This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National NewsPolitics NewsState News

ಮೋದಿ ಗೆಲುವನ್ನು ಸಂಭ್ರಮಿಸಲು 10 ಸಾವಿರ ಲಡ್ಡು, ಪಟಾಕಿ, ಸಿದ್ಧಗೊಳಿಸಿದ ಅಭಿಮಾನಿಗಳು

ಮೋದಿ ಗೆಲುವನ್ನು ಸಂಭ್ರಮಿಸಲು 10 ಸಾವಿರ ಲಡ್ಡು, ಪಟಾಕಿ, ಸಿದ್ಧಗೊಳಿಸಿದ ಅಭಿಮಾನಿಗಳು

2024 ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಕ್ಷಣಗಣನೆ ಶುರುವಾಗಿದ್ದು, ಇದೀಗ ಇಡೀ ದೇಶದ ಚಿತ್ತ ನಾಳೆ ನಡೆಯಲಿರುವ ಚುನಾವಣಾ ಫಲಿತಾಂಶದ ಮೇಲಿದೆ. ಜೊತೆಜೊತೆಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎನ್ನುವ ಕುತೂಹಲ ಕೂಡಾ ಹೆಚ್ಚಾಗಿದೆ.

ಪ್ರಧಾನಿ ಮೋದಿಯವರ ಗೆಲುವನ್ನು ಸಂಭ್ರಮಿಸಲು ಇದಾಗಲೇ ತಯಾರಿ ಆರಂಭವಾಗಿದ್ದು, ಗುಜರಾತ್‌ನಲ್ಲಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಹಲವಾರು ಚಿತ್ರಮಂದಿರಗಳಲ್ಲಿ ಚುನಾವಣಾ ಫಲಿತಾಂಶಗಳನ್ನು ಪ್ರಸಾರ ಮಾಡಲು ಸಿದ್ಧತೆ ನಡೆಯುತ್ತಿದೆ. ಇನ್ನೊಂದೆಡೆ ಪಟಾಕಿಗಳನ್ನು ಸಿಡಿಸಿ ಹಬ್ಬವನ್ನು ಸಂಭ್ರಮಿಸಲು ಕಾರ್ಯಕರ್ತರು ತಯಾರಿ ನಡೆಸಿದ್ದಾರೆ. ಮತ್ತೊಂದೆಡೆ ನಾಳೆಯ ಸಂಭ್ರಮಾಚರಣೆಗೆ ಮುಂಬೈನ ಶ್ರೀ ಗಣೇಶ್‌ ಭಂಡಾರ್‌ ಸ್ವೀಟ್‌ ಅಂಗಡಿಯಲ್ಲಿ 10 ಸಾವಿರ ಲಡ್ಡುಗಳನ್ನು ಸಿದ್ಧಪಡಿಸಲಾಗುತ್ತಿದೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷಾ ವರದಿಗಳು ತಿಳಿಸಿವೆ. ಇದೇ ಖುಷಿಯಲ್ಲಿ ಮೋದಿ ಗೆಲುವನ್ನು ಸಂಭ್ರಮಿಸಲು ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಭರ್ಜರಿ ತಯಾರಿಯನ್ನು ನಡೆಸಿದ್ದಾರೆ. ಈ ಕುರಿತ ಪೋಸ್ಟ್‌ ಒಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.

";