This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Entertainment NewsState News

ಮದ್ಯ ಪ್ರಿಯರಿಗೆ ಬಿಗ್ ಶಾಕ್: ಬೆಂಗಳೂರಿನಲ್ಲೀಗ ಬಿಯರ್ ಬಿಕ್ಕಟ್ಟು , ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಉದ್ಯಮ ಸಿದ್ಧವಾಗಿಲ್ಲ

ಮದ್ಯ ಪ್ರಿಯರಿಗೆ ಬಿಗ್ ಶಾಕ್: ಬೆಂಗಳೂರಿನಲ್ಲೀಗ ಬಿಯರ್ ಬಿಕ್ಕಟ್ಟು , ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಉದ್ಯಮ ಸಿದ್ಧವಾಗಿಲ್ಲ

ಬೆಂಗಳೂರು: ನೀರಿನ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಬೆಂಗಳೂರು ನಗರದಲ್ಲಿ ಶೀಘ್ರದ್ಲಲೇ ಬಿಯರ್​ ಬಿಕ್ಕಟ್ಟು ಕೂಡ ಸೃಷ್ಟಿಯಾಗಬಹುದು ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸಿದೆ.

ಹೆಚ್ಚುತ್ತಿರುವ ಬೇಡಿಕೆ, ಕುಸಿದ ಪೂರೈಕೆಯೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ನಗರದ ಪಬ್‌ಗಳು ಮತ್ತು ಬ್ರೂವರೀಸ್​ಗಳಲ್ಲಿ ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಿದೆ. ಅದಕ್ಕೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಚಿಲ್ಲರೆ ಮಾರಾಟದ ಅಂಗಡಿಗಳಲ್ಲಿ ದಾಸ್ತಾನು ಮರುಸ್ಥಾಪಿಸುವಲ್ಲಿ ಕೂಡ ವಿಳಂಬವಾಗುತ್ತಿದೆ.

ಈ ವರ್ಷ ಬಳಕೆ, ಬೇಡಿಕೆ ನಿರೀಕ್ಷೆಯನ್ನು ಮೀರಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಉದ್ಯಮ ಸಿದ್ಧವಾಗಿಲ್ಲ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ, ನಾವು ಹಣ್ಣಿನ ಫ್ಲೇವರ್​ಗಳ ಬಿಯರ್ ಅನ್ನು ಪರಿಚಯಿಸುತ್ತೇವೆ. ಮಾವಿನಹಣ್ಣು ಮತ್ತು ಅನಾನಸ್‌ಗಳಂತಹ ಹಣ್ಣುಗಳ ಲಭ್ಯತೆಯ ಮೇಲೆ ಮಾರಾಟ ಹೆಚ್ಚು ಅವಲಂಬಿತವಾಗಿದೆ. ಈ ವರ್ಷ, ಮಾವಿನಹಣ್ಣಿನ ಸಮಸ್ಯೆಯಿಂದಾಗಿ ಹಣ್ಣಿನ ಬಿಯರ್‌ನ ಮಾರಾಟವು ಕಡಿಮೆಯಾಗಿದೆ.

ಪರಿಣಾಮವಾಗಿ ಜನರು ಸಾಮಾನ್ಯ ಬಿಯರ್ ಅನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಮಾರತ್ತಹಳ್ಳಿಯ ಪ್ರಮುಖ ಮದ್ಯದ ಅಂಗಡಿಯ ಪ್ರತಿನಿಧಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಬಿಸಿಲು, ಐಪಿಎಲ್ ಸೀಸನ್ ಮತ್ತು ದೀರ್ಘ ವಾರಾಂತ್ಯದಲ್ಲಿ ಜನರು ಹೆಚ್ಚೆಚ್ಚು ಬರುವುದರಿಂದ ಮಾರಾಟವೂ ಹೆಚ್ಚುತ್ತಲೇ ಇತ್ತು. ಈ ವರ್ಷ ಸರಿಸುಮಾರು 30,000 ಲೀಟರ್‌ಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ. ಹಿಂದಿನ ವರ್ಷ ಈ ಅವಧಿಯಲ್ಲಿ ಸುಮಾರು 9,000 ಲೀಟರ್‌ ಮಾರಾಟವಾಗಿತ್ತಷ್ಟೆ ಎಂದು ಅವರು ಹೇಳಿದ್ದಾರೆ.

ಪೂರೈಕೆ ಸಮಸ್ಯೆಯ ಕಾರಣ ಅನೇಕ ಪಬ್‌ಗಳು ಮತ್ತು ಬ್ರೂವರೀಸ್‌ಗಳು ವಾರಾಂತ್ಯದ ಕೊಡುಗೆಗಳನ್ನು ನಿಲ್ಲಿಸಲು ಮುಂದಾಗಿದ್ದು, ಶೀಘ್ರದಲ್ಲೇ ಇದು ಜಾರಿಯಾಗಬಹುದು. 2 ಖರೀದಿಸಿದರೆ ಒಂದು ಉಚಿತ ಅಥವಾ ಒಂದು ಖರೀದಿಸಿದರೆ ಮತ್ತೊಂದು ಉಚಿತ ಇತ್ಯಾದಿ ಆಫರ್​​ಗಳನ್ನು ನಿಲ್ಲಿಸಲು ಪಬ್​ಗಳು ಮುಂದಾಗಿವೆ ಎಂದು ‘ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ಕೇವಲ ಬೇಸಿಗೆಯ ಕಾರಣದಿಂದಾಗಿ ಬೇಡಿಕೆಯ ಹೆಚ್ಚಳವಾಗಿರುವುದಲ್ಲ. ದೀರ್ಘ ವಾರಾಂತ್ಯಗಳು, ಸಾಲು ರಜೆಗಳೂ ಸಹ ಕಾರಣವಾಗಿವೆ ಎಂದು ವರದಿ ಉಲ್ಲೇಖಿಸಿದೆ.

";