This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Crime NewsLocal NewsNational NewsState News

ಬಾಗಲಕೋಟೆಯಲ್ಲಿ ಸುಲಿಗೆಕೋರರ ಬಂಧನ

ಬಾಗಲಕೋಟೆಯಲ್ಲಿ ಸುಲಿಗೆಕೋರರ ಬಂಧನ

ಬಾಗಲಕೋಟೆ

ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಜನರಿಂದ ಚಿನ್ನಾಭರಣ, ಹಣ ದೋಚುತ್ತಿದ್ದ ಸುಲಿಗೆಕೋರರನ್ನು ಬಾಗಲಕೋಟೆ ಪೊಲೀಸರು ಆ.12 ರಂದು ಬಂಸಿದ್ದಾರೆ.

ನಗರದ ಹೊರವಲಯದ ಸಂಗಮಕ್ರಾಸ್ ಬಳಿ ಜನರನ್ನು ದರೋಡೆ ಮಾಡುವ ಸಿದ್ಧತೆಯಲ್ಲಿದ್ದ 6 ಜನರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯಪುರ ಜಿಲ್ಲೆ ಹಿಟ್ನಳ್ಳಿ ಗ್ರಾಮದ ಶ್ಯಾಮ ರತ್ನಾಕರ (32), ಶ್ರೀಧರ ಮಾದರ (26), ಸುರೇಶ ಮಾದರ (21) ಸುನೀಲ ಮಾದರ (21), ರಾಹುಲ್ ಮಾದರ (19) ಇಂಡಿ ದರ್ಗಾಗಲ್ಲಿಯ ಪ್ರಕಾಶ ಬಗಲೆನ್ನವರ (43) ಬಂತ ಆರೋಪಿಗಳು.

ಆರೋಪಿಗಳ ಪೈಕಿ ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಅಪ್ರಾಪ್ತ ಪರಾರಿಯಾಗಿದ್ದಾನೆ ಎಂದು ಎಎಸ್‌ಪಿ ಪ್ರಸನ್ನ ದೇಸಾಯಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಂತರಿAದ 1.51 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮಹೀಂದ್ರಾ ಎಕ್ಸ್ಯುವಿ 500 ವಾಹನ, ಮಚ್ಚು, ಕೊಡಲಿ, ಚಾಕು ಹಾಗೂ ಖಾರದ ಪುಡಿ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ದರೋಡೆಗೆ ಸಿದ್ಧತೆ ಮಾಡಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆ ಸಿಪಿಐ ಎಚ್.ಆರ್.ಪಾಟೀಲ, ಅಪರಾಧ ವಿಭಾಗದ ಪಿಎಸ್‌ಐ ಆರ್.ಡಿ.ಲಮಾಣಿ ನೇತೃತ್ವದ ತಂಡ ದಾಳಿ ಕೈಗೊಂಡು ಆರೋಪಿಗಳನ್ನು ಬಂಸಿದೆ.

ಎಸ್‌ಪಿ, ಎಎಸ್‌ಪಿ ಮಾರ್ಗದರ್ಶನದಲ್ಲಿ ಸಿಪಿಐ ಎಚ್.ಆರ್.ಪಾಟೀಲ ನೇತೃತ್ವದಲ್ಲಿ ಕ್ರೈಂ ಪಿಎಸ್‌ಐ ಆರ್.ಡಿ.ಲಮಾಣಿ ತಂಡ ದಾಳಿ ನಡೆಸಿತ್ತು. ಆರೋಪಿಗಳು ಬಾಗಲಕೋಟೆ, ನವಲಗುಂದ, ನಿಡಗುಂದಿ ಠಾಣೆಯ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ವಿವರಿಸಿದರು.

ತಂಡದಲ್ಲಿ ಸಿಪಿಐ, ಪಿಎಸ್‌ಐ ಜತೆಗೂಡಿ ಸಿಬ್ಬಂದಿಗಳಾದ ಎಂ.ಬಿ.ಬಳಬಟ್ಟಿ, ಬಿ.ಎಸ್.ಜಮದಾರಖಾನಿ, ಎಂ.ಎಸ್.ಸೋಲಾಪುರ, ಎಸ್.ಎಸ್.ನಡಗೇರಿ, ಎಂ.ಬಿ.ಗಣಾಚಾರಿ, ಆರ್.ಬಿ.ಪದರಾ, ಕೋಮಾರ, ಐ.ಜಿ.ಬಾರಕೇರ, ಎಸ್.ಬಿ.ಮನಮಗೌಡರ, ಪಿ.ಎಸ್.ಮಲ್ಲಾಪುರ, ಬಿ.ಎಸ್.ಹುಲ್ಲಣ್ಣವರ, ಪಿ.ಎಸ್.ಪಾಟೀಲ, ಎನ್.ಎಂ.ಗುರಾಣಿ, ಎಸ್.ಪಿ.ಹಳೇಮನಿ, ಆರ್.ಎಫ್.ಬಾಗವಾನ, ಯಲ್ಲಪ್ಪ ಬಿಲ್ಲಾರ, ಕರಿಯಪ್ಪ ಮಗಡಾರ, ಎಂ.ಬಿ.ಕರಡಿ ಇದ್ದರು. ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿ ನಗದು ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದರು.
ಎಎಸ್‌ಪಿ ಮಹಾಂತೇಶ ಜಿದ್ದಿ, ಡಿವೈಎಸ್‌ಪಿ ಪಂಪನಗೌಡ ಇದ್ದರು.

 

Nimma Suddi
";