ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ಎಸ್ ಐ ಟಿ ಅಧಿಕಾರಿಗಳು ಬಂಧನ ಮಾಡುತ್ತಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಹಾಸನದಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಬಂಧನ ವಿಚಾರವಾಗಿ, ಇಲ್ಲಿ ಬಿಜೆಪಿ ಕಾಂಗ್ರೆಸ್ , ಜೆಡಿಎಸ್ ಎಂಬ ಪ್ರಶ್ನೆ ಇಲ್ಲ. ಯಾರು ಈ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೋ ಅಂತವರನ್ನು ಅರೆಸ್ಟ್ ಮಾಡ್ತಾರೆ. ಇದೀಗ 11 ಜನರನ್ನು ಅರೆಸ್ಟ್ ಮಾಡಿದ್ದಾರೆ. ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಅನ್ನೋ ಡೌಟ್ ಮಾಡ್ತಾರೋ ಅರೆಸ್ಟ್ ಮಾಡ್ತಾರೆ ಎಂದರು.
ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ನೇರವಾಗಿ ಎಲ್ಲಿಯೂ ಸಚಿವರ ಹೆಸರು ಹೇಳಿಲ್ಲ. ಆದರೆ ಗುತ್ತಿಗೆದಾರ ಸಂತೋಷ ಪಾಟೀಲ್ ಅಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೆಸರು ಹೇಳಿದ್ರು. ಹಾಗಾಗಿ ನಾವು ರಾಜೀನಾಮೆ ಕೇಳಿದ್ದು ಎಂದರು. ಚಂದ್ರಶೇಖರನ್ ಆತ್ಮಹತ್ಯೆ ವಿಚಾರವಾಗಿ ಸಿಐಡಿ ತನಿಖೆ ನಡೆಯುತ್ತಿದ್ದು, ಆ ಇಲಾಖೆಯಿಂದ ದೂರು ಬಂದಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮೊತ್ತದ ಬಗ್ಗೆ ಹೇಳ್ತಾ ಇದ್ದಾರೆ. ತನಿಖೆ ನಡೆಯುತ್ತಿದೆ, ಸತ್ಯ ಹೊರ ಬರುತ್ತದೆ ಎಂದರು.
ನಿಗಮದ ಅಕೌಂಟ್ ನಿಂದ ಬೇರೆ ಅಕೌಂಟ್ ಗಳಿಗೆ ಹಣ ಹೋಗಿದೆ ಅಂತ ಮಾಹಿತಿ ಇದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಬಿಜೆಪಿಯವರು ರಾಜೀನಾಮೆ ಕೇಳ್ತಾನೆ ಇರ್ತಾರೆ. ಯಾರ ಸೂಚನೆ ಮೇರೆಗೆ ಹಣ ಹೋಗಿದೆ ಅಂತ ತನಿಖೆ ನಡೆಯುತ್ತಿದೆ.ಡೆತ್ ನೋಟ್ ನಲ್ಲಿ ಸಚಿವರ ಅಂತ ಬರೆದಿದ್ದಾರೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.
‘ ಪ್ರಜ್ವಲ್ ಬಂಧನಕ್ಕೆ ಎಲ್ಲಾ ರೀತಿಯಲ್ಲೂ ಕ್ರಮ ತೆಗೆದುಕೊಳ್ಳಬೇಕು. ವಾರೆಂಟ್ ಜಾರಿಯಾಗಿರೋದ್ರಿಂದ ಬಂಧನ ಮಾಡಲೇಬೇಕು. ಎಸ್ಐಟಿ ಅವರು ಕಾಯ್ತ ಇದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ಅರೆಸ್ಟ್ ಮಾಡ್ತಾರೆ. ನಂತರ ಅವರ ಹೇಳಿಕೆಗಳು ಮತ್ತೊಂದು ಏನು ಪ್ರಕ್ರಿಯೆ ಶುರು ಆಗುತ್ತವೆ’ ಎಂದು ಸೂಚಿಸಿದರು.