ಬೆಂಗಳೂರು,: ಜಗಳ ಆಡುವಾಗ ಕಪಾಳಕ್ಕೆ ಹೊಡೆದಿದ್ದರಿಂದ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಬೆಳ್ತೂರು ಕಾಲೋನಿಯಲ್ಲಿ ನಡೆದಿದೆ. ಪ್ರಭುರಾಮ್ ಪ್ರಸಾದ್ ಮೃತ ವ್ಯಕ್ತಿ. ಅನಿಲ್ ಕಪಾಳಕ್ಕೆ ಹೊಡೆದ ವ್ಯಕ್ತಿ.
ಮೃತ ಪ್ರಭುರಾಮ್ ನಿನ್ನೆ ಮಗನ ಜೊತೆ ಹಬ್ಬಕ್ಕೆಂದು ಬೈಕ್ನಲ್ಲಿ ದೇಗುಲದ ಬಳಿ ಹೋಗಿದ್ದ. ದಾರಿ ಮಧ್ಯೆ ಬೈಕ್ನಲ್ಲಿ ಸೌಂಡ್ ಬರ್ತಿದೆ ಅಂತಾ ಬೈಕ್ನ್ನು ಸೈಡ್ ಹಾಕಿ ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪರಿಚಯಸ್ಥ ಮಹಿಳೆ ಬೈಕ್ಗೆ ಟಚ್ ಮಾಡಿದರು.
ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮನೆ ಬಳಿ ಬಾ ಎಂದು ಮಹಿಳೆ ಹೊರಟು ಹೋಗಿದ್ದಾರೆ. ಮನೆ ಬಳಿ ಹೋದಾಗ ಮಹಿಳೆ ಪತಿ ಅನಿಲ್ ಜತೆ ಪ್ರಭುರಾಮ್ ಜಗಳವಾಗಿದೆ. ಈ ವೇಳೆ ಪ್ರಭುರಾಮ್ ಕೆನ್ನೆಗೆ 4-5 ಬಾರಿ ಅನಿಲ್ ಹೊಡೆದಿದ್ದಾರೆ.
ಜಗಳದ ಬಳಿಕ ಮನೆಗೆ ಹೋಗಿ ನೋವಿನಲ್ಲೇ ಮಲಗಿದ್ದ ಪ್ರಭುರಾಮ್, ರಾತ್ರಿ 1 ಗಂಟೆ ಸುಮಾರಿಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.