This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Education NewsLocal NewsState News

ವಿಶ್ವಭಾರತಿ ಪತ್ತಿನ ಸಂಘಕ್ಕೆ 6ಲಕ್ಷ ರೂ. ನಿವ್ವಳ ಲಾಭ

ವಿಶ್ವಭಾರತಿ ಪತ್ತಿನ ಸಂಘಕ್ಕೆ 6ಲಕ್ಷ ರೂ. ನಿವ್ವಳ ಲಾಭ

ವಿಶ್ವಭಾರತಿ ಪತ್ತಿನ ಸಂಘಕ್ಕೆ 6ಲಕ್ಷ ರೂ. ನಿವ್ವಳ ಲಾಭ.

ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಿ.

ಬಾಗಲಕೋಟೆ – ಸಾಲ ಪಡೆದ ಗ್ರಾಹಕರು ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡಿ ಸಹಕಾರಿ ಸಂಘಗಳ ಪ್ರಗತಿಗೆ ಸಹಕರಿಸಬೇಕು ಎಂದು ಕೆ.ಪಿ.ಅರಿಷಿಣಗೋಡಿ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ ವಿಶ್ವಭಾರತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 14 ನೆಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಗ್ರಾಹಕರು ಪಡೆದ ಸಾಲವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಸಭಲತೆ ಸಾಧಿಸಬೇಕು ಎಂದರು.

ಜನರು ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳಲ್ಲಿ ಹೆಚ್ಚು ಹಣವನ್ನು ಠೇವಣಿ ಇಟ್ಟು ಬಡ್ಡಿ ಪಡೆಯುವ ಜೊತೆಗೆ ಬಡವರು, ಸಾಮಾನ್ಯ ವರ್ಗದ ಜನರಿಗೆ ಸಾಲ ಸೌಲಭ್ಯ ಒದಗಿಸಲು ನೆರವಾಗಬೇಕು ಎಂದು ಅರಿಷಿಣಗೋಡಿ ಹೇಳಿದರು.

ಸಂಘದ ವ್ಯವಸ್ಥಾಪಕ ಟಿ.ಏಚ್.ಸಣ್ಣಪ್ಪನವರ ಸಂಘದ ವರದಿ ಮಂಡಿಸಿ, ಸಂಘ ಕಳೆದ ಮಾರ್ಚ ಅಂತ್ಯಕ್ಕೆ 5.93 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ರಂಗಣ್ಣ ಕಟಗೇರಿ, ಪಿಕೆಪಿಎಸ್ ಅಧ್ಯಕ್ಷ ವೇಮನ ಯಡಹಳ್ಳಿ, ಮಾಲತೇಶ ಅಮಾತೆಪ್ಪನವರ, ನಿರ್ದೇಶಕ ಗದಿಗೆಪ್ಪ ಅರಕೇರಿ,ಶಿವಾನಂದ ಅಂಗಡಿ ಮಾತನಾಡಿದರು.

ಲಚ್ಚಪ್ಪ ಬಾಳಕ್ಕನವರ, ಪಾಂಡುರಂಗ ಸಣ್ಣಪ್ಪನವರ, ಮುತ್ತಪ್ಪ ಬೆನ್ನೂರ,ನೀಲಪ್ಪ ದಾಸಪ್ಪನವರ, ನಿಂಗಪ್ಪ ಶಿರೂರ, ರಾಘು ಯಡಹಳ್ಳಿ, ನಿರ್ದೇಶಕರಾದ ಹಣಮಂತ ತೆಗ್ಗಿ, ವೆಂಕಟೇಶ ತಿಮ್ಮಾಪುರ, ಕೃಷ್ಣಾ ಪಾಟೀಲ, ತಿಪ್ಪಣ್ಣ ಗುಳೇದ, ಹಣಮಂತ ವಾಲೀಕಾರ, ತಿಮ್ಮಣ್ಣ ಸಣ್ಣಪ್ಪನವರ ಇದ್ದರು.

Nimma Suddi
";