ಬಾಗಲಕೋಟೆ: ಪವಿತ್ರವಾದ ಹಾಲುಮತ ಸಮಾಜದಲ್ಲಿ ಹುಟ್ಟಿ ಅಭಿಮಾನ ಪಡಬೇಕು. ಅದನ್ನ ಬಿಟ್ಟು ನಾನು ಮುಸಲ್ಮಾನ ಆಗ್ತೇನೆ, ಗಡ್ಡ ಬಿಡ್ತೇನೆ, ಕಟ್ ಮಾಡ್ಕೊಳ್ತೇನೆ ಅಂದ್ರೆ ಹೆಂಗ್ ಸಿದ್ದರಾಮಯ್ಯನವರೆ…?” ಎಂದು ಯತ್ನಾಳ್ ಸಿಎಂ ಸಿದ್ದರಾಮಯ್ಯವರ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ ಪರ ಕಮತಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತಿನ ಮೂಲಕ ಸಿಎಂ ಸಿದ್ದರಾಮಯ್ಯವರ ಕಾಲೆಳೆದಿದ್ದಾರೆ.
“ಎಂದು ಇದಲ್ಲದೇ “ಎಲ್ಲರೂ ಧರ್ಮ ಉಳಿಸುವ ನಿಟ್ಟಿನಲ್ಲಿ ಮತದಾನ ಮಾಡಬೇಕು. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಮೂಲಕ ಹಿಂದು ಧರ್ಮವನ್ನು ಉಳಿಸಿ, ಬೆಳೆಸಿಬೇಕಿದೆ” ಎಂದು ಯತ್ನಾಳ್ ತಿಳಿಸಿದರು.