This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ವಚನಗಳು ವಿಜ್ಞಾನದ ಕಣಜ:ರಮೇಶ ಬಳ್ಳಾ

ವಚನಗಳು ವಿಜ್ಞಾನದ ಕಣಜ:ರಮೇಶ ಬಳ್ಳಾ

ದೇವರ ದಾಸಿಮಯ್ಯನವರ ವಚನಗಳ ಮಾಸಿಕ ಚಿಂತನಗೋಷ್ಟಿ

ಬಾಗಲಕೋಟೆ

ವಚನ ಸಾಹಿತ್ಯದ ಮೂಲಕ ಲಿಂಗ-ತಾರತಮ್ಯ, ಬಡವ-ಶ್ರೀಮಂತ, ಮೇಲು-ಕೀಳುಗಳೆಂಬ ಅಸಮಾನತೆ ತೊಡೆದು ಹಾಕುವಲ್ಲಿ ವೈಚಾರಿಕ ಕ್ರಾಂತಿಯನ್ನೇ ಮಾಡಿದ ೧೧ನೇ ಶತಮಾನದ ಆದ್ಯವಚನಕಾರ ದೇವರ ದಾಸಿಮಯ್ಯನವರು ಹೊಸ ಯುಗವನ್ನೇ ಸೃಷ್ಟಿಸಿ ದೇವಭಾಷೆಯನ್ನು ಜನಭಾಷೆಯನ್ನಾಗಿ ಮಾಡಿದ್ದಾರೆ ಎಂದು ಶಿಕ್ಷಕ ರಮೇಶ ಬಳ್ಳಾ ಹೇಳಿದರು.

ನಗರದ ದೇವಾಂಗ ಸಮಾಜದಿಂದ ವಿದ್ಯಾಗಿರಿಯ ಮಲ್ಲಪ್ಪ ಚೆನ್ನಿ ನಿವಾಸದಲ್ಲಿ ಆಯೋಜಿಸಿದ್ದ ದಾಸಿಮಯ್ಯನವರ ವಚನಗಳ ಮಾಸಿಕ ಚಿಂತನಗೋಷ್ಠಿಯಲ್ಲಿ ದಾಸಿಮಯ್ಯನವರ ವಚನಗಳಲ್ಲಿ ವೈಚಾರಿಕತೆ ಮತ್ತು ವಿಜ್ಞಾನ ಕುರಿತು ಮಾತನಾಡಿದ ಅವರು, ಶರಯ ಮೇಲೆ ಧರೆಯ ಕರಗದಂತಿರಿಸಿದೆ, ಅಂಬರಕ್ಕೆ ಕಂಬ ಭೋದಿಗೆ ಇಲ್ಲದಂತಿರಿಸಿದೆ. ಭೂಮಿಗೆ ಗುರುತ್ವಾಕರ್ಷಣೆಯ ಶಕ್ತಿ ಇದೆ ಎಂಬ ಸುಳಿವನ್ನು ವಚನದ ಮೂಲಕ ದಾಸಿಮಯ್ಯನವರು ನೀಡಿದ್ದಾರೆ. ಅವರು ನೇರ ಹಾಗೂ ಪ್ರಶ್ನಿಸುವ ಮನೋಭಾವ ಉಳ್ಳವರಾಗಿದ್ದರು. ವಚನಗಳಲ್ಲಿ ವಿಡಂಬನೆ, ಟೀಕೆ ಇದೆ ಹಾಗೂ ವೈಜ್ಞಾನಿಕ ಮನೋಭಾವ ಎದ್ದು ಕಾಣುತ್ತದೆ. ಅವರು ನಿಸರ್ಗವಾದಿ, ತತ್ವಜ್ಞಾನಿಯಾಗಿದ್ದರು ಎಂದು ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು.

ಗೋಷ್ಠಿಯ ಸಾನ್ನಿಧ್ಯ ವಹಿಸಿದ್ದ ಪ್ರದೀಪ್ ಗುರೂಜಿ, ನಡೆ-ನುಡಿಗಳು ಕ್ರಿಯೆ ಜ್ಞಾನಗಳು ಒಂದಾಗಿದ್ದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ. ಅದು ಅಂತರಂಗ ಶುದ್ದಿ ಮತ್ತು ಬಹಿರಂಗ ಶುದ್ದಿಗೆ ಎಡೆಮಾಡಿ ಕೊಡುತ್ತದೆ ಎಂದು ಹೇಳಿದರು.

ನಿವೃತ್ತ ಉಪನ್ಯಾಸಕ ಎಸ್.ವಿ.ಚೌಡಾಪುರ ಅಧ್ಯಕ್ಷತೆ ವಹಿಸಿದ್ದರು. ಶುಭಾ ಚನ್ನಿ, ಮೋಹನ್ ಗೌರೀಶ, ಶಿವಶಂಕರ ಮುತ್ತಗಿ, ಬಸವರಾಜ ಚೆನ್ನಿ, ಶಂಕ್ರಪ್ಪ ಹಳ್ಳದ, ಎಸ್.ಬಿ.ಮಾಡಬಾಳ, ರವಿ ಕರ್ಜಗಿ, ವಿಠ್ಠಲ ಹಡ್ಲಗೇರಿ, ಸುರೇಶ ದಡ್ಡಿ, ಮಲ್ಲಪ್ಪ ಚನ್ನಿ ಇತರರಿದ್ದರು.

 

Nimma Suddi
";