This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Crime NewsEducation NewsHealth & FitnessLocal NewsState News

ನಮ್ಮ ಊರು, ನಮ್ಮ ಬೀಟ್ ಮೊಬೈಲ್ ನಂಬರ ಕಾರ್ಯಕ್ಕೆ ಚಾಲನೆ

ನಮ್ಮ ಊರು, ನಮ್ಮ ಬೀಟ್ ಮೊಬೈಲ್ ನಂಬರ ಕಾರ್ಯಕ್ಕೆ ಚಾಲನೆ

ಬಾಗಲಕೋಟೆ:

ವಾಟ್ಸಫ್ ಗ್ರೂಪ್ ಮೂಲಕ ಗ್ರಾಮಗಳಿಗೆ ಸಂಬAಧಿಸಿದ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ರೂಪಿಸಲಾದ ನಮ್ಮ ಊರು, ನಮ್ಮ ಪೊಲೀಸ್, ನಮ್ಮ ಬೀಟ್ ಮೊಬೈಲ್ ನಂಬರ ಕಾರ್ಯಕ್ಕೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ ನೀಡಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡ ನಮ್ಮ ಊರು, ನಮ್ಮ ಪೊಲೀಸ್, ನಮ್ಮ ಬೀಟ್ ಮೊಬೈಲ್ ನಂಬರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾ ಪೊಲೀಸ್ ವಿನೂತ ಕಾರ್ಯಕ್ರಮ ರೂಪಿಸಿದ್ದಾರೆ. ಇದರಿಂದ ವಾಟ್ಸಫ್ ಗ್ರೂಪ್ ಮೂಲಕ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಅವಕಾಶವಿರುತ್ತದೆ. ಇದೊಂದು ಉತ್ತಮ ಪ್ರಯೋಗವಾಗಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಜಿಲ್ಲೆಯಲ್ಲಿ ೬೨೭ ಗ್ರಾಮಗಳಿದ್ದು, ಅವುಗಳಲ್ಲಿ ೩೧೩ ಪೊಲೀಸ್ ಬೀಟ್‌ಗಳನ್ನು ಮಾಡಲಾಗಿದೆ. ಪ್ರತಿ ಬೀಟ್‌ಗೂ ವಿಶಿಷ್ಟವಾದ ನಮ್ಮ ಊರು, ನಮ್ಮ ಪೊಲೀಸ್, ನಮ್ಮ ಬೀಟ್ ಮೊಬೈಲ್ ನಂಬರ ಎಂಬ ದ್ಯೇಯ ವಾಕ್ಯದೊಂದಿಗೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ ೭೯೫ ವಾಟ್ಸ್ಫ್ ಗ್ರೂಪ್‌ಗಳನ್ನು ರಚಿಸಲಾಗಿದ್ದು, ಸದರಿ ಗ್ರೂಪ್‌ನಲ್ಲಿ ೧೩,೫೧೫ ಸಾರ್ವಜನಿಕರು ಇರುತ್ತಾರೆ. ತಮ್ಮ ಗ್ರಾಮಗಳಿಗೆ ಸಂಬAಧಿಸಿದ ಮಾಹಿತಿಯನ್ನು ಗ್ರೂಪ್‌ನಲ್ಲಿ ಹಂಚಿಕೊಳ್ಳಬಹುದಾಗಿದೆ. ಇದರಿಂದ ಸಾರ್ವಜನಿಕರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಓ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

Nimma Suddi
";