ಬೆಂಗಳೂರು: ಅಭಿವೃದ್ಧಿ ನಿಗಮದಲ್ಲಿ ಅಗಿರುವ ಹಣಕಾಸಿನ ದುರ್ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೊಡಬೇಕೋ ಬೇಡವೋ ಅನ್ನೋದು ಸಚಿವ ಬಿ ನಾಗೇಂದ್ರ ಅವರಿಗೆ ಬಿಟ್ಟ ವಿಚಾರ, ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ವಾಲ್ಮೀಕಿ ಹಾಗೆಯೇ ಅವರನ್ನು ಸಂಪುಟದಲ್ಲಿಟ್ಟಕೊಳ್ಳಬೇಕೋ ಬೇಡವೋ ಅನ್ನೋದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ಸಂಗರಿ ಮತ್ತು ಸಚಿವ ಸಂಪುಟದ ಮುಖ್ಯಸ್ಥನಾಗಿ ಅವರಿಗಿರುವ ಪರಮಾಧಿಕಾರ ಎಂದು ಹೇಳಿದರು.
ಹಿಂದೆ ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಡಿವೈ ಎಸ್ ಪಿ ಎಂಕೆ ಗಣಪತಿ ಮತ್ತು ಐಎಎಸ್ ಅಧಿಕಾರಿ ಡಿಕೆ ರವಿ ಆತ್ಮಹತ್ಯೆ ಪ್ರಕರಣಗಳಲ್ಲಿ ಆಗ ಗೃಹಸಚಿವರಾಗಿದ್ದ ಕೆಜೆ ಜಾರ್ಜ್ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಿದ್ದರು. ನಂತರ ಪ್ರಕರಣವನ್ನು ಸಿಬಿಐಗೆ ವಹಿಸಿಕೊಟ್ಟಾಗ ಜಾರ್ಜ್ ನಿರ್ದೋಷಿ ಅಂತ ಸಾಬೀತಾಯಿತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಬೆಳಕಿಗೆ ಬಂದಾಗ ನಾಗೇಂದ್ರ ಪಲಾಯನ ಮಾಡುವ ಪ್ರಯತ್ನ ಮಾಡಿಲ್ಲ ಎಂದರು.
24 ಗಂಟೆಯೊಳಗೆ ಸುದ್ದಿಗೋಷ್ಠಿ ನಡೆಸಿ ಹಣದ ದುರುಪಯೋಗ ನಡೆದಿರುವುದನ್ನು ಅಂಗೀಕರಿಸಿದರು. ಮೃತ ಪಿ ಚಂದ್ರಶೇಖರನ್ ಸಹ ನೇರವಾಗಿ ಸಚಿವನ ಮೇಲೆ ಆರೋಪ ಹೊರಿಸಿಲ್ಲ ಅಧಿಕಾರಿಗಳ ಮೇಲೆ ಒತ್ತಡವಿತ್ತು ಅಂತ ಹೇಳಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.