This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsLocal NewsNational NewsPolitics NewsState News

ಸ್ವಚ್ಛತಾ ಹೀ ಸೇವಾ ಆಂದೋಲನಕ್ಕೆ ಚಾಲನೆ, ಪ್ರತಿಜ್ಞಾವಿ ಬೋಧನೆ

ಸ್ವಚ್ಛತಾ ಹೀ ಸೇವಾ ಆಂದೋಲನಕ್ಕೆ ಚಾಲನೆ, ಪ್ರತಿಜ್ಞಾವಿ ಬೋಧನೆ

ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿ:ಗದ್ದಿಗೌಡರ

ನಿಮ್ಮ ಸುದ್ದಿ ಬಾಗಲಕೋಟೆ

ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ. ಹೀಗಾಗಿ ಸ್ವಚ್ಛತೆ ಕಾರ್ಯಕ್ಕೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಜಿಲ್ಲೆಯ ಐತಿಹಾಸಿಕ ಐಹೊಳೆಯ ಸ್ಮಾರಕಗಳ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡ ಸ್ವಚ್ಛತಾ ಹೀ ಸೇವಾ ವಿಶೇಷ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರಲ್ಲಿ ನೈರ್ಮಲ್ಯದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ಪಾಕ್ಷಿಕ ಆಂದೋಲನ ಹಮ್ಮಿಕೊಂಡಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ನಮ್ಮ ದೇಶ ಸ್ವಚ್ಚ ಹಾಗೂ ಸುಂದರವಾಗಿಡಲು ಸಾಧ್ಯವೆಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2014 ರಿಂದ 10 ವರ್ಷಗಳ ಕಾಲ ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ. ಈ ಅಭಿಯಾನದ 10ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಯೋಜನೆಯ ಸಾಧನೆಯ ಮೈಲಿಗಲ್ಲನ್ನು ಗೌರವಿಸಲು ಸ್ವಚ್ಛತಾ ಹೀ ಸೇವಾ ಅಭಿಯಾನವನ್ನು ಸ್ವಭಾವ್ ಸ್ವಚ್ಛತಾ ಸಂಸ್ಕಾರ ಎಂಬ ಧ್ಯೆಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.

ಸ್ವಚ್ಛತೆ ಕುರಿತು ಪ್ರತಿಜ್ಞಾವಿ ಬೋಸಿ ಮಾತನಾಡಿದ ಜಿಲ್ಲಾಕಾರಿ ಕೆ.ಎಂ.ಜಾನಕಿ, ಆರೋಗ್ಯವಂತ ಬದುಕಿಗೆ ಸ್ವಚ್ಛತೆಯ ಪರಿಕಲ್ಪನೆಯ ಅವಶ್ಯಕತೆ ಇದೆ. ರಾಷ್ಟçಪಿತ ಗಾಂಧೀಜಿ ತಮ್ಮ ಜೀವನ ವಿಧಾನದಲ್ಲೇ ಸ್ವಚ್ಛತೆ ಪರಿಪಾಲನೆ, ತಾವೇ ಸ್ವಚ್ಛತಾ ಸೈನಿಕರಾಗಿ ಕೆಲಸ ಮಾಡಿದ್ದಾರೆ. ಅವರ ಈ ಆದರ್ಶ ಮಕ್ಕಳಲ್ಲಿ ಬರಬೇಕಿದೆ. ಸ್ವಚ್ಛತೆ ಮಾಡುವುದು ಕಡಿಮೆ ಮಟ್ಟದ ಕೆಲಸ ಅಲ್ಲ. ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ತಪಾಸಣೆಗೆ ಚಾಲನೆ ನೀಡಲಾಯಿತು. ಸಸಿ ನೆಡಲಾಯಿತು. ಜಿಪಂ ಸಿಇಒ ಶಶಿಧರ ಕುರೇರ, ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಮುಖ್ಯ ಯೋಜನಾಕಾರಿ ಪುನಿತ್, ಮುಖ್ಯ ಲೆಕ್ಕಾಕಾರಿ ಸಿದ್ದರಾಮೇಶ್ವರ ಉಕ್ಕಲಿ, ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಿ.ಎಸ್.ಹಿತ್ತಲಮನಿ, ಸಹಾಯಕ ಯೋಜನಾಕಾರಿ ಭೀಮಪ್ಪ ತಳವಾರ, ಕಂದಾಯ ನಿರೀಕ್ಷಕ ಡಿ.ಎಸ್.ಯತ್ನಟ್ಟಿ, ಗ್ರಾಪಂ ಅಧ್ಯಕ್ಷ ಹನಮಂತ ಆಡಿನ್, ಪಿಡಿಒ ಮಹಾಂತೇಶ ಗೋಡಿ, ಗ್ರಾಮ ಆಡಳಿತಾಕಾರಿ ಎಸ್.ಬಿ.ಅಂಗಡಿ ಇತರರು ಇದ್ದರು.

ಅಧಿಕಾರಿಗಳಿಂದ ಸ್ವಚ್ಛತಾ ಕಾರ್ಯ
ಐಹೊಳೆ ಐತಿಹಾಸಿಕ ತಾಣಗಳಲ್ಲಿ ಒಂದಾದ ತಾರಬಸಪ್ಪÀ ಗುಡಿಯ ಆವರಣವನ್ನು ಜಿಲ್ಲಾಕಾರಿ ಕೆ.ಎಂ.ಜಾನಕಿ, ಜಿಪಂ ಸಿಇಓ ಶಶಿಧರ ಕುರೇರ, ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ತಹಸೀಲ್ದಾರ್ ನಿಂಗಪ್ಪ ಬಿರಾದಾರ ಸೇರಿದಂತೆ ಇತರೆ ಅಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸೇರಿ ಸ್ವಚ್ಛತಾ ಕಾರ್ಯ ಕೈಗೊಂಡರು. ಗುಡಿಯ ಮುಂದಿರುವ ಕಲ್ಯಾಣಿ ಸ್ವಚ್ಛತೆಗೆ ಕ್ರಮವಹಿಸಲು ಸಂಬAಸಿದ ಅಕಾರಿಗಳಿಗೆ ಡಿಸಿ ಸೂಚಿಸಿದರು.

ಪ್ರಕೃತಿ ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಪರಿಸರ ಸ್ವಚ್ಛಗೊಳಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದ ಉದ್ದೇಶದಿಂದ ಈ ಅಭಿಯಾನ ನಡೆಸಲಾಗುತ್ತಿದೆ. ಗಾಂÃಜಿ ಕನಸು, ಪ್ರಧಾನಮಂತ್ರಿ ಮೋದಿ ಕಲ್ಪನೆಯನ್ನು ಎಲ್ಲರೂ ಸಾಕಾರಗೊಳಿಸೋಣ.
-ಪಿ.ಸಿ.ಗದ್ದಿಗೌಡರ, ಸಂಸದ.

 

Nimma Suddi
";