ಬೆಂಗಳೂರು: ಬೆಂಗಳೂರಿನ ವಾಯು ಮಾಲಿನ್ಯ ಕಡಿಮೆ ಮಾಡುತ್ತೇವೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಬಸ್ಗಳುಸರಿಯಾಗಿ ಸೇವೆ ಒದಗಿಸುತ್ತಿಲ್ಲ ಎಂಬ ಆರೋಪ ಕೇಳಿಬಂದ ಬೆನ್ನಲೇ ಇದೀಗ, ಈ ಬಸ್ಗಳ ಚಾಲಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಅಂತ ಕೂಗು ಕೇಳಿಬರುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಕೆಲಸಕ್ಕೆ ಸೇರಿಸಿಕೊಳ್ಳುವಾಗ 26 ರೂ. ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಕೇವಲ 18 ಸಾವಿರ ರೂ. ಕೊಡುತ್ತಿದ್ದಾರೆ. ಕಡಿತ ಮಾಡುತ್ತಿರುವ ಹಣ ಪಿಎಫ್ ಖಾತೆಗೂ ಜಮೆ ಆಗಿಲ್ಲ. ಟಾಟಾ ಕಂಪನಿಯಲ್ಲಿ ಕೆಲಸ ಎಂದು ನಮಗೆ ಹೇಳಿದ್ದರು, ಈಗ ಯಾವುದೋ ಆರ್ಯ ಕಂಪನಿಯಲ್ಲಿ ಕೆಲಸ ನೀಡಿದ್ದಾರೆ. ವಸತಿ ಸೌಲಭ್ಯ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಇಲ್ಲಿ ಯಾವುದೇ ರೀತಿಯ ಸೌಲಭ್ಯ ನೀಡಿಲ್ಲ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಬಿಎಂಟಿಸಿಯಲ್ಲಿ ಒಟ್ಟು 6842 ಬಸ್ಗಳಿವೆ. ಅದರಲ್ಲಿ ಸಾಮಾನ್ಯ 5642 ಬಸ್ಗಳಿದ್ದರೆ, 600 ಎಸಿ ಬಸ್ಗಳಿವೆ. 600 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಗಳಿವೆ. ಡಿಪೋ-3 ಒಂದರಲ್ಲೇ 113 ಎಲೆಕ್ಟ್ರಿಕ್ ಬಸ್ಗಳು ಸಂಚರಿಸುತ್ತೇವೆ. ಇಲ್ಲಿ ಚಾಲಕರು ಮೂರು ಶಿಫ್ಟ್ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಎಲೆಕ್ಟ್ರಿಕ್ ಬಸ್ಗಳ ಚಾಲಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಇವರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಆರೋಪವಿದೆ. ಈ ಸಂಬಂಧ ಚಾಲಕರು ಶಾಂತಿನಗರ ಡಿಪೋ 3ರ ಮುಂದೆ ಧರಣಿ ಮಾಡುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.