ಬಾಗಲಕೋಟೆ
ಸಮಾಜದ ಮುಖ್ಯ ವರ್ಗವನ್ನು ಬಿಟ್ಟು ದೇಶ ಸೂಪರ್ ಪವರ್ ಆಗಲು ಸಾಧ್ಯವಿಲ್ಲ ಎಂದು ಸಾಹಿತಿ ಮುತ್ತು ನಾಯ್ಕರ್ ಹೇಳಿದರು.
ಕಸಾಪ ಜಿಲ್ಲಾ ಸಮ್ಮೇಳನದಲ್ಲಿ ದಮನಿತ ಲೋಕದ ಸಬಲೀಕರಣದ ಕುರಿತು ಉಪನ್ಯಾಸ ನೀಡಿದ ಅವರು, ದಮನಿತರು ಎಂಬ ಪದವೇ ಹಿಂಸೆ ಎನಿಸುತ್ತದೆ. ಈ ಸಮುದಾಯಕ್ಕೆ 21ನೇ ಶತಮಾನದಲ್ಲೂ ಹಿಂಸೆ, ಅತ್ಯಾಚಾರ ನಡೆಯುತ್ತಿದೆ. ಸಮಾಜದ ಎಲ್ಲ ವರ್ಗವನ್ನೂ ಒಟ್ಟಾರೆ ತೆಗೆದುಕೊಂಡು ಹೋದಾಗ ಮಾತ್ರ ಭಾರತ ಸೂಪರ್ ಪವರ್ ಆಗಲು ಸಾಧ್ಯ ಎಂದರು.
ದೇಶದಲ್ಲಿ ದಮನಿತರು 26 ಕೋಟಿ ಜನರಿದ್ದು ಶೇ.10ರಷ್ಟು ಜನ ಮಾತ್ರ ಉದ್ಯಮ, ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕನಿಷ್ಠ ಶೇ.50 ರಷ್ಟಾದರೂ ಜನ ಮುಂದೆ ಬರಬೇಕು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದಬೇಕು. ಇದರ ಅರಿವು ಮೂಡಿಸುವಲ್ಲಿ ಕಸಾಪದಂತಹ ಸಮ್ಮೇಳನಗಳು ಮುಖ್ಯ ವೇದಿಕೆಯಾಗಿದ್ದು ಉದ್ಯಮಶೀಲತೆ ಬೆಳೆಸಲು ಸರಕಾರ ಹಲವು ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದು ಹೇಳಿದರು.
ಧಾರವಾಡದ ಸಾಹಿತಿ ಸದಾಶಿವ ಮರ್ಜಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕೃ?Á್ಣ ಯಡಹಳ್ಳಿ, ಎಲ್.ಸಿ.ಯಂಕಂಚಿ, ವೈ.ಡಿ.ಕಿರಸೂರ, ಅಮರೇಶ ಕೊಳ್ಳಿ, ಗುರುರಾಜ ಲೂತಿ, ಸೋಮಲಿಂಗ ಬೇಡರ, ಸರ್ವಾಧ್ಯಕ್ಷ ತಾತಾಸಾಹೇಬ ಬಾಂಗಿ, ಶಿವಾನಂದ ಶೆಲ್ಲಿಕೇರಿ ಇತರರು ಇದ್ದರು.