ನಿಮ್ಮ ಸುದ್ದಿ ಬಾಗಲಕೋಟೆ
ಜ್ಞಾನಮಾರ್ಗದಿಂದ ಕೂಡಿದ ವಿಶ್ವಕರ್ಮರು ಮಾನವನ ಶ್ರೇಯೋಭಿವೃದ್ಧಿಗಾಗಿ ಶ್ರೇಷ್ಠ ಜೀವನ ಮಾರ್ಗ ತೋರಿಸಿಕೊಟ್ಟವರು. ಅಂತವರ ಮೂಲ ಪುರುಷನೇ ವಿಶ್ವಕರ್ಮ ಪರಮಾತ್ಮನಾಗಿದ್ದಾನೆ. ಸೃಷ್ಟಿ ನಿರ್ಮಾಣ ಕತೃವಾಗಿದ್ದು ಸಕಲಕರ್ಮಗಳಿಗೂ ಅವನೇ ಒಡೆಯನಾಗಿದ್ದಾನೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಶಿವಾನಂದ ಜೀನ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜ್ಞಾನ ಮತ್ತು ವಿಜ್ಞಾನಗಳಿಂದ ಆವೃತವಾದ ವಿಶ್ವಕರ್ಮನು ಆತ್ಮ ಸಂಸ್ಕೃತಿಯ ಪ್ರತೀಕ, ವಿಶ್ವಕರ್ಮ ಪರಮಾತ್ಮನೆಂದರೆ ಅದೊಂದು ಲೋಕತತ್ವ ಎಂದರು.
ಇದೆ ಸಂದರ್ಭದಲ್ಲಿ ನಗರಸಭೆ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಗೆ ಬಿಜೆಪಿ ನಗರ ಮಂಡಲದಿAದ ಸನ್ಮಾನಿಸಲಾಯಿತು. ಬಿಜೆಪಿ ಸದಸ್ಯತ್ವ ಅಭಿಯಾನದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಲಾಯಿತು.
ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವ್, ಮುಖಂಡರಾದ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೇನವರ, ಗುಂಡುರಾವ ಶಿಂದೆ, ವಿಶ್ವಕರ್ಮ ಸಮಾಜದ ಅಧ್ಯಕ್ಷÀ ಮೌನೇಶ ಪತ್ತಾರ, ರಾಜು ನಾಯ್ಕರ್, ಬಸವರಾಜ ಯಂಕAಚಿ, ಸತ್ಯನಾರಾಯಣ ಹೇಮಾದ್ರಿ ಇತರರಿದ್ದರು.