ಚಿತ್ರದುರ್ಗ: ಮೋದಿಗೆ ಕರ್ನಾಟಕ ನೆನಪಾಗೋದು ಚುನಾವಣಾ ಸಮಯದಲ್ಲಿ ಮಾತ್ರ. ವಿಧಾನಸಭೆ ಮತ್ತು ಲೋಕಸಭಾ ಚುನಾವಣಾ ಸಮಯದಲ್ಲಿ ಮಾತ್ರ ಬಂದಿದ್ದರು. ಪ್ರವಾಹ ಬಂದಾಗ ಬರಗಾಲ ಬಂದಾಗಲೂ ಸಹ ಮೋದಿ ಬಂದು ಕರ್ನಾಟಕ ಜನರ ಕಷ್ಟ ಕೇಳಿಲ್ಲ. ನರೇಂದ್ರ ಮೋದಿ ಅಲೆ ಎಲ್ಲಿಯೂ ಇಲ್ಲ. ಯಾಕೆ ಅಂದ್ರೆ ಅವರು ಹೇಳುವ ಸುಳ್ಳು ಜನರಿಗೆ ಅರ್ಥ ಆಗಿದೆ. ಕರ್ನಾಟಕದಲ್ಲಿ ಅಲೆ ಇರೋದು ಗ್ಯಾರಂಟಿ ಅಲೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಈಗಾಗಲೇ ಏ.ರಂದು ಚಿತ್ರದುರ್ಗಕ್ಕೆ ಬಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಪರ ಮತಯಾಚನೆ ಮಾಡಿದ್ದೆ. ಈಗ ಪ್ರಿಯಾಂಕಾ ಗಾಂಧಿಯವರು ನಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಬಂದಿದ್ದಾರೆ. ಅವರಿಗೆ ಕರ್ನಾಟಕ ಜನತೆ ಪರವಾಗಿ ನಾನು ಸ್ವಾಗತ ಮಾಡ್ತೀನಿ. ಈ ತಿಂಗಳ 26ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಪ್ರವಾಹ ಬಂದಾಗ, ಬರಗಾಲ ಬಂದಾಗಲೂ ಸಹ ಮೋದಿ ಬಂದು ರಾಜ್ಯದ ಜನರ ಕಷ್ಟ ಕೇಳಿಲ್ಲ. ಮೋದಿನೂ ಬಂದಿಲ್ಲ, ಅಮಿತ್ ಶಾ ಸಹ ಬಂದಿರಲ್ಲ. ಈಗ ಚುನಾವಣಾ ಅಂತ ಬರ್ತಿದ್ದಾರೆ. ನರೇಂದ್ರ ಮೋದಿ ಅಲೆ ಎಲ್ಲಿಯೂ ಇಲ್ಲ. ಯಾಕೆ ಅಂದ್ರೆ ಅವರು ಹೇಳುವ ಸುಳ್ಳು ಜನರಿಗೆ ಅರ್ಥ ಆಗಿದೆ. ಕರ್ನಾಟಕದಲ್ಲಿ ಅಲೆ ಇರೋದು ಗ್ಯಾರಂಟಿ ಅಲೆ. 2013ರಿಂದ 2108ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನ ನಾವು 165 ರಲ್ಲಿ 158 ಈಡಿರಿಸಿದ್ದೇವೆ ಎಂದು ಹೇಳಿದರು.
ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಬಿಜೆಪಿ ಪ್ರಣಾಳಿಕೆ ಕೊಟ್ಟ ಭರವಸೆ ಈಡಿರಿಸಿಲ್ಲ. 600 ಭರವಸೆಯಲ್ಲಿ 60 ಸಹ ಈಡಿರಿಸಿಲ್ಲ. ವಿದೇಶದಲ್ಲಿ ಕಪ್ಪು ಹಣ ತಂದು 100 ದಿನಗಳಲ್ಲಿ ಎಲ್ಲಾ ಅಕೌಂಟ್ ಗೆ ಜಮಾ ಮಾಡ್ತೀನಿ ಎಂದಿದ್ದರು. 15 ಲಕ್ಷ ಇರಲಿ 15 ಪೈಸೆ ಸಹ ನೀವು ಕೊಟ್ಟಿಲ್ಲ. 2 ಕೋಟಿ ಉದ್ಯೋಗ ಕೊಡ್ತೀನಿ ಎಂದ್ರು ಕೊಟ್ಟಾರಾ..? ಕೆಲಸ ಕೊಡಿ ಎಂದರೆ ಪಕೋಡ ಮಾರೋಕೆ ಹೋಗಿ ಅಂತಾರೆ. ಬೇಜವಬ್ದಾರಿ ಹೇಳಿಕೆಯನ್ನ ಕೊಟ್ಟರು. ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರು, ಒಂದು ರೂಪಾಯಿ ಸಹ ದುಪ್ಪಟ್ಟು ಆಗಲಿಲ್ಲ ಎಂದು ಕಿಡಿಕಾರಿದರು.
ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ. ಈ 10 ವರ್ಷದಲ್ಲಿ ರೈತರು ಹಿಂದುಳಿದವರ ಪರವಾಗಿ ಏನು ಮಾಡಿಲ್ಲ. ಆರ್ಥಿಕ ಸಾಮಾಜೀಕ ಶಕ್ತಿ ತುಂಬಾ ಕೆಲಸ ಮಾಡಿಲ್ಲ. ಮೋದಿಯವರು 2014 ರ ಚುನಾವಣೆ ನಡೆದಾಗ ಅನೇಕ ಭರವಸೆ ಕೊಟ್ಟಿದ್ದರು. ಆದ್ರೆ ಯಾವ ಆಶ್ವಾಸನೆ ಈಡೇರಿಸಿಲ್ಲ ಎಂದರು.
ನಾನು ಬಿಜೆಪಿ ಸರ್ಕಾರ ಟೀಕೆ ಮಾಡಬೇಕು ಅಂತ ಹೇಳ್ತಿಲ್ಲ. ಆದ್ರೆ ಅವರ ಕೊಟ್ಟ ಮಾತು 10 ವರ್ಷವಾದ್ರು ಈಡೇರಿಸಿಲ್ಲ. ಮೋದಿಗೆ ಕರ್ನಾಟಕ ನೆನಪಾಗೋದು ಚುನಾವಣಾ ಸಮಯದಲ್ಲಿ ಮಾತ್ರ. ಈ ಹಿಂದೆಯೂ ನರೇಂದ್ರ ಮೋದಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣಾ ಸಮಯದಲ್ಲಿ ಮಾತ್ರ ಬಂದಿದ್ದರು ಎಂದು ಹೇಳಿದರು.