ನವದೆಹಲಿ: ಷೇರು ಮಾರುಕಟ್ಟೆ ಇತ್ತೀಚೆಗೆ ಸತತವಾಗಿ ಕುಸಿಯುತ್ತಿದ್ದು, ಬಹಳಷ್ಟು ಜನರು ಈ ಇಳಿಕೆಯ ಟ್ರೆಂಡ್ ಅನ್ನು ಲೋಕಸಭಾ ಚುನಾವಣೆಗೆ ಲಿಂಕ್ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿರುವುದು ಇದಕ್ಕೆ ಕಾರಣ ಇರಬಹುದು ಎಂಬುದು ಕೆಲವರ ಭಾವನೆ.
ಎನ್ಡಿಎ ಮೈತ್ರಿಕೂಟ 300ಕ್ಕಿಂತ ಕಡಿಮೆ ಸ್ಥಾನ ಪಡೆಯುವ ಸಾಧ್ಯತೆ ಎನ್ನುವ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಕುಸಿತವಾಗುತ್ತಿರಬಹುದು ಎನ್ನಲಾಗುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಷೇರು ಕುಸಿತಕ್ಕೂ ಲೋಕಸಭಾ ಚುನಾವಣೆಗೂ ಲಿಂಕ್ ಮಾಡಲು ನಿರಾಕರಿಸಿದ್ದಾರೆ. ಈ ಹಿಂದೆ ಷೇರು ಮಾರುಕಟ್ಟೆ ಇದಕ್ಕಿಂತ ಹೆಚ್ಚು ಕುಸಿತ ಕಂಡಿದ್ದಿದೆ. ಈಗ ಕುಸಿಯುತ್ತಿರುವುದು ಚುನಾವಣೆಗೆ ಸಂಬಂಧಿಸಿದ್ದಲ್ಲ ಎಂದು ಹೇಳಿರುವ ಅಮಿತ್ ಶಾ, ಹೂಡಿಕೆದಾರರಿಗೆ ಟಿಪ್ಸ್ ಕೊಡಲು ಮರೆಯಲಿಲ್ಲ.