ಮುಳ್ಳಿಕಟ್ಟೆ: ಮದುವೆ, ಶುಭ ಕಾರ್ಯಗಳು ನಡೆಯದೆ ಇರುವುದರಿಂದ ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂವಿನ ದರ ಕುಸಿದಿದ್ದು ರೈತರಿಗೆ ನಷ್ಟವಾಗಿದೆ.
ಶುಭ ಕಾರ್ಯಗಳು ನಡೆಯದೇ ಇರುವುದರಿಂದ ಮಲ್ಲಿಗೆ ಹೂ ಬೇಡಿಕೆ ಕಳೆದುಕೊಂಡಿದ್ದು, ದರ ಕುಸಿದಿದೆ. ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂತಹ ಬೇಡಿಕೆ ಇಲ್ಲ. ಬಿಸಿಲ ಬೇಗೆಗೆ ಹೂವಿನ ಇಳುವರಿಯಲ್ಲೂ ಕುಂಠಿತವಾಗಿದೆ. ಹಳದಿ ಸೇವಂತಿಗೆ, ಕೆಂಪು-ಸೇವಂತಿಗೆ, ಸಿಂಗಾರ ದರ ಹೆಚ್ಚಳವಾಗಿದೆ.
ಮೇ ತಿಂಗಳ ಆರಂಭದಲ್ಲೇ ಮೌಡ್ಯ ಬಂದಿರುವುದರಿಂದ ಶುಭ ಕಾರ್ಯಗಳು ನಿಂತಿವೆ. ಹಾಗಾಗಿ ಮಲ್ಲಿಗೆ ದರ ಕುಸಿದಿದೆ. ಬಿಸಿಲ ಹೊಡೆತದಿಂದ ಇಳುವರಿಯಲ್ಲೂ ಕುಂಠಿತವಾಗಿದೆ.
ಹಿಂದೆಂದಿಗಿಂತಲೂ ಈ ಬಾರಿ ಸೀಯಾಳ ದರ ದುಪ್ಪಟ್ಟು ಹೆಚ್ಚಳವಾಗಿದೆ. ಜನರ ಬೇಡಿಕೆಯನ್ನೆ ಬಂಡವಾಳ ಮಾಡಿಕೊಂಡಿದ್ದ ಸೀಯಾಳ ವ್ಯಾಪಾರಸ್ಥರು ಮತ್ತು ಮಧ್ಯವರ್ತಿಗಳು ಹೆಚ್ಚುದರಕ್ಕೆ ಮಾರುತ್ತಿದ್ದಾರೆ. ದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
ಏಪ್ರಿಲ್, ಮೇ ತಿಂಗಳು ಮಲ್ಲಿಗೆ ಹೂವಿನ ಸೀಸನ್ ಆಗಿದ್ದು, ಈ ತಿಂಗಳಲ್ಲಿ ಮದುವೆ, ಶುಭ ಕಾರ್ಯ ಸೇರಿದಂತೆ ದೇವತಾ ಕಾರ್ಯಗಳು ಜರುಗುವುದು ಸಾಮಾನ್ಯ. ಮಕ್ಕಳಿಗೆ ರಜಾ ದಿನವಾಗಿರುವುದರಿಂದ ಶುಭ ಕಾರ್ಯಕ್ರಮ ಗಳು ಹೆಚ್ಚಾಗಿ ನಡೆಯುತ್ತಿದ್ದು, ಶುಭ ಕಾರ್ಯಕ್ರಮ ಆಯೋಜನೆಗೆ ಭರ್ಜರಿ ತಯಾರಿ ಕೂಡ ಮಾಡಿಕೊಳ್ಳಲಾಗುತ್ತದೆ.
ವ್ಯಾಪಾರಸ್ಥರಿಗೆ ಉತ್ತಮ ವ್ಯವಹಾರ ನಡೆಯುವ ತಿಂಗಳು ಕೂಡ ಹೌದು. ಬೊಂಡದ ದರ ದುಪ್ಪಟ್ಟು ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ. ಪ್ರಸ್ತುತ ಮೌಡ್ಯ ಬಂದಿರುವ ಕಾರಣ ವ್ಯಾಪಾರ ವಹಿವಾಟಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಮಾಹಿತಿ ಕಂಡು ಬಂದಿದೆ.