This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Agriculture NewsState News

ಗಾಯಗಳನ್ನು ಅತೀ ಬೇಗನೆ ವಾಸಿ ಮಾಡುವ ಶಕ್ತಿಯನ್ನು ಹೊಂದಿದ ಗೇರು ಹಣ್ಣು

ಗಾಯಗಳನ್ನು ಅತೀ ಬೇಗನೆ ವಾಸಿ ಮಾಡುವ ಶಕ್ತಿಯನ್ನು ಹೊಂದಿದ ಗೇರು ಹಣ್ಣು

ನಂದಗುಡಿ: ಬಡವರ ಸೇಬು ಖ್ಯಾತಿಯ ಹಲವು ಪೋಷಕಾಂಶಗಳ ಆಗರವಾಗಿರುವ ಗೇರು ಹಣ್ಣಿನ ಮಹತ್ವ ಅರಿಯದ ಸರಕಾರ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸದೇ ಇರುವುದರಿಂದ ಹಣ್ಣು ತಿಪ್ಪೆಯ ಪಾಲಾಗಿ ರೈತ ಸಂಕಷ್ಟಕ್ಕೆ ಒಳಗಾಗಿದ್ದಾನೆ.

ಗೇರು ಹಣ್ಣಿನಲ್ಲಿ ಆನೇಕ ವಿಟಮಿನ್‌ಗಳಿದ್ದು, ಗಾಯಗಳನ್ನು ಅತೀ ಬೇಗನೆ ವಾಸಿ ಮಾಡುವ ಶಕ್ತಿಯನ್ನು ಹೊಂದಿವೆ. ಮಕ್ಕಳ ಹೊಟ್ಟೆಯಲ್ಲಿ ಜಂತು ಹುಳುಗಳನ್ನು ಸಾಯಿಸಲು ಇದರಲ್ಲಿ ರೋಗ ನಿರೋಧಕ ಗುಣ ಅಧಿಕವಿದ್ದು, ಕ್ಯಾನ್ಸರ್‌ ತಡೆಯಲು ಸಹಕಾರಿಯಾಗಿದೆ. ಮಧುಮೇಹ ಕಾಯಿಲೆಗಳಿಗೆ ರಾಮಬಾಣವಾಗಿ ಕಾರ್ಯ ನಿರ್ವಹಿಸುವ ಅಂಶ ಇದರಲ್ಲಿ ಅಡಕವಾಗಿದೆ.

ಕೇರಳ, ಗೋವಾ ಮತ್ತಿತರ ರಾಜ್ಯಗಳಲ್ಲಿನ ಸರಕಾರಗಳು ಅಲ್ಲಿನ ರೈತರಿಗೆ ಗೇರು ಹಣ್ಣನ್ನು ಸಂಸ್ಕರಿಸಿ ಸೂಕ್ತ ತರಬೇತಿ ಮೂಲಕ ಜ್ಯೂಸ್‌, ಹಲ್ವಾ, ಮತ್ತು ಜೆಲ್‌ ತಯಾರಿಸಿ ಮಾರಾಟ ಮಾಡುವುದಲ್ಲದೇ ಮದ್ಯ ತಯಾರಿಸಲು ಕೃಷಿಕರಿಂದಲೇ ನೇರವಾಗಿ ಹಣ್ಣನ್ನು ಖರೀದಿಸಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ರೈತರ ನೆರವಿಗೆ ನಿಂತಿವೆ.

3 ಎಕರೆಯಲ್ಲಿ ಗೇರು ಹಣ್ಣು ಬೆಳೆದಿದ್ದು ವರ್ಷಕ್ಕೆ ಒಂದು ಬಾರಿ ಇದರ ಫಸಲನ್ನು ಪಡೆಯುತ್ತಿದ್ದು, ಗೇರು ಬೀಜದ ವ್ಯಾಪಾರಿಗಳು ಮನೆ ಬಾಗಿಲಿಗೆ ಬಂದು ಬೀಜ ಕೊಂಡುಕೊಳ್ಳುತ್ತಾರೆ. ಗೇರು ಬೀಜದ ಸಮೇತ ಕೆಜಿ ಲೆಕ್ಕದಲ್ಲಿ ದರ ನಿಗದಿ ಮಾಡಿ ಖರೀದಿಸುತ್ತಾರೆ ಹಣ್ಣನ್ನು ಕೊಳ್ಳುವವರಿಲ್ಲದೇ ಪ್ರಾಣಿ-ಪಕ್ಷಿಗಳಿಗೆ ತಿನ್ನಲು ಬಿಟ್ಟಿದ್ದು ಉಳಿಕೆ ಹಣ್ಣನ್ನು ಕಿತ್ತು ತಿಪ್ಪೆಗೆ ಸುರಿಯುತ್ತೇವೆ.

ಬಂಜರು ಭೂಮಿಯಲ್ಲಿ, ಕೂಲಿಕಾರರ ಕೊರತೆ ಎದುರಿಸುತ್ತಿರುವ ಕೃಷಿಕರಿಗೆ ಕಡಿಮೆ ಕೆಲಸದಲ್ಲಿ ಉಪ ಅದಾಯ ಪಡೆದುಕೊಳ್ಳಲು ಗೇರು ಬೆಳೆ ಅನುಕೂಲವಾಗಿದೆಯಾದರೂ ಸೂಕ್ತ ತಿಳಿವಳಿಕೆ ಕೊರತೆಯಿಂದ ಗೇರು ಹಣ್ಣು ರೈತರಿಗೆ ಲಾಭ ತರದೇ ತಿಪ್ಪೆಯ ಪಾಲಾಗಿ ಬೆಳೆಗಾರನಿಗೆ ಸಿಗಬೇಕಾದ ಆದಾಯಕ್ಕೆ ಕತ್ತರಿ ಬೀಳುವಂತಾಗಿದೆ.

ಜಿಲ್ಲೆಯಲ್ಲಿ 110 ಹೆಕ್ಟೇರ್‌ನಲ್ಲಿ ರೈತರು ಗೇರು ಹಣ್ಣು ಬೆಳೆಯುತ್ತಾರೆ. ಏಪ್ರಿಲ್‌-ಮೇ ತಿಂಗಳಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಪೋಷಕಾಂಶದಿಂದ ಕೂಡಿರುವ ಈ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಸುವಾಸನೆ ಭರಿತವಾದ ಗೇರು ಹಣ್ಣುಗಳು ಹಳದಿ, ಕೆಂಪು ಹಾಗೂ ಕೇಸರಿ ಬಣ್ಣದಲ್ಲಿ ಗ್ರಾಹಕರ ಕಣ್ಮನ ಸೆಳೆಯುತ್ತವೆ.

Nimma Suddi
";