This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Crime NewsState News

ಉದ್ದೇಶಪೂರ್ವಕವಾಗಿ ಎಚ್‌ಐವಿ ಹರಡಲು ಯತ್ನಿಸಿದ ಪಾಪಿಯ ಬಂಧನ: 50ಕ್ಕೂ ಅಧಿಕ ಜನರ ಜೊತೆ ಲೈಂಗಿಕ ಸಂಪರ್ಕ

ಉದ್ದೇಶಪೂರ್ವಕವಾಗಿ ಎಚ್‌ಐವಿ ಹರಡಲು ಯತ್ನಿಸಿದ ಪಾಪಿಯ ಬಂಧನ: 50ಕ್ಕೂ ಅಧಿಕ ಜನರ ಜೊತೆ ಲೈಂಗಿಕ ಸಂಪರ್ಕ

ಲೈಂಗಿಕ ಸಂಪರ್ಕದ ಮೂಲಕ ಉದ್ದೇಶಪೂರ್ವಕವಾಗಿ ಎಚ್‌ಐವಿ ಹರಡಲು ಯತ್ನಿಸಿದ್ದಕ್ಕಾಗಿ ಅಮೆರಿಕದ ಅಲೆಕ್ಸಾಂಡರ್ ಲೂಯಿ(34) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೇ ಆರೋಪಿಗೆ 30 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

ಸಿಬಿಎಸ್ ನ್ಯೂಸ್ ಪ್ರಕಾರ , ಅಲೆಕ್ಸಾಂಡರ್ ಲೂಯಿ ಅವರು 16 ವರ್ಷ ವಯಸ್ಸಿನವರು ಸೇರಿದಂತೆ 30 ರಿಂದ 50 ವಿಭಿನ್ನ ಪುರುಷರು ಮತ್ತು ಅಪ್ರಾಪ್ತ ವಯಸ್ಸಿನ ಹುಡುಗರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಎಂದು ಮಾಹಿತಿ ತಿಳಿದು ಬಂದಿದೆ.

ತನಿಖೆ ಮುಂದುವರಿಯುತ್ತಿದ್ದಂತೆ ಲೂಯಿಗೆ ಎಚ್‌ಐವಿ ಪಾಸಿಟಿವ್ ಇರುವುದು ತಿಳಿದುಬಂದಿದೆ. ಇದಲ್ಲದೇ HIV ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ಕೂಡ ಪೊಲೀಸರು ಬಹಿರಂಗಪಡಿಸಿದ್ದಾರೆ. ಎಚ್‌ಐವಿ ಹರಡಲು ಪುರುಷರು ಮತ್ತು ಹದಿಹರೆಯದ ಹುಡುಗರೊಂದಿಗೆ ಉದ್ದೇಶಪೂರ್ವಕವಾಗಿ ಲೈಂಗಿಕ ಸಂಪರ್ಕವನ್ನು ಹೊಂದಿದ್ದ. ಆತ 16 ವರ್ಷ ವಯಸ್ಸಿನವರು ಸೇರಿದಂತೆ 30-50 ವಿವಿಧ ಪುರುಷರು ಮತ್ತು ಹುಡುಗರೊಂದಿಗೆ ಲೈಂಗಿಕ ಸಂಭೋಗವನ್ನು ಹೊಂದಿದ್ದ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

ಎಚ್‌ಐವಿ ಪಾಸಿಟಿವ್ ಎಂದು ತಿಳಿದಿದ್ದರೂ ಕೂಡ 50ಕ್ಕೂ ಹೆಚ್ಚು ಜನರ ಜೊತೆ ಸೆಕ್ಸ್‌ ನಡೆಸಿದ್ದು, ಉದ್ದೇಶಪೂರ್ವಕವಾಗಿ ಎಚ್‌ಐವಿ ಹರಡಲೆಂದು ಈ ರೀತಿ ಮಾಡಿದ್ದೇನೆ ಎಂದು ಆರೋಪಿ ತನಿಖೆಯ ವೇಳೆ ಹೇಳಿದ್ದಾನೆ. ಕಳೆದ ಆಗಸ್ಟ್‌ನಲ್ಲಿ ಲೂಯಿ 15 ವರ್ಷ ವಯಸ್ಸಿನ ಹುಡುಗನೊಂದಿಗೆ ಆನ್‌ಲೈನ್ ಲೈಂಗಿಕ ಸಂಭಾಷಣೆಯನ್ನು ಪ್ರಾರಂಭಿಸಿದ ಕಾರಣಕ್ಕಾಗಿ ಆತನ ಮೇಲೆ ಕೇಸು ದಾಖಲಾಗಿತ್ತು. ಸೆಪ್ಟೆಂಬರ್ 2023 ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಂದಿಗೆ ಲೈಂಗಿ ದೌರ್ಜನ್ಯ ಆರೋಪದ ಮೇಲೆ ಲೂಯಿ ಅವರನ್ನು ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದರು ಎಂದು ಮಾಹಿತಿ ಬೆಳಕಿಗೆ ಬಂದಿದೆ.

 

Nimma Suddi
";