ ಆರೋಗ್ಯದ ಬಗ್ಗೆ ತಿಳಿಸಿದರು. ಜತೆಗೆ ಮತದಾನದ ಬಗ್ಗೆ ಅರಿವು ಮೂಡಿಸಿದರು.
ತಾಪಂ ಇಒ ತಾರಾ.ಎನ್., ಮತದಾನದ ಕುರಿತು ಜಾಗೃತಿ ಮೂಡಿಸಿದರು. ನರೇಗಾ ಯೋಜನೆಯಡಿ ಸಿಗುತ್ತಿರುವ ಸೌಲಭ್ಯ, ಗುಳೆ ಹೋಗದಿರಲು ತಿಳಿಸಿದರು. ಬಳಿಕ ಮತದಾರರ ಪ್ರತಿಜ್ಞಾವಿ ಬೋಸಿದರು. ಶಿಬಿರದಲ್ಲಿ ಕೂಲಿ ಕಾರ್ಮಿಕರಿಗೆ ಬಿಪಿ, ಶುಗರ್ ಸೇರಿದಂತೆ ಹಲವು ಆರೋಗ್ಯ ತಪಾಸಣೆಯನ್ನು ಸಿಬ್ಬಂದಿ ನಡೆಸಿದರು.
ರಾಜ್ಯ ಕೆಎಚ್‌ಪಿಟಿ ತಂಡ, ತಾಪಂ ಸಹಾಯಕ ನಿರ್ದೇಶಕ ಮಹಾಂತೇಶ ಕೋಟಿ, ಪಿಡಿಒ ಮಹಾಂತೇಶ ಗೋಡಿ, ತಾಂತ್ರಿಕ ಸಹಾಯಕ ನವೀನ ಹಂಚಾಟೆ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣಾಜಿ ಪವಾರ್, ಬಿಎಫ್‌ಟಿ ರಾಜು ವಾಲಿಕಾರ, ಕಾಯಕ ಮಿತ್ರ ಸುಮಂಗಲಾ ಐಹೊಳೆ, ಆರೋಗ್ಯ ಇಲಾಖೆ ಅಕಾರಿಗಳು, ಗ್ರಾಪಂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕಾಯಕ ಬಂಧುಗಳು ಇದ್ದರು.