ಬೆಂಗಳೂರು ಗ್ರಾಮಾಂತರ: ಜುಲೈ ತಿಂಗಳಲ್ಲಿ ಸಾಧಾರಣ ಮಳೆಯಾಗಿದ್ದು, ಆದರೆ ಆಗಸ್ಟ್‌ನಲ್ಲಿ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಕೃಷಿ ಕ್ಷೇತ್ರಕ್ಕೆ ಭಾರಿ ಹಿನ್ನಡೆಯಾಗಿತ್ತು. ಇದರ ಜತೆಗೆ ಸದ್ಯ ಹೈನುಗಾರಿಕೆ ಅವಲಂಬಿತ ರೈತರಿಗೆ ಮೇವಿನ ಕೊರತೆ ತಲೆಬಿಸಿ ತಂದೊಡ್ಡಿದೆ ಎಂದು ಮಾಹಿತಿ ಕಂಡು ಬಂದಿದೆ.
ಜಿಲ್ಲೆಯಾದ್ಯಂತ 4 ತಾಲೂಕುಗಳ ಪೈಕಿ 1.6 ಲಕ್ಷ ಜಾನುವಾರು ಸಾಕಾಣಿಕೆ ಮಾಡಲಾಗುತ್ತಿದೆ. ಜಿಲ್ಲೆಯ ಬಹುತೇಕ ರೈತರು ಹೈನುಗಾರಿಕೆಯನ್ನೇ ಆದಾಯ ಮೂಲವಾಗಿ ಅವಲಂಬಿಸಿದ್ದಾರೆ. ಕಳೆದ ಬಾರಿ ಹೆಚ್ಚಿನ ಮಳೆಯಿಂದಾಗಿ ಹಸಿರು ಮೇವಿನ ಲಭ್ಯತೆ ಉತ್ತಮವಾಗಿದ್ದ ಕಾರಣದಿಂದಾಗಿ ಮೇವಿನ ಕೊರತೆ ಕಾಡಲಿಲ್ಲ. ಆದರೆ ಈ ಬಾರಿ ಬರದಿಂದ ಮೇವಿನ ಬಗ್ಗೆ ಚಿಂತೆ ಹೆಚ್ಚಾಗಿದೆ. ಮೇವಿನ ಕಿಟ್‌ಗಳ ವಿತರಣೆ ನಡೆದಿದ್ದು, ಜಿಲ್ಲಾಡಳಿತ ಅಗತ್ಯ ಕ್ರಮಕ್ಕೆ ಮುಂದಾಗಿದೆ.
ಜಿಲ್ಲೆಯಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಹಸಿ ಮೇವಿನ ಕೊರತೆ ಹಾಗೂ ಕೃಷಿ ಬೆಳೆ ಹಾನಿಯಾಗಿ ಒಣ ಮೇವಿನ ಕೊರತೆ ಕಾಡುವ ಸಾಧ್ಯತೆ ಇತ್ತು. ಇದರಿಂದ ಸರಕಾರಕ್ಕೆ ಮನವಿ ಸಲ್ಲಿಸಿ ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆ 52,000 ಮೇವಿನ್ ಕಿಟ್‌ಗಳನ್ನೂ ಈಗಾಗಲೇ ವಿತರಣೆ ಮಾಡಿದೆ. ಇದೀಗ 10,800 ಮೇವಿನ ಕಿಟ್‌ಗಳು ಮತ್ತೆ ಪೂರೈಕೆಯಾಗಿದ್ದು, ಅದರ ವಿತರಣೆಗೂ ಕ್ರಮ ವಹಿಸಲಾಗಿದೆ. ಈ ಮೂಲಕ ಮೇವಿನ ಕೊರತೆ ನೀಗಿಸುವ ಪ್ರಯತ್ನದಲ್ಲಿ ಪಶುಪಾಲನಾ ಇಲಾಖೆ, ಜಿಲ್ಲಾಪಂಚಾಯತ್ ಮತ್ತು ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ಮಾಡುತ್ತಿದೆ.
ಬರದ ಪರಿಣಾಮವಾಗಿ ಜಿಲ್ಲೆಯಲ್ಲಿಬಹುತೇಕ ಜಲಮೂಲಗಳೆಲ್ಲಬರಿದಾಗಿಚ್ಢಿ. ಜಾನುವಾರುಗಳಿಗೆ ನೀರಿನ ಕೊರತೆ ಹೆಚ್ಚಾಗಿ ಬಾಧಿಸುತ್ತಿದೆ. ಜಿಲ್ಲಾಡಳಿತ ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ಗ್ರಾಪಂ ಮಟ್ಟದಲ್ಲಿಕ್ರಮ ವಹಿಸಲು ಸೂಚನೆ ನೀಡಿದೆ. ಇದರ ಭಾಗವಾಗಿ ಗ್ರಾಮಗಳಲ್ಲಿರುವ ಜಾನುವಾರುಗಳ ನೀರಿನ ತೊಟ್ಟಿಗಳನ್ನು ತೊಳೆದು ಸ್ವಚ್ಛಗೊಳಿಸಿ ಅದರಲ್ಲಿ ನೀರು ಸಂಗ್ರಹಿಸುವ ಮೂಲಕ ಮೇಯಲು ಹೋಗಿ ಹಿಂತಿರುಗುವ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಮುಂದಾಗಿದ್ದು, ಎಲ್ಲಾ ತಾಲೂಕುಗಳಲ್ಲೂಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಮುಂದಿನ 35 ವಾರಗಳಿಗೆ ಆಗುವಷ್ಟು ಮೇವಿನ ಲಭ್ಯತೆ ಇರುವ ಬಗ್ಗೆ ಇಲಾಖೆ ತಿಳಿಸಿದೆ. ಆದರೆ ಗ್ರಾಮೀಣ ಭಾಗದ ಕೆಲವೆಡೆ ಮೇವಿನ ಕೊರತೆ ನಿಧಾನವಾಗಿ ತಲೆ ಎತ್ತುತ್ತಿದ್ದು, ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಮೇವಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.