ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಸಮೀಪದ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು 2024-25ನೇ ಸಾಲಿನ ಹುನಗುಂದ ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಹುನಗುಂದ ಕ್ರೀಡಾಂಗಣದಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದ ಖೋಖೋ ಪಂದ್ಯಾವಳಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಜಿಹಾಳ ತಂಡದ ವಿರುದ್ಧ ಗೆಲುವು ಸಾಧಿಸಿ ತಾಲೂಕು ಮಟ್ಟಕ್ಕೆ ಅರ್ಹತೆ ಪಡೆದರು.
ವೈಯಕ್ತಿಕ ವಿಭಾಗದಲ್ಲಿ ಅಮೃತಾ ನರಸಪ್ಪನವರ 200 ಮೀ. ಓಟದಲ್ಲಿ ಪ್ರಥಮ ಹಾಗೂ 600ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕಾ ಮಟ್ಟದ ಪ್ರವೇಶ ಪಡೆದರೆ, 200ಮೀ ಓಟದಲ್ಲಿ ನಾಗಪ್ಪ ಸೂಳಿಬಾವಿ ತೃತೀಯ ಸ್ಥಾನ ಪಡೆದರು. ಸಾಮೂಹಿಕ ವಿಭಾಗದಲ್ಲಿ ಬಾಲಕರು ಖೋಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು.
ಕೂಡಲಸಂಗಮ, ಧನ್ನೂರು, ಬಿಂಜವಾಡಗಿ, ನಾಗೂರು ಹಾಗೂ ಹುನಗುಂದ ಕ್ಲಸ್ಟರಿನ ವಿವಿಧ ಶಾಲೆಗಳ ಮಕ್ಕಳು ಈ ಕ್ರೀಡಾಕೂಟದಲ್ಲಿ ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದರು.
ವಿಜೇತ ಮಕ್ಕಳನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ, ಉಪಾಧ್ಯಕ್ಷೆ ರತ್ನವ್ವ ಕಡಿವಾಲ, ಸದಸ್ಯರಾದ ಸಂಗಪ್ಪ ಈರಣ್ಣವರ, ಬಸಪ್ಪ ಬಾರಕೇರ, ಮಲ್ಲೀಕಸಾಬ ನದಾಫ, ಗ್ರಾ.ಪಂ. ಸದಸ್ಯ ವೀರಪ್ಪ ಮಾಗಿ, ವೀರಭದ್ರಪ್ಪ ಕೊಳ್ಳೊಳ್ಳಿ, ಕೂಡ್ಲಯ್ಯ ಹಿರೇಮಠ, ಲಕ್ಷ್ಮಪ್ಪ ಮಾದರ, ನಾಗೂರು ಸಿಆರ್ಪಿ ಸಂಗಪ್ಪ ಚಲವಾದಿ, ಪ್ರಭಾರಿ ಮುಖ್ಯಗುರು ಎಂ ಜಿ ಬಡಿಗೇರ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.