This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Education NewsLocal NewsState News

ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದೆ

ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದೆ

ಅಮೀನಗಡ

ಹಿರಿಯರ ತ್ಯಾಗ-ಬಲಿದಾನ ಹಾಗೂ ಕಠಿಣ ಪರಿಶ್ರಮದ ಫಲವಾಗಿ ನಾವು ಈ ಸ್ವಾತಂತ್ರ‍್ಯ ಪಡೆದುಕೊಂಡಿದ್ದೇವೆ ಎಂದು ಉಪತಹಸೀಲ್ದಾರ್ ಎಂ.ಆರ್.ಹೆಬ್ಬಳ್ಳಿ ಹೇಳಿದರು.

ಪಟ್ಟಣದ ನಾಡಕಚೇರಿಯಲ್ಲಿ ೭೮ನೇ ಸ್ವಾತಂತ್ರೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹಿರಿಯರ ತ್ಯಾಗ-ಬಲಿದಾನದಿಂದ ಪಡೆದ ಸ್ವಾತಂತ್ರö್ಯವನ್ನು ಅರ್ಥಪೂರ್ಣವಾಗಿ ಅಚರಿಸೋಣ. ರಾಷ್ಟçಪಿತ ಮಹಾತ್ಮ ಗಾಂಧೀಜಿ ಹಾಗೂ ಅನೇಕ ಸ್ವಾತಂತ್ರö್ಯ ಹೋರಾಟಗಾರರು ತಮ್ಮ ಜೀವನದ ಸುಖಗಳನ್ನು ತ್ಯಜಿಸಿ ದೇಶಕ್ಕಾಗಿಯೇ ಪ್ರಾಣ ಮುಡಿಪಾಗಿಟ್ಟು ದೇಶವನ್ನು ಸ್ವಾತಂತ್ರಗೊಳಿಸಲು ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಕಂದಾಯ ನಿರೀಕ್ಷಕ ಡಿ.ಎಸ್.ಯತ್ನಟ್ಟಿ, ವಿಷಯ ನಿರ್ವಾಹಕಿ ಶಿಲ್ಪಾ ಪಾಟೀಲ, ಗ್ರಾಮ ಆಡಳಿತಾಧಿಕಾರಿಗಳಾದ ಸುರೇಶ ಹುದ್ದಾರ, ರಾಜು ಹಗ್ಗದ, ಸಚಿನ ರಾಠೋಡ, ಆದಿತ್ಯ ಅವಟಿ, ಕುಮಾರ ಗುಡೂರ, ಬಾಲು ತಳಗಿನಮನಿ, ಪ್ರಕಾಶ ಚಳ್ಳಗಿಡದ, ಗ್ರಾಮ ಸಹಾಯಕರು ಇದ್ದರು.

ವಿವಿದೆಡೆ ಧ್ವಜಾರೋಹಣ
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಸ್‌ಐ ಜ್ಯೋತಿ ವಾಲಿಕಾರ, ಸಂಗಮೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಅಧ್ಯಕ್ಷರಾದ ಶಂಕರರಾಜೇAದ್ರ ಸ್ವಾಮೀಜಿ, ಓಂ ಶ್ರೀರಕ್ಷಾ ಪತ್ತಿನ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಅಜ್ಮೀರ ಮುಲ್ಲಾ, ಪಿಕೆಪಿಎಸ್‌ನಲ್ಲಿ ಅಧ್ಯಕ್ಷ ಸಿದ್ದು ಭದ್ರಶೆಟ್ಟಿ, ಸಂಗಮೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಎಂ.ಆರ್.ಹಿರೇಮಠ, ಸಿದ್ದಗಂಗಾ ಪತ್ತಿನ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಸಿದ್ದು ಭದ್ರಶೆಟ್ಟಿ, ಭುವನೇಶ್ವರಿ ಸಹಕಾರಿ ಪತ್ತಿನ ಸಂಘದಲ್ಲಿ ಅಧ್ಯಕ್ಷ ಎಸ್.ಎಸ್.ಚಳ್ಳಗಿಡದ, ಎಕ್ಸಲೆಂಟ್ ಶಾಲೆಯಲ್ಲಿ ನಿವೃತ್ತ ಯೋಧ ನಂದಪ್ಪ ಭದ್ರಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.


ಮೇಲಧಿಕಾರಿಗೆ ವರದಿ
ಅಮೀನಗಡದ ನಾಡಕಚೇರಿಯಲ್ಲಿ ನಡೆದ ಧ್ವಜಾರೋಹಣ ವೇಳೆ ಕಾರ್ಯಕ್ರಮದ ನಂತರ ಆಗಮಿಸಿದ ಐಹೊಳೆ ಗ್ರಾಮ ಆಡಳಿತಾಧಿಕಾರಿ ಎಸ್.ಬಿ.ಅಂಗಡಿ ಅವರನ್ನು ಉಪತಹಸೀಲ್ದಾರ್ ತರಾಟೆಗೆ ತೆಗೆದುಕೊಂಡರು. ಕೆಲಸದಲ್ಲಿ ಶ್ರದ್ಧೆ ಇಲ್ಲ, ಒಬ್ಬ ಸಿನೀಯರ್ ಆಗಿ ನೀವು ಈ ರೀತಿ ಮಾಡುವುದು ಸರಿಯಲ್ಲ. ಬೇರೆ ಕಾರ್ಯಕ್ರಮಗಳಿಗಾದರೆ ಸರಿ ಇಂತಹ ರಾಷ್ಟಿçÃಯ ಕಾರ್ಯಕ್ರಮಕ್ಕೂ ಈ ರೀತಿ ಆಗುತ್ತಿದ್ದರೆ ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತರಾಟೆಗೆ ತೆಗೆದುಕೊಂಡರು.

Nimma Suddi
";