ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದ್ಯಮದ ವಿಶೇಷ ಸಂದರ್ಶನದಲ್ಲಿ ಹಲವಾರು ಸಂಗತಿಗಳ ಬಗ್ಗೆ ಮುಕಗಿ ಮತ್ತು ನೇರವಾಗಿ ಮಾತಾಡಿದರು.
ಬರ ಪರಿಹಾರ ನಿಧಿ ಬಿಡುಗಡೆ ವಿಳಂಬವಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ಬೆಂಗಳೂರಲ್ಲಿದ್ದ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾದ್ಯಮದ ಜೋತೆ,ಮಾತಾಡಿದ್ದು ಸಚಿವರು ಹೇಳುವ ಪ್ರಕಾರ ಸಿದ್ದರಾಮಯ್ಯ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಉದ್ದೇಶಪೂರ್ವಕವಾಗಿ ಮೇಲಿಂದ ಮೇಲಿಂದ ಮನವಿ ಸಲ್ಲಿಸಿದ್ದನ್ನು ಬಿಟ್ಟರೆ ಬೇರೆ ಗಂಭೀರ ಪ್ರಯತ್ನ ಮಾಡಿಲ್ಲ.
ಇದಕ್ಕೆ ಉಗ್ರರಾಗಿ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಿತ್ ಶಾ ಅವರು ಹೇಳಿದ್ದೇ ನಿಜವಾದರೆ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದು, ಅಲ್ಲಿ ಕೇಂದ್ರ ಸರ್ಕಾರದ ಪರ ಮಾತಾಡಿದ ಅಟಾರ್ನಿ ಜನರಲ್ ಗೃಹ ಸಚಿವರು ಹೇಳಿದ ಮಾತುಗಳನ್ನು ಯಾಕೆ ಹೇಳಲಿಲ್ಲ? ಎಂದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಕಳೆದ ವರ್ಷದ ಬಜೆಟ್ ನಲ್ಲಿ 5,300 ಕೋಟಿ ಮೀಸಲಿರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದುವರೆಗೆ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ ಎಂದ ಸಿದ್ದರಾಮಯ್ಯ ಮೇಕೆದಾಟು ಯೋಜನೆಗೆ ಅನುಮೋದನೆ ನೀಡಬೇಕಿರುವದು ಕೇಂದ್ರ ಸರ್ಕಾರವಾದರೂ ಅದನ್ನು ನೀಡಲು ಯಾಕೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ಡಿಸೆಂಬರ್ 23 ರಂದು ಸಭೆ ಕರೆಯುತ್ತೇನೆಂದ ಗೃಹ ಸಚಿವರು ಯಾಕೆ ಕರೆಯಲಿಲ್ಲ? ನಾವು ಎನ್ ಡಿಆರ್ ಎಫ್ ನಿಂದ ಪರಿಹಾರ ಕೇಳುತ್ತಿದ್ದೇವೆ, ಅದರಲ್ಲಿ ನಮ್ಮ ಪಾಲು ಇಲ್ಲವೇ? ಈ ಕಾರಣಕ್ಕಾಗೇ ನಾವು ನಮ್ಮ ತೆರಿಗೆ ನಮ್ಮ ಹಕ್ಕು ಅಂತ ದೆಹಲಿಯಲ್ಲಿ ಪ್ರದರ್ಶನ ನಡೆಸಿದ್ದು ಎಂದು ಸಿದ್ದರಾಮಯ್ಯ ಹೇಳಿದರು.