ಬಳ್ಳಾರಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು ಒಂದು ವರ್ಷ ಕಳೆದರೂ ಸಾಧನೆ ಮಾತ್ರ ಶೂನ್ಯ ರಾಜ್ಯದಲ್ಲಿ ಒಂದೇ ಒಂದು ಕಿಮೀ ರಸ್ತೆಗಳಿಲ್ಲ. ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ 2023 ನಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಗೆ ಬಹುಮತ ನೀಡಿದ್ದು, ನಾನು ಓರ್ವ ಕೇಂದ್ರ ಸಚಿವನಾಗಿ ಈ ಸರಕಾರ ಐದು ವರ್ಷ ಪೂರೈಸಲೆಂದು ಆಶಿಸುತ್ತೇನೆ. ಆದರೆ, ತುಘಲಕ್ ದರ್ಬಾರ್ ಆಗಬಾರದು. ಕಾಂಗ್ರೆಸ್ ನಲ್ಲಿನ ಆಂತರಿಕ ಬೇಗುದಿ, ಅಸಮಾಧಾನದ ಕಾರಣಕ್ಕೆ ಸರಕಾರ ಬಲಿಯಾದರೆ ಏನು ಮಾಡಲಾಗದು. ಅದಕ್ಕೆ ನಾವು ಹೊಣೆಯಲ್ಲ’ ಎಂದರು.
ಆಸ್ಪತ್ರೆಗಳಿಗೆ ಔಷಧ ಇಲ್ಲ. ಮೂರು ತಿಂಗಳಾದರೂ ಸರಕಾರಿ ನೌಕರರಿಗೆ ವೇತನ ನೀಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ರಾಜ್ಯದಲ್ಲಿ ಅತ್ಯಂತ ಅದಕ್ಷ ಶಿಕ್ಷಣ ಮಂತ್ರಿ. ಸರಕಾರ ದಿವಾಳಿ ಆಗಿದ್ದು, ಭ್ರಷ್ಟಾಚಾರ ತಾಂಡವಾಡುತ್ತಿದೆ. ದೇಶದ ಅನೇಕ ಭಾಗಗಳಲ್ಲಿ ನಡೆಯುತ್ತಿರುವ ಚುನಾವಣೆಗಳಿಗೆ ರಾಜ್ಯದ ಕಾಂಗ್ರೆಸ್ ಸರಕಾರ ಎಟಿಎಂ ಆಗಿದೆ. ತುಷ್ಠೀಕರಣ ನೆಪದಲ್ಲಿ ರಾಮೇಶ್ವರ ಬಾಂಬ್ ಸ್ಫೋಟವನ್ನು ಸಿಲಿಂಡರ್ ಸ್ಫೋಟ ಎಂದು ಸೂಚಿಸಿದರು.