ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗಡ್ಡ ಬಿಡುವಾಗಲೂ ಮತ್ತದನ್ನು ಶೇವ್ ಮಾಡುವಾಗಲೂ ನನ್ನ ಮಾತನ್ನೇ ಕೇಳುತ್ತಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದರು.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 2022ರಲ್ಲಿ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ನಾನು ರಾಹುಲ್ ಗಾಂಧಿಯ ಉದ್ದನೆಯ ಗಡ್ಡದ ಬಗ್ಗೆ ಕಮೆಂಟ್ ಮಾಡಿ ಅವರು ಇರಾಕ್ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ರಂತೆ ಕಾಣುತ್ತಾರೆ ಎಂದು ಹೇಳಿದ ಬಳಿಕ ಅವರು ಕ್ಲೀನ್ ಶೇವ್ ಮಾಡಿದ್ದರು ಎಂದರು.
ಟೀ ಶರ್ಟ್ ಧರಿಸುವುದು ದೊಡ್ಡ ವಿಷಯ ಎಂದು ರಾಹುಲ್ ಗಾಂಧಿ ಭಾವಿಸಿದ್ದಾರೆ. ವಯನಾಡ್ ಸಂಸದರು ತಮ್ಮ ಸಾರ್ವಜನಿಕ ರ್ಯಾಲಿಗಳಲ್ಲಿ ಪ್ರದರ್ಶಿಸುತ್ತಿರುವ ಸಂವಿಧಾನದ ಪುಸ್ತಕವು ಭಾರತೀಯ ಸಂವಿಧಾನವಲ್ಲ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಅವರನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡರು. ರಾಹುಲ್ ಗಾಂಧಿ ಕ್ಲೀನ್ ಶೇವ್ ಮಾಡಿದ ಬಳಿಕ ಅಮುಲ್ ಬೇಬಿಯಂತೆ ಕಾಣುತ್ತಿದ್ದರು ಎಂದು ನಾನು ಹೇಳಿದಾಗ ಅವರು ಗಡ್ಡ ಬೆಳಸಿದ್ದಾರೆ.