ಬಾಗಲಕೋಟೆ
ನಗರದ ನವನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಲಾಗಿದೆ.
ಅಂಜುಮನ್ ಸಂಸ್ಥೆಯ ಉತ್ಸವ ಆಯೋಜನೆ ಸಮಿತಿ ಸಂಘಟಕರಾದ ಜಿ.ಎ.ಢಾಲಾಯತ್, ಯೂಸುಫ್ ಬಿಳೇಕುದರಿ, ಆಸೀಫ್ ಬೇನೂರ, ಸಿಕಂದರ ಗೊಳಸಂಗಿ ಅವರ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಮಾಜದಲ್ಲಿ ಸಾಮರಸ್ಯ ಹದಗೆಡಿಸಲು ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಸೆ.೧೮ ರಂದು ನವನಗರದಲ್ಲಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಯುವಕನೊಬ್ಬ ಪ್ಯಾಲೆಸ್ತೀನ್ ಧ್ವಜದೊಂದಿಗೆ ನರ್ತಿಸಿದ ವಿಡಿಯೋ ಬೆಳಕಿಗೆ ಬಂದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮತ್ತೊಂದು ವಿಡಿಯೋ ವೈರಲ್
ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಇದು ಹಳೆಯ ಬಾಗಲಕೋಟೆಯಲ್ಲಿ ಸೆ.೧೬ ರಂದು ಆಯೋಜಿಸಿದ್ದ ಮೆರವಣಿಗೆಯ ವಿಡಿಯೋ ಎನ್ನಲಾಗಿದೆ. ಯುವಕನೊಬ್ಬ ಪ್ಯಾಲೆಸ್ತೀನ್ ಧ್ವಜದೊಂದಿಗೆ ನರ್ತಿಸುತ್ತ ವೃತ್ತಾಕಾರವಾಗಿ ಚಲಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
—-