ಅಮೀನಗಡ
ಸ್ಥಳಿಯ ಪಟ್ಟಣ ಪಂಚಾಯಿತಿ ಕಚೇರಿ ಎದುರು ಚಿಕ್ಕದಾದ ಬ್ಯಾನರ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.
ಕಚೇರಿ ಆವರಣದಲ್ಲಿ ಏಜಂಟರು, ಮಧ್ಯವರ್ತಿಗಳಿಗೆ ನಿಷೇಧಿಸಲಾಗಿದೆ. ಅಂತವರು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಬ್ಯಾನರ್ ಅಳವಡಿಸಲಾಗಿದೆ.
ಪಟ್ಟಣ ಪಂಚಾಯಿತಿಗೆ ನೂತನ ಮುಖ್ಯಾಧಿಕಾರಿಯಾಗಿ ಆಗಮಿಸಿದ ಸುರೇಶ ಪಾಟೀಲ ಇಂತಹ ನೂತನ ಚಿಂತನೆಗೆ ಮುನ್ನುಡಿ ಬರೆದಿದ್ದು ಸಾಮಾನ್ಯ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮನೆ ಉತಾರೆ, ಜನನ-ಮರಣ ಉತಾರೆ, ಭೂಪರಿವರ್ತನೆ, ನಾನಾ ಪರವಾನಿಗೆಗೆ ಸಂಬAಸಿದAತೆ ಹಲವು ಕಾರ್ಯಗಳಿಗೆ ನೇರವಾಗಿ ಫಲಾನುಭವಿಗಳು ಬಾರದೆ ಅವರ ಪರವಾಗಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು ಎನ್ನಲಾಗಿದೆ. ರಜಾ ಹಾಗೂ ಕಚೇರಿ ಅವ ನಂತರವೂ ಇಂತಹ ಚಟುವಟಿಕೆ ನಡೆಯುತ್ತಿದ್ದವು ಎಂಬ ದೂರು ಕೇಳಿತ್ತು.
ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಖ್ಯಾಧಿಕಾರಿ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಜತೆಗೆ ಕಚೇರಿ ಆವರಣದಲ್ಲಿ ಗುಟ್ಕಾ ತಿಂದು ಉಗುಳುವುದನ್ನು ನಿಷೇಸಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಕೆಲ ಸಿಬ್ಬಂದಿ ಬೇರೆಡೆಯಿಂದ ಕೆಲವರಿಗೆ ಗುಟ್ಕಾ ಸೇರಿದಂತೆ ಇತರೆ ಮಾದಕ ವಸ್ತು ತರುವುದನ್ನು ನಿಲ್ಲಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಸಾರ್ವಜನಿಕರ ಕೆಲಸಗಳಿಗೆ ಮಧ್ಯವರ್ತಿಗಳಿಲ್ಲದೆ ನೇರವಾಗಿ ಸಂಬAದಪಟ್ಟ ಮಾಲೀಕರಾಗಲಿ ಅಥವಾ ಅವರ ವಾರಸುದಾರರಾಗಲಿ ಅರ್ಜಿ ನೀಡಲಿ ಎಂಬ ಉದ್ದೇಶದಿಂದ ಈ ಕ್ರಮಕ್ಕೆ ಪಪಂ ಆಡಳಿತ ಮುಂದಾಗಿದೆ ಎನ್ನಲಾಗಿದೆ.
ನಾಡಕಚೇರಿಯಲ್ಲೂ ಜಾರಿಯಾಗಲಿ
ಸ್ಥಳೀಯ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕಿದಂತೆ ನಾಡಕಚೇರಿ ವ್ಯಾಪ್ತಿಯಲ್ಲೂ ಇಂತಹ ವ್ಯವಸ್ಥೆ ಜಾರಿಯಾಗಲಿ ಎಂಬುದು ಸ್ಥಳೀಯ ಆಗ್ರಹವಾಗಿದೆ. ಪಪಂ ಕಚೇರಿಗಿಂತಲೂ ಹೆಚ್ಚಿನ ಸೇವೆ ನೀಡುವ ಕಂದಾಯ ಇಲಾಖೆಯಲ್ಲಿ ಹಲವು ಕೆಲಸಗಳಿಗೆ ಸಾರ್ವಜನಿಕರು ಬರುತ್ತಾರೆ. ಇಲ್ಲೂ ಸಹ ಕೆಲ ಮಧ್ಯವರ್ತಿಗಳ ಹಾವಳಿ ಇದ್ದು ಅದನ್ನು ತಪ್ಪಿಸುವ ನಿಟ್ಟಿನಲ್ಲಿ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಯಾದರೆ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗುತ್ತದೆ.