This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsState News

ರಾಜರಾಜೇಶ್ವರಿ ಸಂಘ ಲಾಭದತ್ತ ದಾಪುಗಾಲು

ರಾಜರಾಜೇಶ್ವರಿ ಸಂಘ ಲಾಭದತ್ತ ದಾಪುಗಾಲು

ನಿಮ್ಮ ಸುದ್ದಿ ಬಾಗಲಕೋಟೆ

ಆಮೆಗತಿಯಲ್ಲಿ ಸಾಗುತ್ತಿದ್ದ ರಾಜರಾಜೇಶ್ವರಿ ಪತ್ತಿನ ಸಹಕಾರಿ ಸಂಘ ಕಳೆದ 10 ವರ್ಷದ ಅವಯಲ್ಲಿ ಲಾಭದತ್ತ ದಾಪಗಾಲು ಹಾಕುತ್ತಿದ್ದು 2023-24ನೇ ಸಾಲಿನಲ್ಲಿ ಸಂಘಕ್ಕೆ 32 ಲಕ್ಷ 85 ಸಾವಿರ ರೂ. ನಿವ್ವಳ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷರೂ ಆದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ಜಿಲ್ಲೆಯ ಹುನಗುಂದ ತಾಲೂಕಿನ  ಸೂಳೇಬಾವಿಯ ರಾಜರಾಜೇಶ್ವರಿ ಪತ್ತಿನ ಸಂಘದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1996 ರಲ್ಲಿ ಆರಂಭವಾದ ಸಂಘದ ಹಲವು ವರ್ಷದವರೆಗೆ ನಿಧಾನಗತಿಯಲ್ಲಿ ಬೆಳವಣಿಗೆ ಆಗುತ್ತ ಇದೀಗ 28 ವರ್ಷದ ವಾರ್ಷಿಕ ಮಹಾಸಭೆ ನಡೆಸುತ್ತಿದೆ. 2024ರ ಮಾರ್ಚ್ ಅಂತ್ಯಕ್ಕೆ 2,669 ಸದಸ್ಯರನ್ನು ಹೊಂದಿದ್ದು 97 ಲಕ್ಷ 37 ಸಾವಿರ ರೂ. ಷೇರ ಹಣವಿದೆ ಎಂದರು.

ನಾನಾ ಬ್ಯಾಂಕ್‌ಗಳಲ್ಲಿ 67 ಲಕ್ಷ ಹಣ ಇಡಲಾಗಿದ್ದು ಕೇಂದ್ರ ಕಚೇರಿ ಹಾಗೂ ಎಲ್ಲ ಶಾಖೆ ಸೇರಿ 24 ಲಕ್ಷ ಕೈ ಶಿಲ್ಕು ಹೊಂದಿದೆ. ಸೂಳೇಬಾವಿಯಲ್ಲಿನ ಪ್ರಧಾನ ಕಚೇರಿ ಸೇರಿ ಹಡಗಲಿ, ಲಾಯದಗುಂಡಿ, ಕೆಲವಡಿ ಹಾಗೂ ಹುಲಗಿನಾಳದಲ್ಲಿ ಶಾಖೆ ಹೊಂದಿದ್ದು ಪ್ರಸಕ್ತ ವರ್ಷದಲ್ಲಿ ಬಿಸಲದಿನ್ನಿ, ಹನಮನಾಳ ಕ್ರಾಸ್ ಹಾಗೂ ಮುಧೋಳದಲ್ಲಿ ಶಾಖೆ ಆರಂಭಿಸುವ ಚಿಂತನೆ ಇದೆ. ಜತೆಗೆ ಮುಂದಿನ ವಾರ್ಷಿಕ ಸಭೆಯೊಳಗೆ 40 ಲಕ್ಷ ಲಾಭದ ಗುರಿ ಹೊಂದಿದ್ದೇವೆ. 2015 ರಿಂದ ನಿರಂತರವಾಗಿ ಲಾಭದ ಪ್ರಮಾಣ ಹೆಚ್ಚುತ್ತ ಸಾಗಿದೆ. ಇದಕ್ಕೆ ಸಂಘದ ನಿರ್ದೇಶಕರು, ಪ್ರಾಮಾಣಿಕ ಸಿಬ್ಬಂದಿ ಕಾರಣರಾಗಿದ್ದಾರೆ ಎಂದು ಹೇಳಿದರು.

ಸೆ.22 ರಂದು ವಾರ್ಷಿಕ ಸಭೆ
ಸಂಘದ 2023-24ನೇ ಸಾಲಿನ ವಾರ್ಷಿಕ ಸಭೆ ಸೆ.22 ರಂದು ನಡೆಯಲಿದೆ. ಸಂಘದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅಧ್ಯಕ್ಷತೆಯಲ್ಲಿ ಅವರ ತೋಟದ ಮನೆ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಆಯೋಜಿಸಲಾಗಿದೆ. ಲಾಭ-ಹಾನಿ, ವೆಚ್ಚ ಪರಿಶೀಲನೆ, ಅಂದಾಜು ಪತ್ರಿಕೆಗೆ ಅನುಮೋದನೆ, ಲೆಕ್ಕಪರಿಶೋಧಕರ ನೇಮಕ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಪ್ರಧಾನ ವ್ಯವಸ್ಥಾಪಕ ಸುರೇಶ.ವೈ.ಎಂ. ತಿಳಿಸಿದ್ದಾರೆ.

 

Nimma Suddi
";