ಬಾಗಲಕೋಟೆ
ನಗರದ ಬವಿವ ಸಂಘದ ನಾನಾ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದು ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸಂಘದಿAದ ಗೌರವಿಸಿ ಸನ್ಮಾನಿಸಲಾಯಿತು.
ವಿದ್ಯಾಗಿರಿಯ ಬವಿವಿ ಸಂಘದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅನಿಸಾ ನದಾಫ್ ಕಲಾ ವಿಭಾಗದಲ್ಲಿ ೫೯೦ ಅಂಕ ಪಡೆದು ರಾಜ್ಯಕ್ಕೆ ೭ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಪ್ರವೀಣ ಕೊಲ್ಕಾರ ವಿಜ್ಞಾನ ವಿಭಾಗದಲ್ಲಿ ೫೯೦ ಅಂಕ ಪಡೆದು ರಾಜ್ಯಕ್ಕೆ ೯ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ೨ನೇ ಸ್ಥಾನ ಪಡೆದುಕೊಂಡಿದ್ದಾನೆೆ.
ವಿದ್ಯಾಗಿರಿಯ ಕಾಲೇಜಿನ ಫಲಿತಾಂಶ ಶೇ.೯೯ ರಷ್ಟಾಗಿದೆ. ವಿಜ್ಞಾನ ವಿಭಾಗದಿಂದ ೨೩೫, ಕಲಾ ವಿಭಾಗದಿಂದ ೬೦, ವಾಣಿಜ್ಯ ವಿಭಾಗದಿಂದ ೬೦ ವಿದ್ಯಾರ್ಥಿಗಳು ಸೇರಿ ೩೫೫ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕನ್ನಡ ೧೦, ಅರ್ಥಶಾಸ್ತ್ರ ೧೦, ಜೀವಶಾಸ್ತ್ರ ೧೨, ಗಣಿತ ೮, ಗಣಕವಿಜ್ಞಾನ ೬, ವ್ಯವಹಾರ ಅಧ್ಯಯನ ೪, ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ ಹಾಗೂ ಶಿಕ್ಷಣಶಾಸ್ತ್ರ ವಿ?Àಯಗಳಲ್ಲಿ ತಲಾ ಒಬ್ಬ ವಿದ್ಯಾರ್ಥಿ ನೂರಕ್ಕೆ ನೂರರಷ್ಟು ಅಂಕ ಪಡೆದುಕೊಂಡಿದ್ದಾರೆ.
ರಾಜ್ಯ ಹಾಗೂ ಜಿಲ್ಲೆಗೆ ಉತ್ತಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಕಾಲೇಜಿನ ಫಲಿತಾಂಶ ಹೆಮ್ಮೆ ಪಡುವಂತಾಗಿದ್ದು, ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಸಮಾಜಕ್ಕೆ ಮಾದರಿಯಾಗುವಂತಾಗಲಿ ಎಂದು ಹೇಳಿದರು.
ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಆಡಳಿತಾಕಾರಿ ಡಾ.ವಿ.ಎಸ್.ಕಟಗಿಹಳ್ಳಿಮಠ, ಡಾ.ಎಸ್.ಎಂ.ಗಾAವಕರ, ಪ್ರಾಚಾರ್ಯ ಪ್ರೊ.ಎಸ್.ಎಚ್.ವಟವಟಿ, ಉಪನ್ಯಾಸಕರು ಹಾಗೂ ಸಿಬ್ಬಂದಿ ಇದ್ದರು.