ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮೈಸೂರು ಪೇಟ ತೊಡಿಸಿ ಬರಪರಿಹಾರ ಕೇಳಿದ್ದು, ಬಳಿಕ ಸುಪ್ರೀಂ ಕೋರ್ಟ್ ನಲ್ಲಿ ಮಾಡಿದ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸುಪ್ರೀಂ ಕೋರ್ಟ್ ನಲ್ಲಿ ನಡೆದ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದರು.
ಕೇಂದ್ರದ ಅನ್ಯಾಯ ವಿರುದ್ಧ ನಮಗೆ ಜಯ ಸಿಕ್ಕಿದ್ದು, ಬರ ಪರಿಹಾರ ನೀಡದ ನಿಮಗೆ ವೋಟು ಕೇಳುವ ಹಕ್ಕಿಲ್ಲ. ಪರಿಹಾರ ವಿಚಾರವಾಗಿ ಒಂದು ವಾರದಲ್ಲಿ ನಿರ್ಧಾರ ಮಾಡ್ತೇವೆ ಅಂದಿದ್ದಾರೆ. ನಿಮಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇದ್ಯಾ? ಕಾಳಜಿ ಇದ್ದರೆ ತಕ್ಷಣ ಹಣವನ್ನು ಬಿಡುಗಡೆ ಮಾಡಿ ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ದ್ವೇಷದ ರಾಜಕೀಯ ಮಾಡ್ತಿದ್ದು, ಪ್ರಧಾನಿ ಹಾಗೂ ಅಮಿತ್ ಶಾ ಅವರು ರಾಜ್ಯ ರೈತರಿಗೆ ಕೊಡಬೇಕಾದ ಬರ ಪರಿಹಾರ ಕೊಡಲಿಲ್ಲ. ಹೀಗಾಗಿ ಕರ್ನಾಟಕ ನೆಲಕ್ಕೆ ಕಾಲಿಡಲು ಮೋದಿ ಶಾಗೆ ನೈತಿಕತೆ ಇಲ್ಲ ಎಂದರು.
ಕರ್ನಾಟಕದ ಜನರ ಮೇಲೆ ನಡೆದ ಅನ್ಯಾಯವಾಗಿದೆ. ಭದ್ರಾ ಡ್ಯಾಂ, ಪೆರಿಫೆಲರ್ ಅನುದಾನ ಸಿಕ್ಕಿಲ್ಲ, ಈ ಕಾರಣಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.
ನಿಮ್ಮ ಹಣ ನಾವು ಒಂದು ಪೈಸೆ ಇಟ್ಟುಕೊಳ್ಳಲ್ಲ. ಎಲ್ಲಾ ಹಣವನ್ನು ರೈತರ ಅಕೌಂಟಿಗೆ ಹಾಕುತ್ತೇವೆ. ತಕ್ಷಣ ಬರಪರಿಹಾರವನ್ನ ಬಿಡುಗಡೆ ಮಾಡಿ ಎಂದು ಕೇಂದ್ರಕ್ಕೆ ಕೃಷ್ಣಬೈರೇಗೌಡ ಆಗ್ರಹಿಸಿದರು.