ಕೊಪ್ಪಳ: ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಧಾರ್ಮಿಕ ಕೇಂದ್ರ, ಕೊಪ್ಪಳ ತಾಲೂಕಿನ ಮುನಿರಾಬಾದ್ ಸಮೀಪದ ಸುಕ್ಷೇತ್ರ ಹುಲಿಗಿಯ ಹುಲಿಗೆಮ್ಮದೇವಿ ಮಹಾ ರಥೋತ್ಸವ ಮೇ 31 ರಂದು ಸಂಜೆ 5.30ಕ್ಕೆ ಜರುಗಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮೇ 24 ರಂದು ರಾತ್ರಿ 8 ಗಂಟೆಗೆ ಹುಲಿಗೆಮ್ಮದೇವಿ ಕಂಕಣ ಧಾರಣೆ, ಮೇ 30ರಂದು ಸಂಜೆ 7 ಗಂಟೆಗೆ ಉತ್ಸವ ನಡೆಯಲಿದೆ. ಮೇ 31ರಂದು ಸಂಜೆ 5.30ಕ್ಕೆ ಹುಲಿಗೆಮ್ಮದೇವಿ ಅಕ್ಕಿಪಡಿ ಮಹಾ ರಥೋತ್ಸವ ಜರುಗಲಿದೆ.
ಜೂನ್1ರಂದು ಬಾಳೆದಿಂಡಿಗೆ, ರಾತ್ರಿ 8 ಗಂಟೆಗೆ ಕೊಂಡದ ಪೂಜೆ, ಬೆಳಗಿನ ಜಾವ 3 ಗಂಟೆಗೆ ಗಂಗಾದೇವಿ ಪೂಜೆ, 4 ಗಂಟೆಗೆ ಪ್ರಸಾದ ಕೇಳುವುದು, 4.30ಕ್ಕೆ ಬಾಳೆದಿಂಡಿಗೆ ಆರೋಹಣ ನಡೆಯಲಿದೆ.
ಜೂನ್ 25 ರಂದು ರಾತ್ರಿ 8 ಗಂಟೆಗೆ ಹುಲಿಗೆಮ್ಮದೇವಿ ಕಂಕಣ ವಿಸರ್ಜನೆ ಮಾಡಲಾಗುವುದು. ನಾನಾ ಭಾಗಗಳಿಂದ ಹುಲಿಗೆಮ್ಮದೇವಿ ಜಾತ್ರೆಗೆ ಬರುವ ಭಕ್ತಾದಿಗಳು ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ ಇಳಿಯಬೇಕು. ಕೊಪ್ಪಳ, ಗಂಗಾವತಿ ಹಾಗೂ ಹೊಸಪೇಟೆಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಹುಲಿಗೆಮ್ಮದೇವಿ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ, ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.
ಜೂನ್ 2ರಂದು ಪಾಯಸ ಅಗ್ನಿಕುಂಡ, ರಾತ್ರಿ 8 ಗಂಟೆಗೆ ಕೊಂಡದ ಪೂಜೆ, ರಾತ್ರಿ 9 ಗಂಟೆಗೆ ಹಿಡಿದಕ್ಷಿಣೆ ವಿತರಣೆ, ರಾತ್ರಿ 9.30ಕ್ಕೆ ಸಾರಂಗಮಠದಲ್ಲಿಪಡಗದ ಪೂಜೆ, ಬೆಳಗಿನ ಜಾವ 4 ಗಂಟೆಗೆ ಗಂಗಾದೇವಿ ಪೂಜೆ, 4.30ಕ್ಕೆ ದೇವಿಗೆ ಪ್ರಸಾದ ಕೇಳುವುದು, 5.30ಕ್ಕೆ ಪಾಯಸ ಪ್ರಸಾದ ನಿವೇದನೆ, ಜೂನ್ 3ರಂದು ಬೆಳಗ್ಗೆ 6.30ಕ್ಕೆ ಅಗ್ನಿಕುಂಡ ನಡೆಯಲಿದೆ.