ರಾಯಚೂರು: ವಿಧಾನಸಭಾ ಚುನಾವಣೆಗೆ ಮೊದಲು ಸಿದ್ದರಾಮಯ್ಯ ‘ಹತ್ತು ಕೇಜಿ’ ಕೊಡುತ್ತೇನೆ ಅಂದಿದ್ದರು, ಯಾರಿಗಾದರೂ ಸಿಕ್ಕಿತಾ? ಅಂತ ಪ್ರಶ್ನಿಸಿದ ಯತ್ನಾಳ್;
ಅಕ್ಕಿ ಬದಲು ಅವರು ಕೊಡುತ್ತಿರುವ ಹಣ ಅಬ್ಕಾರಿ ಇಲಾಖೆ ಮೂಲಕ ವಾಪಸ್ಸು ಸರ್ಕಾರದ ಖಜಾನೆಗೆ ಹೋಗುತ್ತಿದೆ, ಯಾಕೆಂದರೆ ಆ ಹಣವನ್ನು ಮನೆಯ ಗಂಡಸರು ಮದ್ಯಸೇವನೆಗೆ ಖರ್ಚು ಮಾಡುತ್ತಿದ್ದಾರೆ ಎಂದರು.
ಜಿಲ್ಲೆಯ ಲಿಂಗಸೂಗೂರುನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಗೇಲಿ ಮಾಡಿದರು.
ಸಿದ್ದರಾಮಯ್ಯ ಸರ್ಕಾರ ತೆರಿಗೆ ಮೂಲಕ ಸಂಗ್ರಹವಾಗುವ ಹಣವನ್ನೆಲ್ಲ ಗ್ಯಾರಂಟಿ ಯೋಜನೆಗಳ ಮೇಲೆ ಸುರಿಯುತ್ತಿರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಯತ್ನಾಳ್ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲ ಭಾರತೀಯರಿಗೆ 32 ರೂ./ಕೇಜಿ ಅಕ್ಕಿ ಸಿಗುವ ಯೋಜನೆ ಜಾರಿ ಮಾಡಿದ್ದು ಅದರಿಂದ ಕೋಟ್ಯಾಂತರ ಜನಕ್ಕೆ ಸಹಾಯವಾಗುತ್ತಿದೆ ಎಂದು ಯತ್ನಾಳ್ ಹೇಳಿದರು.