This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Education NewsLocal NewsState News

ನವನಗರ ಅಂಗಡಿಕಾರರಿಗೆ ಬಿಟಿಡಿಎ ಗಡುವು

ನವನಗರ ಅಂಗಡಿಕಾರರಿಗೆ ಬಿಟಿಡಿಎ ಗಡುವು

ನವನಗರ ಅಂಗಡಿಕಾರರಿಗೆ ಬಿಟಿಡಿಎ ಗಡುವು

ಬಿಟಿಡಿಎ ನಡೆ-ಸ್ವಚ್ಛತೆ ಕಡೆ ಜಾಥಾಕ್ಕೆ ಡಿಸಿ ಚಾಲನೆ

ಚರಂಡಿಗೆ ಕಸ ಎಸೆದರೆ ಅಂಗಡಿ ಲೈಸನ್ಸ ರದ್ದು

ಮೊದಲ ಹಂತದ ಕಾರ್ಯಾಚರಣೆ ಆರಂಭ

ಬಾಗಲಕೋಟೆ :

ಸ್ವಚ್ಛ ಹಾಗೂ ಮಾದರಿ ನವನಗರವನ್ನಾಗಿ ರೂಪಿಸಲು ಬಿಟಿಡಿಎ ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ನವನಗರದ ಪ್ರತಿಯೊಂದು ಅಂಗಡಿಕಾರರು, ಕಸವನ್ನು ಡಬ್ಬಿಗೆ ಹಾಕಿ, ಕಸ ಸಂಗ್ರಹ ವಾಹನಗಳಿಗೆ ಕೊಡಬೇಕು. ಒಂದು ವೇಳೆ ಕಸವನ್ನು ಚರಂಡಿಗೆ ಹಾಕಿದರೆ, ಅಂತಹ ಅಂಗಡಿಗಳ ಪರವಾನಿಗೆ ರದ್ದುಪಡಿಲಾಗುವುದು ಎಂದು ಬಿಟಿಡಿಎ ಮುಖ್ಯ ಎಂಜಿನಿಯರ್ ಡಿ. ಬಸವರಾಜ ತಿಳಿಸಿದ್ದಾರೆ.

ರವಿವಾರ ನವನಗರದ ಕಲಾ ಭವನದಿಂದ ಆರಂಭಗೊಂಡು, ಅಂಬೇಡ್ಕರ ಭವನದ ಬಳಿ ಮುಕ್ತಾಯಗೊಂಡ ಬಿಟಿಡಿಎ ನಡೆ- ಸ್ವಚ್ಛತೆ ಕಡೆ ಜಾಗೃತಿ ಜಾಥಾ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಇದು ಮೊದಲ ಹಂತ :

ನವನಗರವನ್ನು ಸ್ವಚ್ಛವಾಗಿಡಲು ಎಲ್ಲ ರೀತಿಯ ಪ್ರಯತ್ನ ನಡೆದಿದೆ. ಸ್ವಚ್ಛತೆ, ಕಸ ಸಂಗ್ರಹಕ್ಕಾಗಿ ಏಜನ್ಸಿ ಇವೆ. ಮನೆ ಮನೆ ಹಾಗೂ ಅಂಗಡಿಗಳ ಕಸ ಸಂಗ್ರಹಕ್ಕೆ ನಮ್ಮ ಟ್ಯಾಕ್ಟರ್‌ಗಳು ಬಂದರೂ, ಇಂದಿಗೂ ಹಲವಾರು ಜನ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕಸವನ್ನು ಡಬ್ಬಿಗೆ ಹಾಕುವ ಬದಲು, ಚರಂಡಿಗೆ ಹಾಕುತ್ತಿದ್ದಾರೆ.

ಇದರಿಂದ ಮಳೆ ಬಂದಾಗ, ಚರಂಡಿಗಳು ಬ್ಲಾಕ್ ಆಗಿ, ರಸ್ತೆಯ ತುಂಬ ಗಲೀಜು ನೀರು ಹರಿಯುತ್ತದೆ. ಇದು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಸ್ವಚ್ಛ ಮಾದಗಿ ನವನಗರಕ್ಕಾಗಿ ಬಿಟಿಡಿಎ ನಡೆ- ಸ್ವಚ್ಛತೆ ಕಡೆ ಎಂಬ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ. ಯೂನಿಟ್-೧ರ ವ್ಯಾಪ್ತಿಯ ಜನರಲ್ಲಿ ಮೊದಲು ಜಾಗೃತಿ ಮೂಡಿಸಲಾಗುವುದು.

ಅಷ್ಟಕ್ಕೂ ಜನರು ಸ್ಪಂದಿಸದಿದ್ದರೆ, ಅವರ ಮನೆ-ಅಂಗಡಿಗಳಿಂದ ಕಸ ಸಂಗ್ರಹವನ್ನೇ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು. ಇದು ಮೊದಲ ಹಂತ. ಇದಕ್ಕೆ ನವನಗರದ ಅಂಗಡಿಕಾರರು, ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ವಾರದ ಗಡವು :

ನವನಗರದ ಎಲ್ಲ ಅಂಗಡಿಕಾರರು, ಇನ್ನು ಮುಂದೆ ಕಡ್ಡಾಯವಾಗಿ ಕಸವನ್ನು ಡಬ್ಬಿಗೆ ಹಾಕಬೇಕು. ಚರಂಡಿಗೆ ಹಾಕಿದರೆ ಅಂತಹ ಅಂಗಡಿಗಳ ಪರವಾನಿಗೆ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಕಸ ಸಂಗ್ರಹ ಏಜನ್ಸಿಯವರು, ಪ್ರತಿ ಅಂಗಡಿಗೂ ನೋಟಿಸ್ ನೀಡಿ, ತಿಳವಳಿಕೆ ನೀಡಬೇಕು.

ಸ್ವಚ್ಛತೆ ಎಂಬುದು ಕೇವಲ ಬಿಟಿಡಿಎ ಜವಾಬ್ದಾರಿಯಲ್ಲ. ಜನರ ಸಹಕಾರ-ಸಹಭಾಗಿತ್ವವೂ ಬೇಕು. ಇದನ್ನು ಅವರಿಗೆ ಮನದಟ್ಟು ಮಾಡಬೇಕು. ಅಷ್ಟಕ್ಕೂ ಸಹಕಾರ ನೀಡದಿದ್ದರೆ, ಅನಿವಾರ್ಯವಾಗಿ ಅಂಗಡಿಗಳ ಪರವಾನಿಗೆ ರದ್ದುಗೊಳಿಸುವ ಜತೆಗೆ, ಅವರ ಅಂಗಡಿಗಳ ಕಸ ಸಂಗ್ರಹ ಕೂಡ ಸ್ಥಗಿತಗೊಳಿಸಲಾಗುವುದು ಎಂದರು.

ಮೊದಲ ಹಂತದಲ್ಲಿ ಅಂಗಡಿಕಾರರಿಗೆ ಅನ್ವಯಿಸಲಾಗುವುದು. ಬಳಿಕ ಪ್ರತಿ ಸೆಕ್ಟರ್‌ಗಳಿಗೆ ಜನರಿಗೂ ತಿಳಿಸಿ, ಹಸಿ-ಕಸ ಒಣ ಕಸ ಪ್ರತ್ಯೇಕಿಸಿ, ವಾಹನಕ್ಕೆ ಹಾಕಲು ತಿಳಿಸಲಾಗುವುದು. ಜನರೂ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಕೋರಿದರು.

ಜನರ ಸಹಕಾರ ಅಗತ್ಯ :

ಬಿಟಿಡಿಎ ನಡೆ-ಸ್ವಚ್ಛತೆ ಕಡೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಸ್ವಚ್ಛತೆ ಎಂಬುದು ನಿತ್ಯವೂ ನಮ್ಮನ್ನು ನಾವು ಕಾಪಾಡಿಕೊಳ್ಳುವ ಆಯುಧ. ನಾವು ವೈಯಕ್ತಿವಾಗಿ ಮನೆ, ದೇಹ ಸ್ವಚ್ಛವಾಗಿಟ್ಟುಕೊಂಡು, ಶುಭ್ರಗೊಳ್ಳುತ್ತೇವೆ. ಆದರೆ, ಮನೆಯ ಮುಂದಿನ ಆವರಣ, ಚರಂಡಿ, ರಸ್ತೆಗಳೆಂದರೆ ಅಸಡ್ಡೆ ತೋರಿ, ಎಲ್ಲೆಂದರಲ್ಲಿ ಕಸ ಎಸೆಯುವ ಪರಿಪಾಠ ನಡೆದಿದೆ. ಇದರಿಂದ ನಮ್ಮ ಆರೋಗ್ಯಕ್ಕೇ ತೊಂದರೆ ಬರಲಿದೆ ಎಂಬ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಬರಬೇಕು.

ಸ್ವಚ್ಛತೆ ಎಂಬುದು ಕೇವಲ ಒಂದು ದಿನ ಮಾಡಿ, ಬಿಡುವುದಲ್ಲ. ನಿತ್ಯವೂ ನಡೆಯುವ ಪ್ರಕ್ರಿಯೆ ಇದಕ್ಕೆ ಜನರ ಸಹಕಾರ ಇಲ್ಲದೇ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ನವನಗರದ ಜನರು, ಸ್ವಚ್ಛತೆಗಾಗಿ ಬಿಟಿಡಿಎ ಜತೆಗೆ ಸಹಕಾರ ನೀಡಬೇಕು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಸಭಾಪತಿ ಯಲ್ಲಪ್ಪ ನಾರಾಯಣಿ, ಸದಸ್ಯರಾದ ಹಾಲೇಶ ಬಳ್ಳಾರಿ, ಪ್ರಕಾಶ ಹಂಡಿ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಬಿಟಿಡಿಎ ಪ್ರಭಾರಿ ಸೂಪರಿಡೆಂಟ್ ಎಂಜಿನಿಯರ್ ಎಸ್.ಎಸ್. ಡೊಳ್ಳಿ ಕಾರ್ಯಪಾಲಕ ಎಂಜಿನಿಯರ್ ವಿಜಯಶಂಕರ ಹೆಬ್ಬಳ್ಳಿ, ಮುಖ್ಯ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಶೆಲ್ಲಿಕೇರಿ, ಪುನರವಸತಿ ಅಧಿಕಾರಿ ಸುನೀಲ‌ ದೊಡಮನಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಸೋಮಲಿಂಗ ನೋಟಗಾರ, ಬಿ.ಎಂ. ಹಾಲರವ, ರುದ್ರೇಶ ವಟವಟಿ, ಪ್ರಶಾಂತ ಲೋಕಾಪುರ, ರಾಜಕುಮಾರ ರಾಠೋಡ, ಸುರೇಶ ತೆಗ್ಗಿ, ಮೇಘರಾಜ ಪೂಜಾರ, ವಿಶ್ವನಾಥ ನೀಲನ್ನವರ, ರವಿ ಕೋಮಾರ, ಕಾಂತಾ ದೇಶಪಾಂಡೆ, ಮುಖಂಡರಾದ ಶಂಕರ ತಪಶೆಟಿ, ರಾಜು ಹುಲ್ಯಾಳ, ಮಹೇಶ ಗದ್ದನಕೇರಿ ಮುಂತಾದವರು ಉಪಸ್ಥಿತರಿದ್ದರು.

";