ಬಾಗಲಕೋಟೆ
ಜಿಲ್ಲೆಯ ಅಮೀನಗಡ ಪಟ್ಟಣದಲ್ಲಿ ನಡೆದ ಮನೆಯಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಶತಾಯುಷಿಯೊಬ್ಬರು ತಮ್ಮ ಮತದ ಹಕ್ಕು ಚಲಾಯಿಸಿದ್ದಾರೆ.
ಮೇ ೭ ರಂದು ಲೋಕಸಭೆ ಚುನಾವಣೆಗೆ ಮತದಾನದ ಹಿನ್ನೆಲೆಯಲ್ಲಿ ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಏ.೨೬ ರಂದು ಮನೆಯಿಂದಲೇ ಮತದಾನದ ಪ್ರಕ್ರಿಯೆ ನಡೆಯಿತು.
ಪಟ್ಟಣದಲ್ಲಿ ತಾಂಡಾ ನಿವಾಸಿ ಮತಗಟ್ಟೆ ಸಂಖ್ಯೆ ೨೪೯ರಲ್ಲಿನ ಶತಾಯುಷಿ ೧೦೪ ವರ್ಷದ ಚಂದವ್ವ ಖೂಬಪ್ಪ ಲಮಾಣಿ ಮನೆಯಿಂದಲೇ ಮತದಾನ ಮಾಡಿದರು.
ಪಟ್ಟಣದಿಂದ ಮತದಾನಕ್ಕಾಗಿ ನೋಂದಣಿಯಾದ ೮೫ ವರ್ಷ ಮೇಲ್ಪಟ್ಟ ೯ ಮತದಾರರು ಹಾಗೂ ೪ ವಿಶೇಷೇತನ ಮತದಾರರು ಸೇರಿ ೧೩ ಮತದಾರರೂ ಮತದಾನ ಮಾಡಿದರು. ಜಿಪಂ ಸಿಇಒ ಶಶಿಧರ ಕುರೇರ್ ಮನೆ ಮನೆ ಮತದಾನ ಪ್ರಕ್ರಿಯೆ ಪರಿಶೀಲಿಸಿದರು.