ಬಾಗಲಕೋಟೆ-
ಪ್ರಸಕ್ತ ವರ್ಷ ರಾಜ್ಯದಲ್ಲಿ ಅನುಮತಿ ಪಡೆದ ಕೇವಲ ಮೂರು ವೈದ್ಯಕೀಯ ಕಾಲೇಜುಗಳಲ್ಲಿ ಉತ್ತರ ಕರ್ನಾಟಕದ ಎಸ್.ಆರ್.ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ ಒಂದಾಗಿದ್ದು ಇದು ಜುಲೈ 31ರಂದು ಅಧಿಕೃತ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.
ಜಿಲ್ಲೆಯ ಬೀಳಿಗೆ ತಾಲೂಕಿನ ಬಾಡಗಂಡಿಯ ಎಸ್ಆರ್ ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ಘಾಟನಾ ಸಮಾರಂಭಕ್ಕೆ ದಿವ್ಯ ಸಾನಿಧ್ಯವನ್ನ ಶಿರಹಟ್ಟಿಯ ಜಗದ್ಗುರು ಶ್ರೀ ಫಕೀರೇಶ್ವರ ಭಾವೈಕ್ಯತಾ ಪೀಠದ ಜಗದ್ಗುರು ಶ್ರೀ ಫಹೀರದಿಂಗಾಲೇಶ್ವರ ಮಹಾಸ್ವಾಮಿಗಳು, ನೇತೃತ್ವವನ್ನ ಎರೆಹೊಸಳ್ಳಿಯ ಶ್ರೀ ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಮಹಾಸ್ವಾಮಿಗಳು ಹಾಗೂ
ಅಧ್ಯಕ್ಷತೆ ಕರ್ನಾಟಕ ಸರಕಾರದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ, ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆಯನ್ನು ವೈದ್ಯಕೀಯ ಶಿಕ್ಷಣ ಸಚಿವರರಾದ ಡಾ. ಶರಣಪ್ರಕಾಶ ಪಾಟೀಲ, 630 ಹಾಸಿಗೆ ಸಾಮರ್ಥ್ಯದ ನವೀಕೃತ ಆಸ್ಪತ್ರೆ ಉದ್ಘಾಟನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ ಗುಂಡೂರಾವ್, ಕಾರ್ಯಕ್ರಮದ ಉದ್ಘಾಟನೆಯನ್ನು ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ಬಿ. ತಿಮ್ಮಾಪೂರ ಮಾಡಲಿದ್ದು ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಪಿ. ಸಿ. ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಶಾಸಕ ಜೆ. ಟಿ. ಪಾಟೀಲ, ವಿ.ಪ.ಸದಸ್ಯರಾದ ಪಿ. ಹೆಚ್. ಪೂಜಾರ, ಹನಮಂತ ನಿರಾಣಿ ಅಲ್ಲದೇ ಅನೇಕ ಜನ ಗಣ್ಯಾತಿಗಣ್ಯರು ಆಗಮಿಸಲಿದ್ದು ಈಗಾಗಲೇ ಜಲನಿರೋಧಕ( ವಾಟರ್ ಪ್ರುಪ್) ವೇದಿಕೆ, ಹಾಗೂ ಊಟದ ಸ್ಥಳದ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ ಎಂದರು.
ಎಸ್.ಆರ್. ಪಾಟೀಲ್ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಎಂ ಎನ್ ಪಾಟೀಲ್ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸುವ 25,000 ಜನರಿಗೆ ಆಸನದ ವ್ಯವಸ್ಥೆಯನ್ನು ಮಾಡಲಾಗಿದ್ದು. ಜನರು ಆರಾಮವಾಗಿ ಕುಳಿತುಕೊಂಡು ಕಾರ್ಯಕ್ರಮವನ್ನು ವೀಕ್ಷಿಸಲು ಅಲ್ಲಲ್ಲಿ ಎಲ್.ಇ.ಡಿ.ಪರದೆಗಳನ್ನು ಅಳವಡಿಸಲಾಗುವುದು, ಮಹಿಳೆಯರಿಗೆ, ಪುರುಷರಿಗೆ, ವಯೋವೃದ್ದರಿಗೆ ಪ್ರತ್ಯೇಕವಾದ ಊಟದ ಕೌಂಟರ್ ಗಳನ್ನು ನಿರ್ಮಾಣ ಮಾಡಲಾಗಿದೆ. ಎಸ್ ಆರ್ ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯದ ಪಕ್ಕದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ವಾಹನಗಳಿಗೆ ನಿಲುಗಡೆ ವ್ಯವಸ್ಥೆಯನ್ನು ಮಾಡಲಾಗಿದ್ದು ಎಸ್. ಆರ್. ಪಾಟೀಲ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ತಿಳಿಸಿದರು.
ಬಾಕ್ಸ್: ಸನ್ಮಾನಕ್ಕೆ ಹಾರ, ತುರಾಯಿ, ಶಾಲು, ಬೇಡ
ಜುಲೈ 31 ನನ್ನ ಹುಟ್ಟು ಹಬ್ಬದ ದಿನವಾಗಿದ್ದು ನನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು ಸನ್ಮಾನಕ್ಕೆಂದು ಶಾಲು,ಹಾರ ತೆಗೆದುಕೊಂಡು ವೇದಿಕೆಗೆ ಆಗಮಿಸದೆ ಸಹಕರಿಸಲು ಎಸ್.ಆರ್. ಪಾಟೀಲ ಅವರು ವಿನಂತಿಸಿದರು. ನನ್ನ ಹುಟ್ಟು ಹಬ್ಬದ ದಿನ ‘ನಿಮ್ಮನ್ನು ಹೆತ್ತವರ’ ಮಂದಿರ ಹಾಗೂ ವೈದ್ಯಕೀಯ ಮಹಾವಿದ್ಯಾಲಯವನ್ನು ಸಮಾಜಕ್ಕೆ ಲೋಕಾರ್ಪಣೆ ಮಾಡೋಣ ಎಂದು ಎಂದು ಹೇಳಿದರು.
ಸಂದರ್ಭದಲ್ಲಿ ಎಸ್ ಟಿ ಪಾಟೀಲ್, ಎಂ ಎಸ್ ಕಾಳಗಿ ,ಎಂ.ಎಲ್. ಕೆಂಪಲಿಂಗನ್ನವರ, ಶ್ರೀಶೈಲ ಸೂಳಿಕೇರಿ, ಎಲ್. ಬಿ. ಕುರ್ತುಕೋಟಿ, ಜಿ ಎನ್ ಪಾಟೀಲ್, ಹನಮಂತ ಕಾಖಂಡಕಿ, ಯಮನಪ್ಪ ರೊಳ್ಳಿ, ಸಂತೋಷ ಬಗಲಿದೇಸಾಯಿ ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು ಹಿತೈಷಿಗಳು ಎಸ್.ಆರ್. ಪಾಟೀಲ್ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮತ್ತಿತರರು ಇದ್ದರು.