This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsNational NewsPolitics NewsState News

ಜನವಸತಿ ಇರುವಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ : ತಿಮ್ಮಾಪೂರ

ಜನವಸತಿ ಇರುವಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ : ತಿಮ್ಮಾಪೂರ

ಬಾಗಲಕೋಟೆ

ಜನವಸತಿ ಇರುವಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಬೇಕು ಎಂದು ಅಬಕಾರಿ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ಸೋಮವಾರ ಸಂಜೆ ಜರುಗಿದ ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಗಲಕೋಟೆ ಜಿಲ್ಲೆಗೆ ಸಂಬAಧಿಸಿದAತೆ ಪುನರ್ ವಸತಿ, ಪುನರ್ ನಿರ್ಮಾಣ ಹಾಗೂ ಭೂ ಸ್ವಾಧೀನ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪುನರ್‌ವಸತಿಯಲ್ಲಿ ಎಲ್ಲಿ ಜನ ಬಂದು ವಾಸಿಸುತ್ತಿದ್ದಾರೆ ಅಲ್ಲಿ ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಸ್ಮಶಾನದಂತಹ ಮೂಲಭೂತ ಸೌಕರ್ಯಗಳಿಗೆ ಮೊದಲ ಆಧ್ಯತೆ ನೀಡಿ ಅಂತಹ ಕಾಮಗಾರಿಗಳನ್ನು ನಿರ್ಮಾಣ ಮಾಡುವ ಕೆಲಸ ಮಾಡಬೇಕು ಎಂದರು.

ಇನ್ನೂ 10 ರಿಂದ 15 ವರ್ಷಗಳ ನಂತರ ಜನ ಬಂದು ವಾಸಿಸುವ ಪುನರ್ ವಸತಿ ಕೇಂದ್ರಗಳಲ್ಲಿ ಈಗಾಗಲೇ ಗ್ರಂಥಾಲಯ ನಿರ್ಮಿಸಿರುವುದು , ಮನೆಗಳು ಇಲ್ಲದೇ ಇರುವಲ್ಲಿ ಶೌಚಾಲಯ ನಿರ್ಮಿಸಿರುವುದು ಇವುಗಳೆಲ್ಲ ಅಧಿಕಾರಿಗಳು ಬೇರೆ ಉದ್ದೇಶದಿಂದ ನಿರ್ಮಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಎಂದೂ ಪ್ರವಾಹ ಬರದೇ ಇರುವಂತಹ ಸ್ಥಳದಲ್ಲಿ ಕಟ್ಟಡಗಳನ್ನು ನಿರ್ಮಿಸಿದ್ದಿರಿ, 17 ರಿಂದ 31 ಕಾಮಗಾರಿಗಳನ್ನು ಕೈಗೊಂಡಿದ್ದು, ಮೊದಲ 17 ಕಾಮಗಾರಿಗಳಿಗೆ 28 ಕೋಟಿ, 31 ಕಾಮಗಾರಿಗೆ 52 ಕೋಟಿ ಖರ್ಚು ಮಾಡಿ ಹಾಳು ಮಾಡಿದ್ದು ಇರುತ್ತದೆ.

ಪುನರ್‌ವಸತಿಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಜನಪ್ರತಿನಿಧಿಗಳ ಗಮನಕ್ಕೆ ತನ್ನಿ ಇದರಿಂದ ಜನರು ಜನಪ್ರತಿನಿಧಿಗಳನ್ನು ಕೇಳಿದಾಗ ಈ ರೀತಿ ಅಭಿವೃಧ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಅನಾವಶ್ಯಕವಾಗಿ ಹಣ ವ್ಯಯವಾಗುವುದನ್ನು ತಡೆಗಟ್ಟಬೇಕು. ವರ್ಗಾವಣೆ ಪ್ರಕ್ರೀಯೆ ನಡೆಯುತ್ತಿದ್ದು, ಇಲ್ಲಿನ ಕಚೇರಿಗಳಿಗೆ ಅಧಿಕಾರಿಗಳು ಬಂದು ಹಾಜರಾಗುವರೆಗೂ ಇಲ್ಲಿರುವ ಅಧಿಕಾರಿಯನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಶಾಸಕ ಜೆ ಟಿ ಪಾಟೀಲ ಮಾತನಾಡಿ ಭೂ ಸ್ವಾಧೀನ ವಿಷಯದಲ್ಲಿ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅಧಿಕಾರ ನಡೆಸುತ್ತಿದ್ದಿರಿ, ಕೆಲವೊಂದು ಕಡೆ ಮನಸೋ ಇಚ್ಚೆ ಆರ್ ಸಿ ಕೊಟ್ಟಿದ್ದಿರಿ, ಇದಕ್ಕೆ ಹೊಣೆಗಾರರು ಯಾರು? ಭೂಸ್ವಾಧೀನದಲ್ಲಿ ಸಂತ್ರಸ್ಥರಿಗೆ ಯಾವ ರೀತಿ ಪರಿಹಾರ ನೀಡಬೇಕು, ಕಾನೂನು ಏನು ಹೇಳುತ್ತದೆ ಅಧ್ಯಯನ ಮಾಡಿ, ಸಮಸ್ಯೆ ಇದ್ದಲ್ಲಿ ಜನಪ್ರತಿನಿಧಿಗಳ ಗಮನಕ್ಕೆ ತಂದು ಚರ್ಚೆಯ ಮೂಲಕ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಿ ಎಂದು ಹೇಳಿದರು.

ಸಭೆಯಲ್ಲಿ ಶಾಸಕ ಹೆಚ್ ವಾಯ್ ಮೇಟಿ, ಎಮ್‌ಎಲ್‌ಸಿಗಳಾದ ಹಣಮಂತ ನಿರಾಣಿ, ಪಿ.ಹೆಚ್ ಪೂಜಾರ ಜಿಲ್ಲಾಧಿಕಾರಿ ಜಾನಕಿ ಕೆ ಎಮ್. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಾಧಿಕಾರದ ಮಹಾ ವ್ಯವಸ್ಥಾಪಕ ರಮೇಶ ಕಳಸದ ಸೇರಿದಂತೆ ಇತರರು ಇದ್ದರು.

Nimma Suddi
";