ಲಖನೌ : ಆರನೇ ಹಂತದ ಮತದಾನ ದೇಶದಲ್ಲಿ ಪ್ರಗತಿಯಲ್ಲಿದೆ, ರಾಷ್ಟ್ರ ರಾಜಧಾನಿಯ ಏಳು ಕ್ಷೇತ್ರಗಳು ಮತ್ತು ಉತ್ತರ ಪ್ರದೇಶದ ಹದಿನಾಲ್ಕು ಕ್ಷೇತ್ರಗಳು ಇದರಲ್ಲಿ ಸೇರಿವೆ. ಕೊನೆಯ ಹಂತದ ಚುನಾವಣೆಯಲ್ಲಿ ಉತ್ತರ ಪ್ರದೇಶದ ಹದಿಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಈ ನಡುವೆ, ಬಿಜೆಪಿಯ ಚಾರ್ ಸೋ ಪಾರ್ ಹೇಳಿಕೆಯ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. 400 ಪಾರ್ ಎನ್ನುವುದು 400 ಸೀಟ್ ನಲ್ಲಿ ಬಿಜೆಪಿ ಮೈತ್ರಿಕೂಟ ಸೋಲಲಿದೆ ಎಂದರ್ಥ ಎಂದು ಹೇಳಿದ್ದಾರೆ.
” ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಬಿಜೆಪಿಯ 400 ಸೋ ಪಾರ್ ಎಂದು ಕರೆ ನೀಡಿತ್ತು. 400ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳಲ್ಲಿ ಅವರನ್ನು ಮತದಾರರು ಸೋಲಿಸುತ್ತಾರೆ ಎಂದು ಇದರ ಅರ್ಥ. ಇನ್ನು ಉಳಿದ143 ಕ್ಷೇತ್ರಗಳನ್ನು ಗೆಲ್ಲಲು ಮಾತ್ರ ಬಿಜೆಪಿಯು ಶ್ರಮಿಸುತ್ತಿದೆ ” ಎಂದು ಅಖಿಲೇಶ್ ಯಾದವ್ ಲೇವಡಿ ಮಾಡಿದ್ದಾರೆ.
ಮಚಲೀಶಹರ್ ನಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಖಿಲೇಶ್, ” ಬಿಜೆಪಿಯು ತನ್ನ ಇತಿಹಾಸದಲ್ಲಿ ದಾಖಲಾಗುವಂತ ಹೀನಾಯ ಸೋಲಿನತ್ತ ಸಾಗುತ್ತಿದೆ. ನೀವೆಲ್ಲರೂ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ, ಬಿಜೆಪಿಯನ್ನು ಹೊರಗಟ್ಟಬೇಕು ” ಎಂದು ಅಖಿಲೇಶ್ ಯಾದವ್ ಮನವಿ ಮಾಡಿದ್ದಾರೆ.
ಕೊನೆಯ ಹಂತದ ಚುನಾವಣೆ ಜೂನ್ 1ರಂದು ನಡೆಯಲಿದೆ. ಮಹಾರಾಜಗಂಜ್, ಗೋರಖಪುರ, ಕುಶಿನಗರ, ದಿಯೋರಾ, ಬನ್ಸಾಗನ್, ಘೋಷಿ, ಸಲೀಂಪುರ, ಬಲಿಯಾ, ಘಾಜಿಪುರ, ಚಂದೌಳಿ, ವಾರಣಾಸಿ, ಮಿರ್ಜಾಪುರ ಮತ್ತು ರಾಬರ್ಟ್ಸ್ ಗಂಜ್ ಕ್ಷೇತ್ರದ ಚುನಾವಣೆ ಕೊನೆಯ ಹಂತದಲ್ಲಿ ನಡೆಯಲಿದೆ.