ಭಾರತದಲ್ಲಿ ಚಿನ್ನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪನಿಯು ವಿವಿಧ ವಿಭಾಗಗಳಲ್ಲಿ ಉಳಿಕೆ ಮೂಲ / ಕಲ್ಯಾಣ ಕರ್ನಾಟಕ ವೃಂದ ದಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ.
ಈ ಹುದ್ದೆಗಳಿಗೆ ಸ್ಥಳಿಯೇತರ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಹಟ್ಟಿ ಚಿನ್ನಗಣಿಯಲ್ಲಿ ಜಿ8 ಹಾಗೂ ಜಿ5 ದರ್ಜೆಯ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಉಳಿಕೆ ಮೂಲ/ ಸ್ಥಳೀಯೇತರ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ವಿವರಗಳನ್ನು ಪ್ರತ್ಯೇಕವಾಗಿ ಕೆಳಗಿನಂತೆ ತಿಳಿಸಲಾಗಿದೆ.
ಉಳಿಕೆ ಮೂಲ/ ಸ್ಥಳೀಯೇತರ ವೃಂದದ ಹುದ್ದೆಗಳು
ಸಹಾಯಕ ಫೋರೈನ್ (ಗಣಿ) 01
ಸಹಾಯಕ ಫೋರೈನ್ (ಲೋಹ ಶಾಸ್ತ್ರ) 02
ಲ್ಯಾಬ್ ಸಹಾಯಕ 01
ಸಹಾಯಕ ಫೋರೈನ್ (ಭೂ -ಗರ್ಭಶಾಸ್ತ್ರ) 01
ಸಹಾಯಕ ಫೋರೈನ್ (ಡೈಮಂಡ್ ಡ್ರಿಲ್ಲಿಂಗ್ / ಭೂಕೆಳಮ್ಮೈ ವಜ್ರಭೈರಿಗೆ) 01
ಸಹಾಯಕ ಫೋರೈನ್ (ಮೆಕ್ಯಾನಿಕಲ್) 03
ಐಟಿಐ ಫಿಟ್ಟರ್ ದರ್ಜೆ-II (ಗಣಿ ವಿಭಾಗ) 09
ಐಟಿಐ ಫಿಟ್ಟರ್ ದರ್ಜೆ-II (ಲೋಹ ವಿಭಾಗ) 02
ಐಟಿಐ ಇಲೆಕ್ಟ್ರಿಕಲ್ ದರ್ಜೆ-II (ತಾಂತ್ರಿಕ ವಿಭಾಗ) 02
ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದ ಹುದ್ದೆಗಳು
ಸಹಾಯಕ ಫೋರೈನ್ (ಗಣಿ) 15
ಸಹಾಯಕ ಫೋರೈನ್ (ಲೋಹ ಶಾಸ್ತ್ರ) 05
ಸಹಾಯಕ ಫೋರೈನ್ ( ಸಿವಿಲ್) 01
ಸಹಾಯಕ ಫೋರೈನ್ ( ಇಲೆಕ್ಟ್ರಿಕಲ್) 01
ಸಹಾಯಕ ಫೋರೈನ್ (ಭೂಗರ್ಭಶಾಸ್ತ್ರ) 02
ಸಹಾಯಕ ಫೋರೈನ್ (ಡೈಮಂಡ್ ಡ್ರಿಲ್ಲಿಂಗ್ / ಭೂಕೆಳಮ್ಮೈ ವಜ್ರಭೈರಿಗೆ) 01
ಸಹಾಯಕ ಫೋರೈನ್ (ಮೆಕ್ಯಾನಿಕಲ್) 16
ಭದ್ರತಾ ನಿರೀಕ್ಷಕರು 06
ಐಟಿಐ ಫಿಟ್ಟರ್ ದರ್ಜೆ-II (ಗಣಿ ವಿಭಾಗ) 45
ಐಟಿಐ ಫಿಟ್ಟರ್ ದರ್ಜೆ-II (ಲೋಹ ವಿಭಾಗ) 15
ಐಟಿಐ ಫಿಟ್ಟರ್ ದರ್ಜೆ-II (ಭೂ ಅನ್ವೇಷಣೆ ವಿಭಾಗ) 02
ಐಟಿಐ ಇಲೆಕ್ಟ್ರಿಕಲ್ ದರ್ಜೆ-II (ತಾಂತ್ರಿಕ ವಿಭಾಗ) 02
ಸೆಕ್ಯೂರಿಟಿ ಗಾರ್ಡ್ 24
ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ 3 ವರ್ಷದ ಡಿಪ್ಲೊಮ ಹಾಗೂ 2 ವರ್ಷದ ಐಟಿಐ, ಮೂರು ವರ್ಷದ ಪದವಿ, ದ್ವಿತೀಯ ಪಿಯುಸಿ ಪಾಸ್ ಮಾಡಿರಬೇಕು.
ವೇತನ ಶ್ರೇಣಿ : Rs.25000-48020 + ಅನ್ವಯಿಸುವ ಕೈಗಾರಿಕೆ ತುಟ್ಟಿ ಭತ್ಯೆ.
ನೇಮಕಾತಿ ಪರೀಕ್ಷೆಗಳ ಕುರಿತು ಕೆಲವು ಸೂಚನೆಗಳು
ವೃತ್ತಿ / ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುವ ದಿನಾಂಕ ಹಾಗೂ ಸ್ಥಳದ ಮಾಹಿತಿಯನ್ನು ಅರ್ಜಿ ಹಾಕಿದವರಿಗೆ ಕಂಪನಿಯ ವೆಬ್‌ಸೈಟ್ ಹಾಗೂ ಇ-ಮೇಲ್ /ಎಸ್‌ಎಂಎಸ್ ಮೂಲಕ ತಿಳಿಸಲಾಗುವುದು. ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗುವುದು.
ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 1:5 ಅಭ್ಯರ್ಥಿಗಳಿಗೆ ಮಾತ್ರ ದೈಹಿಕ /ಸಹಿಷ್ಣುತಾ ಪರೀಕ್ಷೆಗೆ ಹಾಜರಾಗಲು ಸಂಬಂಧಿಸಿದವರಿಗೆ ದೈಹಿಕ / ಸಹಿಷ್ಣುತಾ ಪರೀಕ್ಷೆಯ ವಿವರಗಳು / ಮಾಹಿತಿಯನ್ನು ಕಂಪನಿಯ ವೆಬ್‌ಸೈಟ್ ಹಾಗೂ ಇ-ಮೇಲ್ / ಎಸ್‌ಎಂಎಸ್ ಮೂಲಕ ತಿಳಿಸಲಾಗುವುದು ಹಾಗೂ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗುವುದು.