This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Education NewsLocal NewsState News

ಉಪಕಾರ ಮತ್ತು ಕೃತಘ್ನತೆ ಹಿಂದೂ ಧರ್ಮ ವಿಶಿಷ್ಟ ಗುಣ : ಡಾ.ವೀರಣ್ಣ ಚರಂತಿಮಠ

ಉಪಕಾರ ಮತ್ತು ಕೃತಘ್ನತೆ ಹಿಂದೂ ಧರ್ಮ ವಿಶಿಷ್ಟ ಗುಣ : ಡಾ.ವೀರಣ್ಣ ಚರಂತಿಮಠdefault

*ಬಿ.ವಿ.ವಿ.ಸಂಘದಲ್ಲಿ ಆಯುಧ ಪೂಜೆ ವೈಭವ: ಸಂಘದ ಎಲ್ಲ ವಾಹನಗಳಿಗೂ ಏಕಕಾಲಕ್ಕೆ
ಪೂಜೆ

ಬಾಗಲಕೋಟೆ;

ಉಪಕಾರ ಮತ್ತು ಕೃತಘ್ನತೆ ಹಿಂದೂ ಧರ್ಮ ವಿಶಿಷ್ಟವಾದ ಗುಣವಾಗಿದ್ದು, ಆಯುಧಗಳನ್ನು ಪೂಜೆ ಸಲ್ಲಿಸುವ ಮೂಲಕ ಅವುಗಳಿಗೆ ಕೃತಘ್ನತೆಯನ್ನು ಸಲ್ಲಿಸುವ ಪರಂಪರೆ ನಮ್ಮ ದೇಶದಲ್ಲಿದೆ ಎಂದು ಮಾಜಿ ಶಾಸಕರು ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಬಿ.ವಿ.ವಿ.ಸಂಘದ ಆಟದ ಮೈದಾನದಲ್ಲಿ ಶುಕ್ರವಾರ ಬಿ.ವಿ.ವಿ.ಸಂಘದ ಅಟೋಮೋಭೈಲ ವಿಭಾಗದಿಂದ ಹಮ್ಮಿಕೊಂಡ ಆಯುಧ ಪೂಜೆಯಲ್ಲಿ ಸಂಘದ ಎಲ್ಲ ವಾಹನಗಳಿಗೆ ಏಕಕಾಲಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ನಮ್ಮ ಬದುಕು ಅತ್ಯಂತ ಸುಖಮಯವಾಗಲು, ಉತ್ಕೃಷ್ಟವಾಗಿರಲು ಯಾವ ಯಾವ ಸಂಗತಿ ನಮಗೆ ಸಹಾಯ ಸಲ್ಲಿಸಿದೆಯೋ ಅವುಗಳನ್ನು ಸ್ಮರಣೆ ಮಾಡುವಂತ ಪರಂಪರೆ ನಮ್ಮ ದೇಶದಲ್ಲಿದೆ, ಅದಕ್ಕಾಗಿ ನಮ್ಮ ಬದುಕಿಗಾಗಿ ಶಸ್ತç ಹಾಗೂ ಯಂತ್ರ ಮತ್ತು ಸಾಧನಗಳಿಗೆ ಉಪಕಾರ ಸ್ಮರಿಸುವ ಹಿನ್ನೆಲೆಯಲ್ಲಿ ನಾವೂ ಶತ್ರಾತ್ತ್ರಗಳು, ಆಯುಧಗಳು,ಯಂತ್ರಗಳು,ರೈತಪರ ಸಲಕರಣೆಗಳನ್ನಿಟ್ಟು ಅವುಗಳನ್ನು ಪೂಜೆ ಸಲ್ಲಿಸುವ ಮೂಲಕ ಅವುಗಳಿ ಕೃತಘ್ನತೆಯನ್ನು ಸಲ್ಲಿಸುವ ಪರಂಪರೆ ನಮ್ಮ ದೇಶದಲ್ಲಿದೆ,

ಅಲ್ಲದೆ ವಿಜಯದ ಸಂಕೇತವಾಗಿ ಆಯುಧ ಪೂಜೆಯನ್ನು ಮಾಡಲಾಗುತ್ತಿದ್ದು, ರಾವಣನನ್ನು ಶ್ರೀರಾಮ ಸಂಹಾರ ಮಾಡಿದ ದಿನ, ಶ್ರೀರಾಮ ಅಯೋದ್ಯಗೆ ಮರಳಿದ ದಿನ, ಪಾಂಡವರು ವನವಾಸ ಪೂರೈಸಿ ಹಸ್ತಿನಾಪುರಕ್ಕೆ ಬಂದ ದಿನವಾಗಿದ್ದು, ದುಷ್ಟ ಶಕ್ತಿಯ ಸಂಹಾರ ಮಾಡಿದ ದಿನವಾಗಿದ್ದರಿಂದ ಈ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತಿದೆ ಎಂದರು.

ಬಿ.ವಿ.ವಿ.ಸಂಘದ 160ಕ್ಕೂ ಹೆಚ್ಚು ವಾಹನಗಳಿಗೆ ಏಕಕಾಲದಲ್ಲಿ ಪೂಜೆ ಸಲ್ಲಿಸಲಾಯಿತು, ನಂತರ ಎಲ್ಲ ವಾಹನಗಳು ಸಂಘದ ಮೈಧಾನದಿಂದ ವಿದ್ಯಾಗಿರಿ ಇಂಜಿನೀಯರಿಂಗ್ ಕಾಲೇಜು ಮೈಧಾನದವರೆಗೆ ರೋಡ ಶೋ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಜಿ.ಎನ್.ಪಾಟೀಲ, ಲಕ್ಷ್ಮೀ ನಾರಾಯಣ ಕಾಸಟ್, ಅಶೋಕ ಕರಡಿ, ಸಿ.ಜಿಗಜಿನ್ನಿ, ಎಸ್.ಆರ್.ಮನಹಳ್ಳಿ, ಪ್ರಭುಸ್ವಾಮಿ ಸರಗಣಾಚಾರಿ, ಸಂಗಣ್ಣ ಕಲಾದಗಿ, ಗುರುಬಸವ ಸೂಳಿಬಾವಿ, ಮಲ್ಲಿಕಾರ್ಜುನ ಸಾಸನೂರ, ಮಹಾಂತೇಶ ಶೆಟ್ಟರ, ಶೇಖರಪ್ಪ ಪಟ್ಟಣಶೆಟ್ಟಿ, ಶಿವಕುಮಾರ ಹಿರೇಮಠ, ಎಸ್.ಎಸ್.ಮೊರಬದ,ಶರಣಪ್ಪ ಗುಳೆದ.ಬಿ.ಸಿ.ಇಂಡಿ ಸೇರಿದಂತೆ ಅಟೋಮೋಬೈಲ್ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.

 

";