ಬಾಗಲಕೋಟೆ
ಗಣೇಶ ಚತುರ್ಥಿ ನಿಮಿತ್ತ ಪಿಒಪಿ ಗಣಪತಿ ಮಾರಾಟ, ತಯಾರು, ಪ್ರತಿಷ್ಠಾಪನೆ ಮಾಡುವಂತಿಲ್ಲ. ಕಂಡು ಬಂದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಪಪಂ ಮುಖ್ಯಾಕಾರಿ ಸುರೇಶ ಪಾಟೀಲ ಹೇಳಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಸ್ಥಳೀಯವಾಗಿ ಗಣೇಶ ಮೂರ್ತಿ ತಯಾರಕರು ಹಾಗೂ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ನಿಷೇತ ಪಿಒಪಿ ಗಣೇಶ ಮೂರ್ತಿ ಬಳಕೆಯನ್ನು ಕಳೆದ ನಾಲ್ಕೆöÊದು ವರ್ಷದ ಹಿಂದೆಯೇ ಪಿಒಪಿ ಗಣೇಶ ಬಳಕೆ ನಿಷೇದಿಸಲಾಗಿದೆ. ಇದು ಎಲ್ಲರಿಗೂ ತಿಳಿದ ವಿಷಯ ಎಂದರು.
ಹೀಗಿದ್ದರೂ ಕೆಲವೆಡೆ ಪಿಒಪಿ ಗಣೇಶ ಮಾರಾಟ ಮಾಡುವುದು ಕಂಡು ಬಂದಿದೆ. ಪರಿಸರ ಹಾನಿಗೊಳಿಸುವ ಇಂತಹ ಮೂರ್ತಿಗಳ ಮಾರಾಟ, ತಯಾರು, ಪ್ರತಿಷ್ಠಾಪನೆ ಮಾಡುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮಕ್ಕೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.
ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರೀಕ್ಷಕ ಸಂತೋಷ ವ್ಯಾಪಾರಿಮಠ, ಮಾತನಾಡಿ, ಪರಿಸರದಲ್ಲಿ ಕರಗದ ಇಂತಹ ಗಣೇಶ ಮೂರ್ತಿಗಳಿಂದ ಹಾನಿಯೇ ಹೊರತು ಲಾಭವಿಲ್ಲ. ಮೂರ್ತಿ ಪ್ರತಿಷ್ಠಾಪನೆ ವೇಳೆ ಪರಿಸರಕ್ಕೆ ಪೂರಕವಾದ ಗಣೇಶ ಮೂರ್ತಿಗಳಿರಲಿ. ಎಲ್ಲರೂ ಸಂಭ್ರಮದಿAದ ಹಬ್ಬ ಆಚರಿಸುವಲ್ಲಿ ಸರಕಾರದ ನಿಯಮ ಪಾಲಿಸೋಣ ಎಂದು ಹೇಳಿದರು.
ಗಣೇಶ ಮೂರ್ತಿ ತಯಾರಕರು, ಮಾರಾಟಗಾರರು, ಪಪಂ ಸಿಬ್ಬಂದಿ ಇದ್ದರು.