ಬಾಗಲಕೋಟೆ:
ಸಿಎಂ ಸಿದ್ದರಾಯ್ಯ ರಾಜಿನಾಮೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕ ದಿಂದ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟಣೆ ಜರುಗಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಮಹೇಶ ತೆಂಗಿನಕಾಯಿ ರಾಜ್ಯಪಾಲರಿಗೂ ಗೊಬ್ಯಾಕ್ ಎಂದು ಅವಮಾನ ಮಾಡುವಂತಕ್ಕೆ ಕಾಂಗ್ರೆಸ್ಸಿನವರು ನಡೆದುಕೊಂಡರು, ಆದರೆ ರಾಜ್ಯದ ಉಚ್ಚ ನ್ಯಾಯಾಲಯ ತೀರ್ಪು ರಾಜ್ಯಪಾಲರ ಕ್ರಮ ಸೂಕ್ತವಾಗಿದ್ದು ನ್ಯಾಯದ ಪರಾವಾಗಿದೆ, ತೀರ್ಪಿಗೆ ಗೌರವ ಕೊಟ್ಟ ಕೂಡಲೆ ರಾಜಿನಾಮೆ ನಿಡಬೇಕು,
ಇದೂ ಮೂಡಾ ಹಗರಣ ಅಷ್ಟೆ, ವಾಲ್ಮೀಕಿ ಹಗರಣ ಬಾಕಿ ಇದೆ, ನಾವೂ ಪ್ರತಿಭಟಣೆ ಮೂಲಕ ಆಗ್ರಹ ಮಾಡುತ್ತೆವೆ ತೀರ್ಪಿಗೆ ತಲೆ ಬಾಗಿ ಸಿಎಂ ಸ್ಥಾನಕ್ಕೆ ರಾಜಿನಾಮೇ ನೀಡಿ ತನಿಖೆ ಸಹಕರಿಸಿ ಎಂದರು
ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಮಾತನಾಡಿ ಸಿದ್ದರಾಮಯ್ಯ ಹಾಗೂ ಇಡಿಕಾಂಗ್ರೆಸ್ಸ್ ಸರಕಾರ ಇದರಲ್ಲಿ ನೇರ ಭಾಗಿಯಾಗಿದೆ, ಇದು ವಯಕ್ತಿತ ಲಾಭಮಾಡಿಕೊಳ್ಳುವ ಕಾಂಗ್ರೆಸ್ಸ ಸರಕಾವಾಗಿದೆ ಇದರಿಂದ ಸಿದ್ದರಾಮಯ್ಯನನವರಿಗೆ ರಾಜಿನಾಮೆ ಅನಿವಾರ್ಯ, ಜನರಪರವಾಗಿ ಆಡಳಿತ ಇಲ್ಲ ಎಂದು ಸಾಬಿತು ಆಗಿದ್ದರಿಂದ ಅನಿವಾರ್ಯವಾಗಿ ನಾವು ಬಿದಿಗಿಳಿದು ಹೋರಾಟಮಾಡುವುದಾಗಿದೆ,
ಸಿದ್ದರಾಮಯ್ಯನವರು ಎಲ್ಲಿವರೆಗೂ ರಾಜಿನಾಮೆ ಕೋಡುವುದಿಲ್ಲವೋ ಅಲ್ಲಿವರೆಗೆ ಇದು ನೀರಂತರ ಹೋರಾಟ ಇರುತ್ತದೆ, ಆ ನೀಟ್ಟಿನಲ್ಲಿ ಕೂಡಲೆ ರಾಜಿನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಬಿಜಿಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ ಹಿಂದೂಳಿದ ವರ್ಗಗಳ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ತೀರ್ಪಿಗೆ ಗೌರವ ಕೋಟ್ಟು ರಾಜಿªನಾಮೆ ಕೊಟ್ಟು ತನಿಖೆಗೆ ಸಹಕರಿಸಿ, ಕಾಂಗ್ರೆಸ್ಸ ಸರಕಾರ ಹಲವಾರು ಸಚಿವರ ಮೇಲೆ ಹಗರಣಗಳು ಬೆಳಕಿಗೆ ಬರುತ್ತಿವೆ, ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರ ಮೇಲು ಇಂದು ಹಗರಣ ಬಯಲಾಗುತ್ತಿದೆ, ಇದನೆಲ್ಲವನ್ನೂ ನೋಡಿದರೆ ಈ ಸರಕಾರ ರಾಜ್ಯದಲ್ಲಿ ಬಹಳದಿನ ನಿಲ್ಲೋದಿಲ್ಲಾ ಎಂದರು.
ಪ್ರತಿಭಟಣೆ ಶಿವಾನಂದ ಜೀನನಿಂದ ಮೇರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಣೆ ಮಾಡಲಾಯಿತು. ಪ್ರತಿಭಟಣೆಯಲ್ಲಿ ಬಿಜೆಪಿ ಮುಖಂಡರಾದ ಜಿ.ಎನ್.ಪಾಟೀಲ. ಡಾ.ಎಂ.ಎಸ್.ದಡ್ಡೆನ್ನವರ. ಲಕ್ಷ್ಮೀ ನಾರಾಯಣ ಕಾಸಟ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಜ್ಯೋತಿ ಭಜಂತ್ರಿ, ಶಶಿಕಲಾ ಮಜ್ಜಗಿ, ಸುರೇಶ ಕೊಣ್ಣೂರ, ಬಸವರಾಜ ಹುನಗುಂದ,ಶಿವಾನಂದ ಟವಳಿ, ಸತ್ಯನಾರಾಯಣ ಹೆಮಾದ್ರಿ, ರಾಜು ಮುದೇನೂರ, ಮುತ್ತಣ್ಣ ಬೆಣ್ಣೂರ, ಸೇರಿಂದತೆ ಅನೇಕರು ಭಾಗವಹಿಸಿದ್ದರು.