ಬಾಗಲಕೋಟೆ
ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ದೇಖೋ ಅಪ್ನಾ ದೇಶ್-ಪೀಪಲ್ಸ್ ಚಾಯ್ಸ್ ಎಂಬ ಅಭಿಯಾನ ಆರಂಭಿಸಿದೆ.
ಪ್ರವಾಸೋದ್ಯಮ ಮೇಲ್ದರ್ಜೆಗೇರಿಲು, ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆ ಸೇರಿದಂತೆ ಇತರೆ ಪ್ರವಾಸಿ ತಾಣಗಳಲ್ಲಿ ಹಲವು ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ವಿಶ್ವ ದರ್ಜೆಯಲ್ಲಿ ಈ ತಾಣಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಮುಂದಾಗಿದೆ.
ಈ ನಿಟ್ಟಿನಲ್ಲಿ ಇಂತಹ ಅಭಿಯಾನದಲ್ಲಿ ನಾಗರಿಕರು, ಪ್ರವಾಸಿಗರು ಆದ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು ಮೈಗರ್ವಮೆಂಟರ್ ವೇದಿಕೆಯಡಿ ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ ೧೫ರವರೆಗೆ ವೋಟ್ ಮಾಡುವ ಅವಕಾಶ ನೀಡಿದೆ. ಈ ಕ್ಯಾಂಪೇನ್ ಅಡಿಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲ, ಕೂಡಲಸಂಗಮ ಮತ್ತು ಇತರೆ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು http://innovateindia.mygov.in/dekho-apna-desh/ ಲಿಂಕ್ ಬಳಸಿ ವೋಟ್ ಮಾಡುವಂತೆ ಜಿಲ್ಲಾಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.