ಬೆಂಗಳೂರು: ನಗರದಲ್ಲಿ ಸೈಬರ್ ಕಳ್ಳರ ಹಾವಳಿ ಮುಂದುವರೆದಿದ್ದು, ಸೈಬರ್ ಕಳ್ಳರ ಜಾಲಕ್ಕೆ ಸಿಲುಕಿ ಅದೆಷ್ಟೋ ಜನರು ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.
ಸೈಬರ್ ಕಳ್ಳರ ಜಾಲಕ್ಕೆ ಸಿಲುಕಿ ವ್ಯಕ್ತಿಯೊಬ್ಬ 5.17 ಕೋಟಿ ರೂ. ಕಳೆದುಕೊಂಡಿದ್ದಾರೆ. ಉದ್ಯಮಿ ಅಶೋಕ್ ತಿರುಪಲಪ್ಪ ವಂಚನೆಗೆ ಒಳಗಾದವರು. ಇದೇ ವರ್ಷ ಫೆಬ್ರವರಿ 3 ರಂದು ಅಶೋಕ್ ಅವರ ವಾಟ್ಸಪ್ಗೆ ಅಪರಿಚಿತ ನಂಬರ್ನಿಂದ https://www.bys-app.com ಬರುತ್ತದೆ. ಆದರೆ ಅಶೋಕ್ ಈ ಲಿಂಕ್ ಅನ್ನು ತೆರೆದಿರುವುದಿಲ್ಲ.
ಸ್ವಲ್ಪ ದಿನಗಳ ಬಳಿಕ ಅಶೋಕ್ ಆ್ಯಪ್ ಡೌಲೋಡ್ ಮಾಡುತ್ತಾರೆ. ಬಳಿಕ ಅಶೋಕ್ ತಮ್ಮ ಎಸ್ಬಿಐ ಅಕೌಂಟ್ನಿಂದ ಆರೋಪಿಗಳು ಸೂಚಿಸಿದ ಅಕೌಂಟ್ಗೆ ಹಂತ ಹಂತವಾಗಿ ಹಣ ಹಾಕಲು ಆರಂಭಿಸುತ್ತಾರೆ. ಹೀಗೆ ಬರೊಬ್ಬರಿ 5.17 ಕೋಟಿ ರೂ. ಹಣವನ್ನು ಅಶೋಕ್ ಆರೋಪಿಗಳು ಸೂಚಿಸಿದ ಅಕೌಂಟ್ಗೆ ಹಾಕುತ್ತಾರೆ. ಇದಾದ ಬಳಿಕ ಆರೋಪಿಗಳು ಮತ್ತೆ ಅಶೋಕ್ ಅವರನ್ನು ಸಂಪರ್ಕಿಸಿ ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಹೇಳುತ್ತಾರೆ.
ಆಗ ಅಶೋಕ್ ಇದಕ್ಕೆ ಒಪ್ಪದೆ, ಮೊದಲು ಹೂಡಿಕೆ ಮಾಡಿದ್ದ ಹಣವನ್ನು ಮರಳಿ ಪಡೆಯಲು ಆ್ಯಪ್ನಲ್ಲಿ ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಆಗ ಅಶೋಕ್ ಅವರಿಗೆ ತಾನು ಮೋಸ ಹೋಗಿದ್ದೇನೆ ಎಂದು ತಿಳಿಯುತ್ತದೆ.
ಕೊನೆಗೆ ಅಶೋಕ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಅಶೋಕ್ ದೂರಿನ ಅನ್ವಯ ಸೈಬರ್ ಕ್ರೈಂ ಪೊಲೀಸರು Fyers Securities Pvt Ltd, Eercore Company ಎಂಬ ಕಂಪನಿಗಳ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸಿದ್ದಾರೆ.
ಸ್ವಲ್ಪ ಸಮಯದಲ್ಲಿ ಬಳಿಕ ಅಶೋಕ್ ಅವರನ್ನು ವೈ-5-ಎವರ್ ಕೋರ್ ಫೈನಾನ್ಸಿಯಲ್ ಲೀಡರ್ ಎಂಬ ವಾಟ್ಸಪ್ ಗ್ರೂಪ್ಗೆ ಆ್ಯಡ್ ಮಾಡಲಾಗುತ್ತದೆ. ಬಳಿಕ ತೇಜಸ್ ಖೋಡೆ, ಗೋಪಾಲ್ ಕಾವಲ್ರೆಡ್ಡಿ, ಕೇರೋಲಿನ್ ಕ್ರುಕ್ಸ್ ಎಂಬ ಅಪರಿಚಿತರು ಅಶೋಕ್ ಅವರಿಗೆ ಕರೆ ಮಾಡಿ “ಲಿಂಕ್ ಮೇಲೆ ಕ್ಲಿಕ್ ಮಾಡಿ ಆ್ಯಪ್ ಡೌನ್ಲೋಡ್ ಮಾಡಿ. ಆ ಆ್ಯಪ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ಪ್ರೇರೇಪಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.