ಸಂಸ್ಥೆಯ ರಜತ ಮಹೋತ್ಸವ ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಬಾಗಲಕೋಟೆ
ಸೇವೆ ಎಂಬುದಕ್ಕೆ ಆಂದೋಲನ ರೂಪ ಒದಗಿಸಲು ಆರಂಭಗೊAಡ ಸೇವಾ ಭಾರತಿ ಟ್ರಸ್ಟ್ ತನ್ನ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ವರ್ಷವಿಡೀ ನಾನಾ ಸೇವಾ ಕಾರ್ಯಕ್ರಮ ಆಯೋಜಿಸಿದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಡಾ.ರಘು ಅಕಮಂಚಿ ಹೇಳಿದರು.
ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಜಿಲ್ಲಾಮಟ್ಟದ ಸ್ವಾಗತ ಸಮಿತಿ ಪದಾಕಾರಿಗಳ ಘೋಷಣೆ ಮತ್ತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ೧೯೯೯ರಲ್ಲಿ ಸೇವಾ ಭಾರತಿ ಸಂಸ್ಥೆ ತನ್ನ ಕಾರ್ಯಾರಂಭ ಮಾಡಿತು. ಸೇವೆಗೆ ದೊಡ್ಡದಾದ ಆಂದೋಲನ ರೂಪ ಒದಗಿಸುವ ಉದ್ದೇಶ ಹೊಂದಿದೆ. ರಾಷ್ಟಿçÃಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಮಂಗೇಶ ಬೇಂಡೆ ಅವರ ಮಾರ್ಗದರ್ಶನದಲ್ಲಿ ಆರಂಭಗೊAಡ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ ಎಂದು ಹೇಳಿದರು.
ವಿಪತ್ತು ನಿರ್ವಹಣೆ, ಶಾಲೆಗಳ ಆರಂಭ ಸೇರಿದಂತೆ ನಾನಾ ರೂಪಗಳಲ್ಲಿ ಸೇವಾ ಕಾರ್ಯಗಳನ್ನು ಸಂಸ್ಥೆ ಮಾಡುತ್ತಿದ್ದು ಈ ವರ್ಷ ರಜತ ಮಹೋತ್ಸವದ ಭಾಗವಾಗಿ ರಕ್ಷಾಬಂಧನ, ಸಸ್ಯಾಜ್ಞಾನ, ಕೊಳಗೇರಿ ಪ್ರದೇಶ, ಸರಕಾರಿ ಶಾಲೆಗಳಲ್ಲಿ ಆರೋಗ್ಯ ತಪಾಸಣೆ, ಮಕ್ಕಳಿಗಾಗಿ ಬಾಲ ಸಂಗಮ, ಕಿಶೋರಿ ಸಂಗಮ, ಮಹಿಳಾ ಸಂಗಮ ಸೇರಿದಂತೆ ಹಲವು ಸೇವಾ ಕಾರ್ಯ ಕೈಗೊಳ್ಳಲಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಬವಿವ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಆರ್ಎಸ್ಎಸ್ ಇಲ್ಲದೇ ದೇಶ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜದ ಎಲ್ಲ ಸ್ತರಗಳಲ್ಲಿ ಸಂಘ ತನ್ನ ನಿಸ್ವಾರ್ಥ ಕಾರ್ಯ ಚಟುವಟಿಕೆ ನಡೆಸುತ್ತಿದೆ. ಸೇವಾ ಭಾರತಿ ಸಂಸ್ಥೆಯ ರಜತ ಮಹೋತ್ಸವದ ಕಾರ್ಯಕ್ರಮ ವರ್ಷ ಪೂರ್ತಿ ನಡೆಯಲಿದ್ದು ಸಮಾಜದ ಪ್ರತಿಯೊಬ್ಬರು ಈ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಹೇಳಿದರು
ರಜತ ಮಹೋತ್ಸವ ರಾಜ್ಯ ಸಮಿತಿ ಕಾರ್ಯದರ್ಶಿ ಪ್ರೊ.ಎಚ್.ಡಿ.ಪಾಟೀಲ ಮಾತನಾಡಿದರು. ಜಿಲ್ಲಾ ಸಂಘಚಾಲಕ ಚಂದ್ರಶೇಖರ ದೊಡ್ಡಮನಿ, ಹಿರಿಯ ತಜ್ಞ ಡಾ.ಸುಭಾಸ್ ಪಾಟೀಲ, ಜಿಲ್ಲಾ ಸ್ವಾಗತ ಸಮಿತಿ ಅಧ್ಯಕ್ಷ ಮಹಾಂತೇಶ ಶೆಟ್ಟರ, ಕಾರ್ಯದರ್ಶಿ ಡಾ.ಗಂಗಾಧರ ಅಂಗಡಿ ಇತರರಿದ್ದರು.