This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

International NewsNational NewsState News

ಕರ್ನಾಟಕ ಹೈಕೋರ್ಟ್ : ವಿದೇಶಿ ನೌಕರರಿಗೆ ಇಪಿಎಫ್ ಅಸಾಂವಿಧಾನಿಕ, ಕೇಂದ್ರದ ತಿದ್ದುಪಡಿ ರದ್ದು

ಕರ್ನಾಟಕ ಹೈಕೋರ್ಟ್ : ವಿದೇಶಿ ನೌಕರರಿಗೆ ಇಪಿಎಫ್ ಅಸಾಂವಿಧಾನಿಕ, ಕೇಂದ್ರದ ತಿದ್ದುಪಡಿ ರದ್ದು

ಬೆಂಗಳೂರು: ದೇಶದಲ್ಲಿ ನೆಲೆಸಿರುವ ವಿದೇಶಿ ಕಾರ್ಮಿಕರನ್ನು ನೌಕರರ ಭವಿಷ್ಯ ನಿಧಿ ಮತ್ತು ನೌಕರರ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಕೇಂದ್ರ ಸರಕಾರ 2008ರಲ್ಲಿ ಮಾಡಿದ್ದ ಕಾನೂನು ತಿದ್ದುಪಡಿ ಅಸಂವಿಧಾನಿಕ ಎಂದು ಸಾರಿರುವ ಕರ್ನಾಟಕ ಹೈಕೋರ್ಟ್‌, ಅದನ್ನು ರದ್ದುಪಡಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಸ್ಟೋನ್‌ ಹಿಲ್‌ ಎಜುಕೇಷನ್‌ ಫೌಂಡೇಷನ್‌ ಸೇರಿದಂತೆ ಹಲವು ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ಕೆ.ಎಸ್‌. ಹೇಮಲೇಖಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದ್ದು, 2008ರ ಅ. 1ರಿಂದ ಜಾರಿಗೆ ಬರುವಂತೆ ಯಾವುದೇ ವೇತನ ಮಿತಿ ಇಲ್ಲದೆ ವಿದೇಶಿ ಕಾರ್ಮಿಕರನ್ನು ಇಪಿಎಫ್‌ ಮತ್ತು ಇಪಿಎಸ್‌ ವ್ಯಾಪ್ತಿಗೆ ಒಳಪಡಿಸಲು ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ. ಭಾರತೀಯ ಕಾರ್ಮಿಕರಿಗೆ ಪ್ರತಿ ತಿಂಗಳು 15 ಸಾವಿರ ರೂ. ವೇತನ ಮಿತಿ ಇದ್ದು, ವಿದೇಶಿ ಕಾರ್ಮಿಕರಿಗೆ ಮಿತಿ ಹೇರದಿರುವುದು ಸರಿಯಲ್ಲ,” ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

”ನೌಕರರ ಭವಿಷ್ಯ ನಿಧಿ ಮತ್ತು ವಿವಿಧ ಕಾಯಿದೆಯು ಕೇಂದ್ರ ಸರಕಾರಕ್ಕೆ ಭವಿಷ್ಯ ನಿಧಿ ಯೋಜನೆಯಲ್ಲಿ ಮಾರ್ಪಾಡು ಮಾಡಲು ಅವಕಾಶ ಕಲ್ಪಿಸುತ್ತದೆ. ಆದರೆ, ಆ ಅಧಿಕಾರವನ್ನು ಶಾಸನದ ಉದ್ದೇಶ ಪೂರೈಸಲು ಮಾತ್ರವೇ ಬಳಸಬೇಕು. ಇಪಿಎಫ್‌ ಮತ್ತು ಎಂಪಿ ಕಾಯಿದೆಯನ್ನು ಕಡಿಮೆ ವೇತನ ಪಡೆಯುವವರಿಗೆ ನಿವೃತ್ತಿ ಬಳಿಕ ಅನುಕೂಲ ಕಲ್ಪಿಸಲು ರೂಪಿಸಲಾಗಿದೆಯೇ ವಿನಾ ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ಪಡೆಯುವವರಿಗೆ ಅಲ್ಲ,” ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಸರಕಾರ 2008ರಲ್ಲಿ ಅಂತಾರಾಷ್ಟ್ರೀಯ ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಾಯಿದೆಗೆ ತಿದ್ದುಪಡಿ ತಂದು ಇಪಿಎಫ್‌ ಯೋಜನೆಯ ಪ್ಯಾರಾ 83 ಮತ್ತು ಇಪಿ ಯೋಜನೆಯ ಪ್ಯಾರಾ 43 ‘ಎ’ ವಿಸ್ತರಿಸಿ ಅವರಿಗೆ ವೇತನ ಮಿತಿ ಇಲ್ಲದೆ ಎರಡೂ ಸೌಲಭ್ಯ ಪಡೆಯಲು ಅವಕಾಶ ಮಾಡಿಕೊಟ್ಟಿದ್ದನ್ನು ಅರ್ಜಿದಾರರ ಸಂಸ್ಥೆಗಳು ಪ್ರಶ್ನಿಸಿದ್ದವು.

ಭಾರತದಲ್ಲಿ ವಿದೇಶಿ ಉದ್ಯೋಗಿಗಳು ನಿರ್ದಿಷ್ಟ ಕಾಲಾವಧಿಗೆ ಮಾತ್ರ ಕಾರ್ಯನಿರ್ವಹಿಸಲಿದ್ದು, ಅವರಿಗೆ ಭವಿಷ್ಯ ನಿಧಿಗೆ ಹಣ ಸಂದಾಯ ಮಾಡುವುದರಿಂದ ತಮಗೆ ಹಾನಿಯಾಗುತ್ತದೆ. ವಿದೇಶಿ ಕೆಲಸಗಾರರು ಪ್ರತ್ಯೇಕ ವರ್ಗಕ್ಕೆ ಸೇರುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದವು.

‘ಇಪಿಎಫ್‌ ಮತ್ತು ಎಂಪಿ ಕಾಯಿದೆಯು ಕಟ್ಟುನಿಟ್ಟಾದ ನಿಬಂಧನೆಗಳನ್ನು ಹೊಂದಿದೆ. ಅದರ ಅಡಿಯಲ್ಲಿ ಇಪಿಎಫ್‌ ಸಂಸ್ಥೆ ಅಥವಾ ಇಪಿಎಫ್‌ಒನ ಉದ್ಯೋಗಿಗಳು ಸರಿಯಾಗಿ ಪಾಲನೆ ಮಾಡದಿದ್ದರೆ ಭಾರಿ ದಂಡ ವಿಧಿಸಬಹುದು. ಆದರೆ, ನಿರ್ದಿಷ್ಟ ಉದ್ಯೋಗಿಗಳಿಗೆ ರೂಪಿಸಿರುವ ಯೋಜನೆಯನ್ನು ಭಾರಿ ಹಣ ಸಂಪಾದಿಸುವ ಶ್ರೀಮಂತ ವಿದೇಶಿ ಉದ್ಯೋಗಿಗಳ ಅಗತ್ಯತೆ ಪೂರೈಸಲು ಅನುಮತಿಸಲಾಗದು,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

”ಭಾರತದಿಂದ ಹೊರದೇಶಕ್ಕೆ ಸೇವೆ ಮೇಲೆ ನಿಯೋಜಿಸುವ ಉದ್ಯೋಗಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಕಾಯಿದೆಗಳನ್ನು ರೂಪಿಸಲಾಗಿದೆ. ಆ ದೇಶದಲ್ಲಿ ಅಭದ್ರತೆ ಉಂಟಾಗದಿರಲೆಂದು ಕಾಯಿದೆ ರೂಪಿಸಲಾಗಿದೆ. ಭಾರತದ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಬೇರೆ ದೇಶದ ಪ್ರಜೆಗಳು ಭಾರತದಲ್ಲಿ ಕೆಲಸ ಮಾಡುವಾಗ ಅವರನ್ನು ಅನ್ಯೋನ್ಯತೆಯಿಂದ ಕಾಣಲಾಗುವುದು. ಆದರೆ, ಇಪಿಎಫ್‌ ಮತ್ತು ಎಂಪಿ ಕಾಯಿದೆಯಡಿ ಮಾಸಿಕ 15,000 ರೂ. ಪಡೆಯುವವರು ಇಪಿಎಫ್‌ ಯೋಜನೆಯ ಸದಸ್ಯತ್ವ ಪಡೆಯಬಹುದು. ವಿಪರ್ಯಾಸವೆಂದರೆ, ವಿದೇಶಿ ಕಾರ್ಮಿಕರಿಗೆ ಆ ವೇತನ ಮಿತಿ ಇಲ್ಲ,” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ ಎಂದು ಮಾಹಿತಿ ಕಂಡು ಬಂದಿದೆ.

Nimma Suddi
";